Asianet Suvarna News Asianet Suvarna News

ವೈದ್ಯರ ಹಾಜರಾತಿ ಮೇಲೆ ನಿಗಾಕ್ಕೆ ಬಯೋಮೆಟ್ರಿಕ್‌

ವೈದ್ಯರ ಹಾಜರಾತಿ ಮೇಲೆ ನಿಗಾ ಇಡಲು ಮತ್ತು ಖಾಸಗಿಯಾಗಿ ಕಾರ್ಯ ನಿರ್ವಹಿಸುವ ಸರ್ಕಾರಿ ವೈದ್ಯರಿಗೆ ಕಡಿವಾಣ ಹಾಕಲು ಬಯೋಮೆಟ್ರಿಕ್‌ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

Biometric system in Hospitals For Doctors Attendance snr
Author
First Published Oct 29, 2022, 5:06 AM IST

  ಮೈಸೂರು (ಅ.29):  ವೈದ್ಯರ ಹಾಜರಾತಿ ಮೇಲೆ ನಿಗಾ ಇಡಲು ಮತ್ತು ಖಾಸಗಿಯಾಗಿ ಕಾರ್ಯ ನಿರ್ವಹಿಸುವ ಸರ್ಕಾರಿ ವೈದ್ಯರಿಗೆ ಕಡಿವಾಣ ಹಾಕಲು ಬಯೋಮೆಟ್ರಿಕ್‌ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ (Govt)  ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್‌ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು. ಇದಕ್ಕಾಗಿ ಬಯೋ ಮೆಟ್ರಿಕ್‌ ಪದ್ಧತಿ ಜಾರಿಗೆ ತರಲಾಗುವುದು. ಆಗ ಬೆಳಗ್ಗೆ, ಮಧಾಹ್ನ ಮತ್ತು ಸಂಜೆ ವೈದ್ಯರು ಬಯೋಮೆಟ್ರಿಕ್‌ ಮಾಡಬೇಕು ಎಂದರು.

ಆರೋಗ್ಯ ಕರ್ನಾಟಕ (Karnataka) ಯೋಜನೆಯಡಿ 4.80 ಕೋಟಿ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ ನೀಡುವ ಗುರಿ ಇದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಗ್ರಾಮ ಒನ್‌ ಕೇಂದ್ರಗಳ ಮೂಲಕ ವಿತರಿಸುವ ಗುರಿ ಹೊಂದಿದ್ದೇವೆ ಎಂದ ಅವರು ಹೇಳಿದರು.

ಇನ್ನು, ಡಯಾಲಿಸಿಸ್‌ ಸೇವೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸುವ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಸಂಬಂಧಿಸಿದ ಕಾಲೇಜುಗಳ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು 2030 ರೊಳಗೆ ಭಾರತವನ್ನು ಕ್ಷಯ ಮುಕ್ತ ಭಾರತ ಅಭಿಯಾನ ಹಮ್ಮಿಕೊಂಡಿದ್ದು, ಕರ್ನಾಟಕದಲ್ಲಿ 2025 ಕ್ಕೆ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.

.‘ಜಿಯೋ ಟ್ಯಾಗ್‌’ ನೀಡುವ ಚಿಂತನೆ

ಅನೇಕ ಸರ್ಕಾರಿ ವೈದ್ಯರು ಕರ್ತವ್ಯದ ಬಳಿಕ, ಮತ್ತೆ ಕೆಲವರು ಕರ್ತವ್ಯದ ವೇಳೆಗೆ ಖಾಸಗಿಯಾಗಿ ಅಭ್ಯಾಸ ಮಾಡುವುದು ಸರ್ಕಾರದ ಗಮನಕ್ಕೆ ಬಂದಿದೆ. ವೈದ್ಯರ ಕಾರ್ಯಕ್ಷಮತೆ ಹೆಚ್ಚಬೇಕಾದರೆ ವೈದ್ಯರು ಖಾಸಗಿಯಾಗಿ ಅಭ್ಯಾಸ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಕರ್ತವ್ಯ ಮುಗಿದ ವೈದ್ಯರಿಗೆ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಕ್ಟೀಸ್‌ ಮಾಡಲು ಅವಕಾಶ ಕಲ್ಪಿಸುತ್ತೇವೆ. ಅಲ್ಲದೆ ಜಿಯೋ ಟ್ಯಾಗ್‌ ನೀಡಲು ಚಿಂತಿಸಿದ್ದೇವೆ ಎಂದು ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸಿಡಿದೆದ್ದ ವೈದ್ಯರ ಸಂಘ

ಭಾರತದ ಬಹುತೇಕ ಎಲ್ಲಾ ಕ್ಷೇತ್ರದಲ್ಲಿದ್ದ ವಿಐಪಿ ಸಂಸ್ಕೃತಿಗೆ ಬ್ರೇಕ್ ಬೀಳುತ್ತಿದೆ.  ಖುದ್ದು ಪ್ರಧಾನಿ ನರೇಂದ್ರ ಭಾರತದ ವಿಐಪಿ ಸಂಸ್ಕೃತಿ ವಿರುದ್ಧ ಹಲವು ಬಾರಿ ಮಾತನಾಡಿದ್ದರು. ಇದೀಗ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವಿಐಪಿ ಸಂಸ್ಕೃತಿ ಜಾರಿಗೆ ತರಲಾಗಿದೆ. ಈ ಕುರಿತು ಏಮ್ಸ್ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.  ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಸಂಸದರಿಗೆ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಚಿಕಿತ್ಸೆಗೆ ಏಮ್ಸ್ ನಿರ್ದೇಶಕರು ಆದೇಶಿದ್ದಾರೆ. ಈ ವಿಐಪಿ ಸಂಸ್ಕೃತಿ ವಿರುದ್ಧ ದೆಹಲಿ ವೈದ್ಯರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಸದರು, ರಾಜಕಾರಣಿಗಳು ಚಿಕಿತ್ಸೆಗೆ ಬಂದಾಗ ಇತರ ಯಾವುದೇ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಬಾರದು. ಪ್ರಧಾನಿ ನರೇಂದ್ರ ಮೋದಿ ವಿಐಪಿ ಸಂಸ್ಕೃತಿ ಅಂತ್ಯಗೊಳಿಸಲು ಕರೆ ನೀಡಿದ್ದಾರೆ. ಆದರೆ ಏಮ್ಸ್‌ನಲ್ಲಿ ಹೊಸದಾಗಿ ವಿಐಪಿ ಸಂಸ್ಕೃತಿಯನ್ನ ತರಲಾಗಿದೆ ಎಂದು ವೈದ್ಯರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಏಮ್ಸ್(AIIMS Delhi) ನಿರ್ದೇಶಕ ಡಾ. ಎಂ ಶ್ರೀನಿವಾಸ್ ಲೋಕಸಭಾ ಜಂಟಿ ಕಾರ್ಯದರ್ಶಿ ಕಂದಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ವಿಐಪಿ ಸಂಸ್ಕೃತಿ(VIP Culture) ಕುರಿತು ನಿರ್ದೇಶ ನೀಡಿರುವ ಮಾಹಿತಿಯನ್ನ ತಿಳಿಸಲಾಗಿದೆ ಒಪಿಡಿ(OPD) ವಿಭಾಗದಲ್ಲಿ ಸಂಸದರಿಗೆ ತುರ್ತು ಚಿಕಿತ್ಸೆ, ತುರ್ತು ತಪಾಸಣೆ, ಆಸ್ಪತ್ರೆ ದಾಖಲಿಸುವಿಕೆ ಸೇರಿದಂತೆ ಹಲವು ಸೇವೆಗಳನ್ನು  ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್( SOP) ಚಿಕಿತ್ಸೆ ನೀಡಲು ಆದೇಶಿಲಾಗಿದೆ ಎಂದು ಪತ್ರ ಬರೆದಿದ್ದಾರೆ. ಇದು ವಿವಾದಕ್ಕೆ ಕಾರಣಾಗಿದೆ.

ಸರ್ಕಾರಿ ಶಾಲಾ, ಕಾಲೇಜಿನಲ್ಲಿ ವಿದ್ಯಾಭ್ಯಾಸ; ಇಂದು ದೆಹಲಿಯ ಪ್ರತಿಷ್ಠಿತ AIIMS ನಿರ್ದೇಶಕರಾಗಿ ನೇಮಕ!

ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಶನ್ (FORDA) ಹಾಗೂ ಆಲ್ ಇಂಡಿಯಾ ಮೆಡಿಕಲ್ ಡಾಕ್ಟರ್ ಅಸೋಸಿಯೇಶನ್(FAIMA) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಪಿಐ ಸಂಸ್ಕೃತಿಯನ್ನು ವಿರೋಧಿಸುತ್ತೇವೆ. ಒಬ್ಬರಿಗೆ ಇನ್ಯಾವುದೋ ಸವಲುತ್ತು ಇದೆ ಅನ್ನೋ ಕಾರಣಕ್ಕೆ ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೆ ಸಮಸ್ಯೆ ಆಗಬಾರದು. ಹೀಗಾಗಿ ಸಂಸದರಿಗೆ SOP ವಿಧಾನದ ಚಿಕಿತ್ಸೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು (FORDA) ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದರೆ ಏಮ್ಸ್ ನಿರ್ದೇಶಕರು ವಿಐಪಿ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಆಸ್ಪತ್ರೆಯಲ್ಲೂ ವಿಐಪಿ ಸಂಸ್ಕೃತಿ ತರುವ ಪ್ರಯತ್ನವನ್ನು ಖಂಡಿಸುತ್ತೇವೆ ಎಂದು FAIMA ಹೇಳಿದೆ. ಇಷ್ಟೇ ಅಲ್ಲ ಹಲವು ವೈದ್ಯರು ಏಮ್ಸ್ ಆಸ್ಪತ್ರೆಯ ವಿಐಪಿ ಸಂಸ್ಕೃತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 

AIIMS Hospital: ಕರ್ನಾಟಕಕ್ಕೆ ದಿಲ್ಲಿ ಮಾದರಿ ಏಮ್ಸ್‌ ಆಸ್ಪತ್ರೆ: ಕೇಂದ್ರ ಭರವಸೆ

ಹಾಲಿ ಸಂಸದರಿಗೆ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡುವ SOP ವಿಧಾನ ಅವಶ್ಯತೆ ಇಲ್ಲ ಅನ್ನೋ ಕೂಗೂ ಹೆಚ್ಚಾಗುತ್ತಿದೆ. ಹಲವರು ಇದರ ವಿರುದ್ಧ ಮಾತನಾಡಿದ್ದಾರೆ.  

Follow Us:
Download App:
  • android
  • ios