ಚಿಕ್ಕಮಗಳೂರು: ನಗರಸಭೆ ಸಾಮಾನ್ಯ ಸಭೆಯಲ್ಲಿ ಗಲಾಟೆ, ಧರಣಿ ಕುಳಿತ ಬಿಜೆಪಿ, ಜೆಡಿಎಸ್ ಸದಸ್ಯರು

ಸಭೆ ಆರಂಭವಾಗಿ ಹಿಂದೆ ನಡೆದ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಅನುಪಾಲನಾ ವರದಿಯ ಚರ್ಚೆಯ ನಂತರ ಇಂದಿನ ಸಭೆಯ ಅಜೆಂಡಾದ ಚರ್ಚೆ ಆರಂಭವಾಗುತ್ತಿದ್ದಂತೆ ಬಹುಮತದ ಗೊಂದಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳ ನಡುವೆ ಆರೋಪ ಪ್ರತ್ಯಾರೋಪಗಳ ಚರ್ಚೆಯೊಂದಿಗೆ ಗದ್ದಲದ ಗೂಡಾಗಿ ಸಭೆ ಪರಿವರ್ತನೆಯಾಯಿತು.

BJP JDS Members Held Protest in City Council General Assembly in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಡಿ.20): ಚಿಕ್ಕಮಗಳೂರು ನಗರಸಭೆಯ ಜಮಾ-ಖರ್ಚು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ಪಡೆಯಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ಬಹುಮತವಿಲ್ಲದೆ ವಿವೇಚನಾಧಿಕಾರ ಬಳಸಿ ನಿರ್ಣಯಗಳನ್ನು ಅಂಗೀಕರಿಸಿದ ನಗರಸಭಾ ಅಧ್ಯಕ್ಷರ ನಿರ್ಧಾರವನ್ನು ಖಂಡಿಸಿ, ಬಿಜೆಪಿ ಸದಸ್ಯರುಗಳು ಧರಣಿ ಕುಳಿತು ಪ್ರತಿಭಟನೆ ನಡೆಸಿದ ಪ್ರಸಂಗ ನಗರ ಸಭೆಯಲ್ಲಿ ಇಂದು ನಡೆಯಿತು. 

ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಕೋರಂ ಸಮಬಲ ಇದ್ದುದರಿಂದ ಅಧ್ಯಕ್ಷರ ವಿವೇಚನಾಧಿಕಾರ ಬಳಸಿ ಜಮಾ-ಖರ್ಚು ಸೇರಿದಂತೆ ವಿವಿಧ ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಯಿತು.         

ಇಡೀ ದೇಶಕ್ಕೆ ಕರ್ನಾಟಕ ಪೊಲೀಸ್ ಮಾದರಿ: ಗೃಹ ಸಚಿವ ಪರಮೇಶ್ವರ್

ಸಭೆ ಅಂತ್ಯದಲ್ಲಿ ನಂಬರ್ ಗಲಾಟೆ ನಗರಸಭೆ ಅಧ್ಯಕ್ಷರ ವಿರುದ್ಧ ಘೋಷಣೆ :  

ಸಭೆ ಆರಂಭವಾಗಿ ಹಿಂದೆ ನಡೆದ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಅನುಪಾಲನಾ ವರದಿಯ ಚರ್ಚೆಯ ನಂತರ ಇಂದಿನ ಸಭೆಯ ಅಜೆಂಡಾದ ಚರ್ಚೆ ಆರಂಭವಾಗುತ್ತಿದ್ದಂತೆ ಬಹುಮತದ ಗೊಂದಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳ ನಡುವೆ ಆರೋಪ ಪ್ರತ್ಯಾರೋಪಗಳ ಚರ್ಚೆಯೊಂದಿಗೆ ಗದ್ದಲದ ಗೂಡಾಗಿ ಸಭೆ ಪರಿವರ್ತನೆಯಾಯಿತು.

ಈ ಗದ್ದಲದ ಚರ್ಚೆಯಲ್ಲಿ ಹಿಂದಿನ 5 ತಿಂಗಳ ಜಮಾ-ಖರ್ಚಿನ ಬಗ್ಗೆ ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಸಭೆಯ ಅನುಮೋದನೆ ಕೇಳಿದಾಗ ಬಿಜೆಪಿ ಸದಸ್ಯರಾದ ಟಿ.ರಾಜಶೇಖರ್, ಜೆಡಿಎಸ್ನ ಎ.ಸಿ ಕುಮಾರ್ಗೌಡ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿ ತಿಂಗಳು ಸದಸ್ಯರಿಗೆ ಜಮಾ-ಖರ್ಚಿನ ವಿವರ ನೀಡಬೇಕಾಗಿದ್ದು 5 ತಿಂಗಳ ಜಮಾ-ಖರ್ಚಿನ ವಿವರಗಳನ್ನು ಸಭೆಗೆ ತಂದಿರುವುದರಿಂದ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸೆಕ್ಯೂಲರಿಸಂ ಮಡಿವಂತಿಕೆ ಗಾಳಿಗೆ ತೂರಿ ಭಜರಂಗಿ ದತ್ತಮಾಲಾ ಧರಿಸಿದ ಕೈ ಶಾಸಕ ಹೆಚ್.ಡಿ. ತಮ್ಮಯ್ಯ!

ಶಾಸಕರ ಸಲಹೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಎದ್ದುನಿಂತು ಮೇಜು ಗುದ್ದಿ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಇಂದಿನ ಎಲ್ಲಾ ನಿರ್ಣಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರೂಲಿಂಗ್ ನೀಡಿದ ಸಭಾಧ್ಯಕ್ಷರ ವರಸಿದ್ಧಿ ವೇಣುಗೋಪಾಲ್ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು. ಅವರನ್ನು ಹಿಂಬಾಲಿಸಿ ಶಾಸಕರ ಸಹಿತ ಕಾಂಗ್ರೆಸ್ ಸದಸ್ಯರುಗಳು ಸಭೆಯಿಂದ ನಿರ್ಗಮಿಸಿದರು.

ಸಭೆಯನ್ನು ಮೊಟಕುಗೊಳಿಸಿ ತೆರಳುತ್ತಿದ್ದಂತೆಯೇ ಆಕ್ರೋಶಗೊಂಡ ಬಿಜೆಪಿ ಸದಸ್ಯರು ನಗರಸಭಾ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗುತ್ತಾ ಸಭಾಂಗಣದಲ್ಲಿಯೇ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದರು.

Latest Videos
Follow Us:
Download App:
  • android
  • ios