ಬೆಂಗಳೂರು, [ಜ.04]: ಬಿಟೆಕ್ ಮತ್ತು ಬಿ ಆರ್ಕ್ ಕೋರ್ಸ್​ಗಳ ಪರೀಕ್ಷಾ ಫಲಿತಾಂಶವನ್ನ ಪರೀಕ್ಷೆ ಮುಗಿದ 1 ಗಂಟೆಯೊಳಗೆ ಪ್ರಕಟಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಹೊಸ ದಾಖಲೆ ಬರೆದಿದೆ.

‌ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಬಿಟೆಕ್​​ನ ಎಲ್ಲಾ ಕೋರ್ಸ್​ಗಳ ಮೊದಲನೇ ಸೆಮಿಸ್ಟರ್ ಮತ್ತು ಬಿ ಆರ್ಕ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗಿದೆ. 

ಈ ಸಂಬಂಧ ಬೆಂಗಳೂರು ವಿವಿ ಪರೀಕ್ಷಾ ಮಂಡಳಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಪರೀಕ್ಷೆ ಮುಗಿದು ಕೇವಲ ಒಂದು ಗಂಟೆಯಲ್ಲೇ ‌ಫಲಿತಾಂಶ ಪ್ರಕಟಿಸಿರೋದು ದೇಶದಲ್ಲೇ ಪ್ರಥಮ.

ಇದಕ್ಕೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಿ ವೆಬ್ ಸೈಟ್​​ನಲ್ಲಿ Www.Bangalore university.ac.in ವೆಬ್ ಸೈಟ್​ನಲ್ಲಿ ಫಲಿತಾಂಶ ಲಭ್ಯವಿದೆ.