ಬೀದಿನಾಯಿ ಗುಪ್ತಾಂಗ ಕತ್ತರಿಸಿ ಸಂಭೋಗ ಮಾಡುತ್ತಿದ್ದ ವಿಕೃತ ಕಾಮಿ; ಪೊಲೀಸರಿಗೆ ಒಪ್ಪಿಸಿದ ಜಯನಗರ ಜನತೆ!
ಬೆಂಗಳೂರಿನಲ್ಲಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ನಾಯಿಯ ಮರ್ಮಾಂಗವನ್ನು ಕೊಯ್ದು ಸಂಭೋಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರು (ಮಾ.14): ಬೀದಿ ನಾಯಿಗಳಿಗೆ ಆಹಾರ ಹಾಕುವುದಾಗಿ ಬಂದು ಅವುಗಳನ್ನು ಹಿಡಿದುಕೊಂಡು ನಿರ್ಜನ ಪ್ರದೇಶದಲ್ಲಿ ಎಳೆದೊಯ್ದು, ಗುಪ್ತಾಂಕ ಕತ್ತರಿಸಿ ಗುದ ಸಂಭೋಗ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಶ್ವಾನದ ಮೇಲೆ ವಿಕೃತಿ ಮೆರೆದ ಆರೋಪ ಕೇಳಿಬಂದಿದೆ. ಶ್ವಾನದ ಮರ್ಮಾಂಗ ಕೊಯ್ದ ಸಂಭೋಗ ಮಾಡಿದ ಆರೋಪವನ್ನು ಜಯನಗರ ನಿವಾಸಿಗಳು ಮಾಡಿದ್ದಾರೆ. ಈ ಘಟನೆ ಬೆಂಗಳೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್‌ನ ಬಳಿ ನಡೆದಿದೆ. ಜಯನಗರದ ಸುತ್ತ ಮುತ್ತ ವಿದ್ಯಾ ಎನ್ನುವ ಮಹಿಳೆ ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಇಂದು ಬೆಳಗ್ಗೆ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಈ ವೇಳೆ ಶ್ವಾನದ ಜೊತೆ ಸಂಭೋಗ ಮಾಡುತ್ತಿದ್ದ ವ್ಯಕ್ತಿ ಇವರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆಗ ಆತನನ್ನು ಕೂಗುತ್ತಿದ್ದಂತೆ ಅಲ್ಲಿ ನಾಯಿಯನ್ನು ಬಿಟ್ಟು ಓಡಿ ಹೋಗಿದ್ದಾರೆ.
ನಂತರ ಮಹಿಳೆ ವಾಯು ವಿಹಾರ ಮಾಡುತ್ತಿದ್ದ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾಳೆ. ನಂತರ, ವ್ಯಕ್ತಿಯ ದಾಳಿಗೆ ಒಳಗಾಗಿದ್ದ ನಾಯಿಯನ್ನು ಮಹಿಳೆ ರಕ್ಷಣೆ ಮಾಡಿ, ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಚಿಕಿತ್ಸೆ ಮಾಡಿಸಿದ್ದಾರೆ. ಇಂದು ಸಂಜೆ ಪುನಃ ಶಾಲಿನಿ ಎನ್ನುವ ಮಹಿಳೆ ಕೆಲವು ಶ್ವಾನಪ್ರಿಯರೊಂದಿಗೆ ಸೇರಿಕೊಂಡು ಇದೇ ಮೈದಾನದ ಬಳಿ ತೆರಳಿದ್ದಾರೆ. ಈ ವೇಳೆ ಬೆಳಗ್ಗೆ ನಾಯಿಯೊಂದಿಗೆ ಸಂಭೋಗ ಮಾಡುತ್ತಿದ್ದ ಅದೇ ವ್ಯಕ್ತಿಯನ್ನ ನೋಡಿದ್ದಾರೆ. ನಂತರ ಸ್ಥಳೀಯರೆಲ್ಲ ಸೇರಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆತನನ್ನು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?
ಪಶು ಆಸ್ಪತ್ರೆಯಲ್ಲಿ ನಾಯಿಗೆ ಚಿಕಿತ್ಸೆ: ಇನ್ನು ಬೀದಿಯಲ್ಲಿ ಹೆಣ್ಣು ನಾಯಿಗಳ ಮೇಲೆ ಈತ ಕ್ರೌರ್ಯ ಮೆರೆದಿದ್ದಲ್ಲದೇ ಗಂಡು ನಾಯಿಗಳನ್ನೂ ಹಿಡಿದು ಸಂಭೋಗ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈತ ಬೀದಿ ನಾಯಿಯ ಬಾಲ, ಕಾಲು ಹಾಗೂ ಮರ್ಮಾಂಗ ಸೇರಿದಂತೆ ವಿವಿಧ ಭಾಗಗಳಲ್ಲಿ ಕೊಯ್ದಿರುವುದು ಕಂಡುಬಂದಿದೆ. ನಾಯಿ ಗಾಯಗಳಿಂದ ಬಳಲುತ್ತಿದ್ದರೂ ಅದನ್ನು ಈತ ಲೆಕ್ಕಿಸದೇ ಸಂಭೋಗ ಮಾಡಿ ಹೋಗುತ್ತಿದ್ದಾನೆ ಎಂದು ಶ್ವಾನ ಪ್ರಿಯರು ಆರೋಪಿಸಿದ್ದಾರೆ.