ಇಂಡಿ(ಅ.2): ಭೀಮಾತೀರದ ಹಂತಕ ಎಂದೇ ಕುಖ್ಯಾತಿ ಪಡೆ​ದಿ​ರುವ ಭಾಗಪ್ಪ ಹರಿಜನನ ಪತ್ನಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಸಂಭ​ವಿ​ಸಿದೆ.

ವಿಜ​ಯ​ಪುರ ನಗರ ನಿವಾ​ಸಿ ಶೋಭಾ ಬಜಂತ್ರಿ (45) ಮೃತಪಟ್ಟ ಮಹಿಳೆ. ಇಂಡಿ ತಾಲೂಕಿನ ಕಪನಿಂಬರಗಿ ಕ್ರಾಸ್‌ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ್‌ ಟೆಂಪೋ ಹಾಗೂ ಮಹಿಂದ್ರ ಎಕ್ಸ್‌ಯೂ ಕಾರ್‌ ಮಧ್ಯೆ ಸಂಭ​ವಿ​ಸಿದ ರಸ್ತೆ ಅಪಘಾತದಲ್ಲಿ ಭಾಗ​ಪ್ಪನ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೋಭಾ ಇದ್ದ ಕಾರು ಝಳಕಿ ಕಡೆ​ಯಿಂದ ವಿಜ​ಯ​ಪು​ರದ ಕಡೆಗೆ ಹೊರ​ಟಿ​ದ್ದಾಗ ಈ ದುರ್ಘಟನೆ ಸಂಭವಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸೋಲಾಪೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೂಡ್ಸ್‌ ಟೆಂಪೋ ಚಾಲಕನಿಗೂ ಗಾಯವಾಗಿದ್ದು, ಪ್ರಾಣಾ​ಪಾಯದಿಂದ ಪಾರಾ​ಗಿ​ದ್ದಾನೆ. 

ಮೃತಪಟ್ಟ ಶೋಭಾ ಬಜಂತ್ರಿ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರಧಾನ ನ್ಯಾಯಾಲಯದಲ್ಲಿ ಎಪಿಪಿ (ಅಸಿ​ಸ್ಟಂಟ್‌ ಪಬ್ಲಿಕ್‌ ಪ್ರಾಸಿ​ಕ್ಯೂ​ಟ​ರ್‌) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಝಳಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.