Asianet Suvarna News Asianet Suvarna News

ಬಿಜೆಪಿ, ಜೆಡಿಎಸ್‌ ಅಲ್ಪಸಂಖ್ಯಾತರ ವಿರೋಧಿ: ಸಿದ್ದು

  ಬಿಜೆಪಿ ನೇರವಾಗಿ ಅಲ್ಪಸಂಖ್ಯಾತರನ್ನು ವಿರೋಧಿಸಿದರೆ ಜೆಡಿಎಸ್‌ ಒಳಗೊಳಗೆ ವಿರೋಧಿಸುತ್ತದೆ ಎಂದು ಎರಡೂ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

BJP JDS anti minority  Siddaramaiah snr
Author
First Published Jan 25, 2023, 5:30 AM IST

 ತುಮಕೂರು :  ಬಿಜೆಪಿ ನೇರವಾಗಿ ಅಲ್ಪಸಂಖ್ಯಾತರನ್ನು ವಿರೋಧಿಸಿದರೆ ಜೆಡಿಎಸ್‌ ಒಳಗೊಳಗೆ ವಿರೋಧಿಸುತ್ತದೆ ಎಂದು ಎರಡೂ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತುಮಕೂರಿನ ಗಾಜಿನಮನೆಯಲ್ಲಿ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದು ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿಗಾಗಲಿ, ಜೆಡಿಎಸ್‌ಗಾಗಲಿ ಯಾವುದೇ ಸೈದ್ದಾಂತಿಕ ಬದ್ಧತೆಯಿಲ್ಲ ಎಂದು ಟೀಕಿಸಿದರು.

ಕೋಮುವಾದಿ ಪಕ್ಷವಾದ ಬಿಜೆಪಿ ಧರ್ಮ ಧರ್ಮಗಳ ನಡುವೆ ಎತ್ತಿಕಟ್ಟಿಯಾರನ್ನು ನೆಮ್ಮದಿಯಾಗಿ ಬಳಲು ಬಿಡುವುದಿಲ್ಲ. ಸಮಾನತೆ, ಸಹಬಾಳ್ವೆ, ಮನುಷ್ಯತ್ವಕ್ಕೆ ಬಿಜೆಪಿ ಯಾವತ್ತೂ ವಿರೋಧ ಎಂದು ಟೀಕಿಸಿದರು.

ಹಲಾಲ್‌, ಹಿಜಾಬ್‌, ಹಬ್ಬ, ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದನ್ನು ನೋಡಿದರೆ ಬಿಜೆಪಿ ಅಲ್ಪಸಂಖ್ಯಾತರ ವಿರೋಧ ಎಂಬುದು ತಿಳಿಯುತ್ತದೆ. ಯಾವುದೇ ಧರ್ಮ ಮನುಷ್ಯ, ಮನುಷ್ಯರನ್ನು ಪ್ರೀತಿ ಮಾಡು ಅನ್ನುತ್ತದೆ. ಕೊಲೆ ಮಾಡು, ಹಿಂಸೆ ಮಾಡು ಅಂತ ಧರ್ಮಗಳು ಹೇಳುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ದ್ವೇಷದ ರಾಜಕಾರಣವನ್ನು ಹರಡಿದೆ. ಆತಂಕದಲ್ಲಿ ಬದುಕುವ ಪರಿಸ್ಥಿತಿ ಇದ್ದು ಇದು ಮುಂದುವರೆಯಬಾರದೆಂದು ಬಿಜೆಪಿ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯರಿ ಎಂದರು.

ಸ್ಯಾಂಟ್ರೋ ರವಿಯನ್ನು ಕಣ್ಣೊರೆಸಲು ಹಿಡಿದರು:

ಕಾಂಗ್ರೆಸ್‌ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದಿದ್ದರಿಂದ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್‌ಗೆ ಬೆಂಬಲ ಕೊಟ್ಟೆವು ವಿನಃ ಕುಮಾರಸ್ವಾಮಿ ಜನೋಪಕಾರಿ ಮುಖ್ಯಮಂತ್ರಿ ಅಂತ ಕೊಡಲಿಲ್ಲ ಎಂದರು. ಈ ಸರ್ಕಾರ ಬರೀ ಲಂಚದ್ದು. ಪೊಲೀಸರು ದುಡ್ಡು ಕೊಟ್ಟರೆ ಮಾತ್ರ ಒಳ್ಳೊಳ್ಳೆ ಠಾಣೆ ಕೊಡ್ತಾರೆ ಎಂದ ಸಿದ್ದರಾಮಯ್ಯ ಸ್ಯಾಂಟ್ರೋ ರವಿಯನ್ನು ಕಣ್ಣೊರೆಸುವುದಕ್ಕೆ ಹಿಡಿದರು. ಪೊಲೀಸ್‌ ಕಸ್ಟಡಿಗೆ ಕೇಳಿ ಅರ್ಜಿ ಹಾಕಲೇ ಇಲ್ಲ ಎಂದರು.

ಈ ದೇಶದಲ್ಲಿ ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್‌ ಮೋದಿ ಮಾತ್ರ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದರು, 2 ಕೋಟಿ ಉದ್ಯೋಗ ಕೊಡುತ್ತೇನೆಂದರು ಕೊಡಲಿಲ್ಲ. 15 ಲಕ್ಷ ಹಣವನ್ನು ನಿಮ್ಮ ಖಾತೆಗೆ ಹಾಕ್ತೀವಿ ಅಂದ್ರು, ಎಲ್ಲಿ ಬಂತು ಅಚ್ಚಾ ದಿನ್‌ ಎಂದು ವ್ಯಂಗ್ಯವಾಡಿದರು. ರೈತ ವಿರೋಧಿ 3 ಕಾನೂನು ಮಾಡಿ ಬಳಿಕ ರೈತರು ದೆಹಲಿ ಹೊರವಲಯದಲ್ಲಿ ಮಾಡಿದ ಪ್ರತಿಭಟನೆಗೆ ಮೋದಿ ನಡುಗಿ ವಾಪಸ್‌ ಪಡೆದರು ಎಂದರು.

ನಾವು ಅಧಿಕಾರಕ್ಕೆ ಬಂದಾಗ ತಲಾದಾಯ ತುಮಕೂರಲ್ಲಿ 43,687 ಇತ್ತು. ನಾವು ಅಧಿಕಾರ ಬಿಟ್ಟಾಗ 1,74,884 ಆಗಿತ್ತು. ಈಗ ಎಷ್ಟಿದೆ ಎಂದರೆ 1,84,000 ರು .5 ವರ್ಷಗಳಲ್ಲಿ 9,200 ರು. ಮಾತ್ರ ಜಾಸಿಯಾಗಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ಯಾರಿಗೂ ಮೆಜಾರಿಟಿ ಕೊಡಲಿಲ್ಲ. 113 ಸ್ಥಾನ ಗೆಲ್ಲಬೇಕು. ಬಿಜೆಪಿ ಗೆದ್ದದ್ದು 104, ನಾವು 80 ಸ್ಥಾನ ಗೆದ್ದವು. ಆದರೆ ಶೇ.ವಾರು ಮತ ನೋಡಿದರೆ ಬಿಜೆಪಿಗಿಂತ ನಾವು ಮುಂದೆ ಇದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಜನರ ದುಃಖ ದುಮ್ಮಾನ ಅರಿತು ಪರಿಹಾರ ನೀಡಲು ಈ ಯಾತ್ರೆ ಕೈಗೊಳ್ಳಲಾಗಿದೆ. ರೈತರಿಗೆ, ಯುವಕರಿಗೆ, ವ್ಯಾಪಾರಿಗಳಿಗೆ, ಮಹಿಳೆಯರಿಗೆ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬಲು ಈ ಯಾತ್ರೆ ಸಹಕಾರಿ. ಈ ದೇಶದಲ್ಲಿ ಅಚ್ಚೇ ದಿನ್‌ ತರ್ತೀವಿ ಅಂದ್ರು, ಎಲ್ಲಿ ಬಂದಿದೆ ಎಂದ ಅವರು ಕೋವಿಡ್‌ ಸಂದರ್ಭದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಏನಾದರೂ ಪರಿಹಾರ ಕೊಟ್ಟಿತಾ ಎಂದು ಪ್ರಶ್ನಿಸಿದ ಅವರು ಇದು ಕೊನೆ ಆಗಬೇಕು. ಇನ್ನು 45 ದಿವಸ ಮಾತ್ರ ಈ ಸರ್ಕಾರ ಇರುತ್ತದೆ. ಆಮೇಲೆ ನಿಮ್ಮ ಸರ್ಕಾರ ಬರುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಂಡ್ಯ, ತುಮಕೂರು, ಕೋಲಾರದಲ್ಲಿ ನಾವು ಗೆದ್ದೆವು. ಇದು ಪ್ರಜ್ಞಾವಂತರು ಹಾಕಿರುವ ಮತ. ಹೀಗಾಗಿ ಇದು ದಿಕ್ಸೂಚಿ ಎಂದರು.

ಮಹಿಳೆಯರು ಪ್ರಣಾಳಿಕೆ ಕೇಳಿದರು. ಪರಮೇಶ್ವರ್‌ ಅವರನ್ನು ಪ್ರಣಾಳಿಕೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪರಮೇಶ್ವರ್‌ ಬರೆದುಕೊಟ್ಟರು, ಪ್ರಿಯಾಂಕ ಗಾಂಧಿ ಒಪ್ಪಿದರು, ಖರ್ಗೆ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಎಲ್ಲರೂ ತೀರ್ಮಾನಿಸಿ ಮಹಿಳೆಯರಿಗೆ ಮನೆ ಖರ್ಚಿಗೆ 2 ಸಾವಿರ ರು. ಹಾಕುವ ತೀರ್ಮಾನ ಕೈಗೊಂಡ್ವಿ ಎಂದರು. ನಮ್ಮನ್ನು ವಿಧಾನಸಭೆಯಲ್ಲಿ ಕೂರಿಸಿದರೆ ಮಾತು ತಪ್ಪದೇ ಜಾರಿ ಮಾಡುತ್ತೇವೆ ಎಂದರು. ಗೃಹಲಕ್ಷ್ಮಿ ಹೆಸರು ಕೇಳಿದ ತಕ್ಷಣ ಬಿಜೆಪಿಗೆ ಪಿಲಪಿಲ, ಎಚ್‌ಡಿಕೆಗೆ ಢವಢವ ಎಂದು ವ್ಯಂಗ್ಯವಾಡಿದರು.

ಬರೀ ಜಿಲ್ಲಾ ಕೇಂದ್ರಕ್ಕಷ್ಟೆಅಲ್ಲ, ತಾಲೂಕು ಕೇಂದ್ರಗಳಿಗೂ ಪ್ರವಾಸ ಮಾಡುತ್ತೇವೆ. ಮೊದಲ ಸುತ್ತಿನಲ್ಲಿ ನಾನು ಹಳೆ ಮೈಸೂರು ಭಾಗಕ್ಕೆ ಬರುತ್ತೇನೆ. ಎರಡನೇ ಸುತ್ತಿನಲ್ಲಿ ಸಿದ್ದರಾಮಯ್ಯ, ಈಗ ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ನಾನು ದಕ್ಷಿಣ ಕರ್ನಾಟಕಕ್ಕೆ ಹೋಗುವುದಾಗಿ ತಿಳಿಸಿದರು.

ನಾವು ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿ ನುಡಿದಂತೆ ನಡೆದವು. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಿರಲ್ಲಿ ಶೇ.10ರಷ್ಟನ್ನು ಈಡೇರಿಸಿಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸೋಣ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ 11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಿಂದ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು.

ಸಿದ್ದರಾಮಯ್ಯ ಮಾಜಿ ಸಿಎಂ

ಗುಬ್ಬಿಯ ಶ್ರೀನಿವಾಸ್‌ ಹಾಗೂ ಅರಸೀಕೆರೆ ಶಿವಲಿಂಗೇಗೌಡರ ತೀರ್ಮಾನ ಎಲ್ಲರಿಗೂ ಗೊತ್ತು. ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ಗುಬ್ಬಿಯ ವಾಸು ಹೆಜ್ಜೆ ಹಾಕಿ ಶಕ್ತಿ ನೀಡಿದರು. ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ, ನಮ್ಮ ದಾರಿ ನಾವು ನೋಡಿಕೊಳ್ಳಬೇಕು ಹಾಗೂ ರಾಜ್ಯದ ಅಭಿವೃದ್ಧಿ ಮಾಡಬೇಕು ಅಂತ ವೈ.ಎಸ್‌.ವಿ ದತ್ತಾ, ವೀರಪ್ಪ ಗೌಡ್ರು ಮಧು ಬಂಗಾರಪ್ಪ, ಶ್ರೀನಿವಾಸ್‌ ಗೌಡ ಎಲ್ಲರೂ ಕಾಂಗ್ರೆಸ್‌ ಸೇರಿದ್ದಾರೆ.

ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ

Follow Us:
Download App:
  • android
  • ios