ಬೀದರ್‌-ಬೆಂಗಳೂರು ವಿಮಾನ ಸೇವೆ ಸಮಯ ಬದಲಾವಣೆ

ಆದಷ್ಟು ಬೇಗ ವಾರಪೂರ್ತಿ ಬೆಳಿಗ್ಗೆ ಹೊರಡುವ ಹಾಗೆ ವ್ಯವಸ್ಥೆ ಮಾಡುತ್ತೇನೆ ಮತ್ತು ಬೀದರ್‌ನಿಂದ ದೇಶದ ಬೇರೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೆ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಶೀಘ್ರದಲ್ಲಿ ಬೀದರ್‌ನಿಂದ ಹೊಸ ವಿಮಾನಯಾನ ಸೇವೆಯೂ ಜನತೆಗೆ ಲಭ್ಯವಾಗಲಿದೆ: ಭಗವಂತ ಖೂಬಾ 

Bidar Bengaluru Flight Timings Change grg

ಬೀದರ್‌(ಮೇ.18):  ಬೀದರ್‌ ಜನತೆಯ ಮಹಾದಾಸೆಯಂತೆ, ಬೀದರ್‌-ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯ ಸಮಯ ಬದಲಾವಣೆ ಮಾಡಿಸಿದ್ದೇನೆ. ಎಲ್ಲಾ ಜನರು ಈ ಸಮಯ ಬದಲಾವಣೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನರಲ್ಲಿ ಕೋರಿದ್ದಾರೆ.

ಸದ್ಯ ಬೀದರ್‌ನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಂಗಳೂರಿನಿಂದ ಬೆಳಗ್ಗೆ 8.05 ಗಂಟೆಗೆ ಹೊರಟು ಬೆಳಗ್ಗೆ 9.15ಕ್ಕೆ ಬೀದರ್‌ ತಲುಪಲಿದೆ ಮತ್ತೆ ಬೆ. 9.40ಕ್ಕೆ ಬೀದರ್‌ನಿಂದ ಹೊರಟು ಬೆಳಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದೆ.

ನನ್ನ ವಿರುದ್ಧ ಖೂಬಾ ಸಂಚು: ಬಿಜೆಪಿ ಸಂಸದನ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಭು ಚವ್ಹಾಣ್!

ಉಳಿದ ನಾಲ್ಕು ದಿನಗಳು ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರದಂದು ಎಂದಿನಂತೆ ಸಾಯಂಕಾಲ 04.20ಕ್ಕೆ ಬಂದು ಸಾ. 4.45ಕೆ ಹೊರಟು ಸಾ. 05.50ಕ್ಕೆ ಬೆಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.
ಆದಷ್ಟು ಬೇಗ ವಾರಪೂರ್ತಿ ಬೆಳಿಗ್ಗೆ ಹೊರಡುವ ಹಾಗೆ ವ್ಯವಸ್ಥೆ ಮಾಡುತ್ತೇನೆ ಮತ್ತು ಬೀದರ್‌ನಿಂದ ದೇಶದ ಬೇರೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೆ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಶೀಘ್ರದಲ್ಲಿ ಬೀದರ್‌ನಿಂದ ಹೊಸ ವಿಮಾನಯಾನ ಸೇವೆಯೂ ಜನತೆಗೆ ಲಭ್ಯವಾಗಲಿದೆ ಎಂದು ಸಚಿವರು ಜನತೆಗೆ ತಿಳಿಸಿದ್ದಾರೆ.

ವಿಶೇಷ ರೈಲಿನ ವ್ಯವಸ್ಥೆ:

ಬೇಸಿಗೆ ನಿಮಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆಯಾಗಿದ್ದು, ಮೇ 18ರಂದು (ರೈಲು ಸಂಖ್ಯೆ 07187) ಮಧ್ಯಾಹ್ನ 03.50ಕ್ಕೆ ಕಾಚಿಗೂಡದಿಂದ ಹೊರಟು ಸಿಕಿಂದ್ರಾಬಾದ, ಬೆಗಂಪೇಟ, ವಿಕರಾಬಾದ, ಜಹೀರಾಬಾದ ಮಾರ್ಗವಾಗಿ ಸಾ. 07.25ಕ್ಕೆ ಬೀದರ್‌, ರಾತ್ರಿ 8ಕ್ಕೆ ಭಾಲ್ಕಿಯಿಂದ ಉದಗೀರ, ಲಾತೂರ ರೋಡ ಮಾರ್ಗವಾಗಿ ನಗರಸೋಲ್‌ಗೆ ಮೇ 19ರಂದು ಮರುದಿನ ಬೆಳಿಗ್ಗೆ. 7 ಗಂಟೆಗೆ ತಲುಪಲಿದೆ.

ಅದೇ ದಿನ ಮೇ 19ರಂದು ರಾತ್ರಿ 8 ಗಂಟೆಗೆ ನಗರಸೋಲ್‌ನಿಂದ ಹೊರಟು ಬಂದ ಮಾರ್ಗವಾಗಿ ಮರುದಿನ ಮೇ 20ರಂದು ಬೆ. 6.20ಕ್ಕೆ ಭಾಲ್ಕಿ ಬೆ. 7 ಗಂಟೆಗೆ ಬೀದರ್‌ ತಲುಪಿ, ಬೆ. 11.35ಕ್ಕೆ ಕಾಚಿಗೂಡ ತಲಪಲಿದೆ.
ಪ್ರಯುಕ್ತ ಕ್ಷೇತ್ರದ ಜನತೆಯ ವಿಮಾನಯಾನದ ಸಮಯ ಬದಲಾವಣೆಯ ಮತ್ತು ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳಬೇಕೆಂದು ಜನತೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios