ಬೆಂಗಳೂರು, [ಜೂನ್. 08]: ಪಕ್ಕದ ಮನೆ ಅಂಟಿಗೆ ತನ್ನ ಬೆತ್ತಲೆ ದೇಹ ತೋರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಕಾಮುಕನನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಈ ಕಾಮುಕ ಪಕ್ಕದ ಮನೆ ಮಹಿಳೆಗೆ ತನ್ನ ಮರ್ಮಾಂಗವನ್ನು ತೋರಿಸಿ ಫ್ಲೈಯಿಂಗ್ ಕಿಸ್ ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಬೆಂಗಳೂರಿನ ಹನುಮಂತ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅಬ್ಬೋ..!: ಮಂತ್ರಿ ಗ್ರೀನ್ಸ್ ಅಪಾರ್ಟ್​ಮೆಂಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ

ಸುಮಾರು 6 ತಿಂಗಳಿನಿಂದ ನನಗೆ ಕೆಟ್ಟದಾಗಿ ಸನ್ನೆ ಮಾಡುತ್ತಿದ್ದ. ಅಲ್ಲದೆ ಬೆತ್ತಲೆಯಾಗಿ ನಿಂತು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಇಂದು [ಶನಿವಾರ] ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಕೆಟ್ಟದಾಗಿ ಸನ್ನೆ ಮಾಡಿ, ಫ್ಲೈಯಿಂಗ್  ಕಿಸ್‍ ಕೊಟ್ಟಿದ್ದಾನೆ. 

ಈತನಿಂದ ನನನಗೆ ಪ್ರತಿನಿತ್ಯ ಕಿರುಕುಳವಾಗುತ್ತಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮಹಿಳೆ ದೂರು ನೀಡಿದ್ದಾಳೆ. ಆರೋಪಿ ವಿರುದ್ಧ ಹನುಮಂತ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.