ಮಂಗಳೂರಿನಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣದೊಂದಿಗೆ ಪರಾರಿ ಪ್ರಕರಣಕ್ಕೆ ಟ್ವಿಸ್ಟ್  ಮನೆ ಮಗಳ ಮೇಲೆ 22 ವರ್ಷಗಳ ಬಳಿಕ ತವರು ಮನೆಯವರು ರಿವೇಂಜ್

ಮಂಗಳೂರು (ಸೆ.09): ಮಂಗಳೂರಿನಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣದೊಂದಿಗೆ ಪರಾರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮನೆ ಮಗಳ ಮೇಲೆ 22 ವರ್ಷಗಳ ಬಳಿಕ ತವರು ಮನೆಯವರು ರಿವೇಂಜ್ ತೀರಿಸಿಕೊಂಡಿದ್ದಾರೆ. ಇದೊಂದು ಪಕ್ಕಾ ಸಿನಿಮಾ ಕತೆಯಂತೆ ಕಂಡು ಬಂದಿದೆ. 

ಅಂತರ್ ಧರ್ಮಿಯ ವಿವಾಹವಾದ ತಂಗಿ ವಿರುದ್ಧ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಮಂಗಳೂರಿನಲ್ಲಿ ಒಂದು ವಿಚಿತ್ರ ಲವ್ ಮ್ಯಾರೇಜ್ ರಿವೇಂಜ್ ಕತೆಯಾಗಿದೆ. 

ಪ್ರೀತಿಸಿದವಳು ದೂರ.. ಪೊಲೀಸರ ಹೆಸರು ಬರೆದಿಟ್ಟು ರಾಯಚೂರು ಯುವಕ ಸುಸೈಡ್!

ಕಳೆದ 22 ವರ್ಷಗಳ ಹಿಂದೆ ಆಂತರ್ ಧರ್ಮದ‌ ಹುಡುಗನ ಜೊತೆ ಹಜರತ್ ವಿವಾಹವಾಗಿದ್ದರು. ಬಳಿಕ ಯಶೋದ ಎಂದು ತಮ್ಮ ಹೆಸರು ಬದಲಿಸಿಕೊಂಡು ಜೀವನ ನಡೆಸುತ್ತಿದ್ದರು.

ವೀರೇಶ್-ಯಶೋಧ ದಂಪತಿಗೆ 21 ವರ್ಷದ ಮಗಳಿದ್ದು, ಕೆಲ ದಿನಗಳ ಹಿಂದೆ ನಿಶ್ಚಿತಾರ್ಥವಾದ ಬಳಿಕ ಯಶೋಧ ಮಗಳು ಪರಾರಿಯಾಗಿದ್ದಳು. ಅಕ್ಬರ್ ಎಂಬಾತನ ಜೊತೆ ಆಕೆ ಎಸ್ಕೇಪ್ ಆಗಿದ್ದು, ಆತ ಯಶೋಧ (ಹಜರತ್)ಅಕ್ಕನ ಮಗನಾಗಿದ್ದಾನೆ. ತವರು ಮನೆಯವರು ಅಂದಿನ ಲವ್ ಮ್ಯಾರೇಜ್ ಗೆ ಈಗ ರಿವೇಂಜ್ ತೀರಿಸಿಕೊಂಡಿದ್ದಾರೆ. 

1 ಲಕ್ಷ ಬೆಲೆಬಾಳುವ ಒಂದು ಚಿನ್ನದ ಸರ, 50 ಸಾವಿರ ರೂ ಬೆಲೆಬಾಳುವ ಉಂಗುರ, ಕಿವಿಯೋಲೆ ಮತ್ತು ಬೆಳ್ಳಿ ಕಾಲು ಗೆಜ್ಜೆ ತೆಗೆದುಕೊಂಡು ಪರಾರಿಯಾಗಿದ್ದು, ಮನೆಯ ಅಕೌಂಟ್ ನಲ್ಲಿದ್ದ 90 ಸಾವಿರ ಹಣವನ್ನು ಅಕ್ಬರ್ ಹೆಸರಿಗೆ ವರ್ಗಾಯಿಸಿದ್ದಾಳೆ. 

ಪೊಲೀಸರು ಸಂಪರ್ಕಿಸಿದಾಗ ನಾನು ಮೇಜರ್ ಎಂದು ಯುವತಿ ಹೇಳಿದ್ದು, ಈ ಸಂಬಂಧ ಇದೀಗ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.