ನಿಮ್ಮ ಬೆತ್ತಲೆ ವಿಡಿಯೋ ಇದೆ ಎಂದು ಬಿಜೆಪಿ ಮುಖಂಡಗೆ ಬೆದರಿಕೆ ಬೆದರಿಸಿ ಮಹಿಳೆಯೊಬ್ಬಳು 31 ಸಾವಿರ ರುಪಾಯಿ ಸುಲಿಗೆ ಮಾಡಿರುವ ಘಟನೆ 

ಬೆಂಗಳೂರು (ಆ.22): ನಿಮ್ಮ ಬೆತ್ತಲೆ ವಿಡಿಯೋ ಇದೆ ಎಂದು ಬಿಜೆಪಿ ಮುಖಂಡ ಚಿನಾ ರಾಮು ಅವರಿಗೆ ಬೆದರಿಸಿ ಮಹಿಳೆಯೊಬ್ಬಳು 31 ಸಾವಿರ ರುಪಾಯಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. 

ಕೆಲ ದಿನಗಳ ಹಿಂದೆ ಫೇಸ್ ಬುಕ್ ಮೂಲಕ ರಾಮು ಅವರನ್ನು ಪರಿಚಯಿಸಿಕೊಂಡ ಆರೋಪಿ ಚಾಟಿಂಗ್ ನಡೆಸಿ ಸಲುಗೆ ಬೆಳೆಸಿಕೊಂಡಿದ್ದಾಳೆ. ಬಳಿಕ ವಾಟ್ಸಾಪ್‌ ನಂಬರ್ ಪಡೆದ ಆಕೆ ವಿಡಿಯೊ ಕಾಲ್ ಮಾಡಿ ಅಸಭ್ಯವಾಗಿ ನಡೆದುಕೊಂಡಿದ್ದಳು. 

ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವ ವಿಡಿಯೋ ಮಾಡಿದ ಕಾಮಿ ಡಾಕ್ಟರ್!

ಕೆಲ ದಿಮಗಳ ಬಳಿಕ ರಾಮು ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋಗಳಿವೆ. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಮರ್ಯಾದೆ ಕಳೆಯುತ್ತೇವೆ. ನೀನು ಹಣ ಕೊಡಬೇಕು ಎಂದಿದ್ದ. 

ಈ ಮಾತಿಗೆ ಬೆದರಿದ ರಾಮು ಅವರು ಹಂತ ಹಂತವಾಗಿ 31 ಸಾವಿರ ನೀಡಿದ್ದು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.