Asianet Suvarna News Asianet Suvarna News

ಮಡಿಕೇರಿ: ಹೊಸ ರಸ್ತೆ ಮೇಲೆ ಮತ್ತೊಮ್ಮೆ ಭೂಮಿ ಪೂಜೆ..!

ಹೊಸ ರಸ್ತೆ ಮೇಲೆ ಮತ್ತೊಮ್ಮೆ ಭೂಮಿ ಪೂಜೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಹೊಸ ರಸ್ತೆ ಮೇಲೆ ಶಾಸಕರು ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಯಾಕೆ..? ಏನಾಯ್ತು..? ಇಲ್ಲಿ ಓದಿ.

Bhoomi pooja in newly constructed road at madikeri
Author
Bangalore, First Published Mar 1, 2020, 2:28 PM IST

ಮಡಿಕೇರಿ(ಮಾ.01): ಹೊಸ ರಸ್ತೆ ಮೇಲೆ ಮತ್ತೊಮ್ಮೆ ಭೂಮಿ ಪೂಜೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ನಿರ್ಮಿಸಿದ ಹೊಸ ರಸ್ತೆ ಮೇಲೆ ಶಾಸಕರು ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದ್ದಾರೆ. 

ರಸ್ತೆ ಕಾಮಗಾರಿ ಕಳಪೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿ ಕಳಪೆ ಕಾರಣ ಮತ್ತೆ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ಹೊಸ ರಸ್ತೆ ಮೇಲೆ ಶಾಸಕ ಅಪ್ಪಚ್ಚು ರಂಜನ್ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಲಾರಿ-ಬಸ್ ಡಿಕ್ಕಿ, ಇಬ್ಬರು ಸಾವು, 10 ಜನಕ್ಕೆ ಗಾಯ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊತ್ತನಳ್ಳಿ ಗ್ರಾಮದಲ್ಲಿ 1.25 ಕಿಮೀ ಉದ್ದದ ರಸ್ತೆ ಕಾಮಗಾರಿ ನಡೆದಿತ್ತು. ಗುತ್ತಿಗೆದಾರ ಎಚ್.ಎನ್.ರಾಜೇಂದ್ರ ಅವರು ರಸ್ತೆ ನಿರ್ಮಿಸಿದ್ದರು. ನಿರ್ಮಾಣದ ಎರಡೇ ದಿನದಲ್ಲಿ ರಸ್ತೆ ಕಿತ್ತು ಹೋಗಿತ್ತು.

ಕೊತ್ತನಳ್ಳಿ ಗ್ರಾಮಸ್ಥರು ಈ ಬಗ್ಗೆ ಶಾಸಕರಿಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ‌ ಹಿನ್ನೆಲೆ ಶಾಸಕರು ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದಾರೆ. ಕಳಪೆಯಾಗಿದ್ದರಿಂದ ಕಾಮಗಾರಿಗೆ ಭಾನುವಾರ ಮರು ಚಾಲನೆ ನೀಡಿದ್ದಾರೆ.

Follow Us:
Download App:
  • android
  • ios