ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಿದ ಸಂಚಾರಿ ಪೊಲೀಸರು

ಲೋಕ ಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಗದಿಪಡಿಸಿದ ಮತ ಎಣಿಕೆ ಕೇಂದ್ರಗಳ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ, ವಾಹನಗಳ ಪಾರ್ಕಿಂಗ್ ಗೆ ನಿರ್ಬಂಧಿಸಲಾಗಿದೆ.

Bengaluru traffic police have banned vehicular traffic and parking on these roads sat

ಬೆಂಗಳೂರು (ಜೂ.01): ಲೋಕ ಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಗದಿಪಡಿಸಿದ ಮತ ಎಣಿಕೆ ಕೇಂದ್ರಗಳ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ, ವಾಹನಗಳ ಪಾರ್ಕಿಂಗ್ ಗೆ ನಿರ್ಬಂಧ ವಿಧಿಸಿ ಬೆಂಗಳೂರು ನಗರ ಸಂಚಾರಿ ಪೊಲೀಸರಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಮೇ 4ರಂದು ಬೆಳಗ್ಗೆ 6 ರಿಂದ ಮತ ಎಣಿಕೆ‌ ಮುಗಿಯುವವರೆಗೂ ಮತ ಎಣಿಕೆ ಕೇಂದ್ರದ ಸುತ್ತಮುತ್ತಲ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್ ನಿರ್ಬಂಧ ಮಾಡಲಾಗಿದೆ. ಬೆಂಗಳೂರಿನ ಮೂರು ಮತ ಎಣಿಕೆ ಕೇಂದ್ರಗಳಾಸ ಮೌಂಟ್ ಕಾರ್ಮಲ್ ಕಾಲೇಜ್, ಸೆಂಟ್ ಜ್ಯೋಸೆಫ ಕಾಲೇಜ್, ಹಾಗೂ ಎಸ್ ಎಅ್ ಎಂಆರ್ ವಿ ಕಾಲೇಜ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪಾರ್ಕಿಂಗ್ ನಿರ್ಬಂಧ ಹಾಗೂ ಪರ್ಯಾಯ ಮಾರ್ಗದ ಬಗ್ಗೆ ಪತ್ರಿಕಾ ಪ್ರಕಟಣೆ ತಿಳಿಸಲಾಗಿದೆ. 

ವಸಂತ ನಗರ ಮೌಂಟ್ ಕಾರ್ಮೆಲ್ ಕಾಲೇಜ್ ಮತ ಎಣಿಕೆ ಕೇಂದ್ರ ಇರುವ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ  ನಿರ್ಬಂಧ ವಿಧಿಸಲಾಗಿದೆ. ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್‌ನಿಂದ ಮಿನುಗುತಾರೆ ಕಲ್ಪನಾ ಜಂಕ್ಷನ್ ವರೆಗೂ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಮುಂದುವರೆದು, ಮಿನುಗುತಾರೆ ಕಲ್ಪನಾ ಜಂಕ್ಷನ್‌ನಿಂದ ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್ ವರೆಗೂ ಸಂಚಾರ ನಿರ್ಬಂಧಿಸಲಾಗಿದೆ. ಜಯನಗರ ಟಿ-ಬ್ಲಾಕ್ ನಲ್ಲಿನ ಎರಡು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ 500 ಕೋಟಿ ರೂ. ಖರ್ಚು ಮಾಡಿದ್ದಾರೆ; ಮಾಜಿ ಸಚಿವ ಸಿ.ಪಿ. ಯೋಗೇಶ್ವರ್

ಮತ್ತೊಂದೆಡೆ ಎಸ್.ಎಸ್.ಎಂ.ಆರ್.ವಿ  ಕಾಲೇಜ್  ಮತ ಎಣಿಕೆ ಕೇಂದ್ರದ ಮುಂಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಬೆಳಿಗ್ಗೆ 6:00 ಗಂಟೆಯಿಂದ ಮತ ಎಣಿಕೆ ಮುಗಿಯುವವರೆಗೆ ನಿರ್ಬಂಧ ವಿಧಿಸಲಾಗಿದೆ. ಜಯನಗರ ಟಿ-ಬ್ಲಾಕ್‌  36ನೇ ಕ್ರಾಸ್  ಹಾಗೂ 26ನೇ ಮುಖ್ಯ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ‌ ಸಂಚಾರ ಬಂದ್ ಮಾಡಲಾಗಿದೆ. ಈ ಬಗ್ಗೆ ಮೈಕೋ ಲೇಔಟ್ ಸಂಚಾರಿ  ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಪ್ರವೇಶ; ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರಿನ ಮೂರನೇ ಮತ ಎಣಿಕೆ ಕೇಂದ್ರವಾದ ಸೆಂಟ್ ಜ್ಯೋಸೆಫ್ ಕಾಲೇಜ್ ನಲ್ಲಿ ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಠ್ಠಲ ಮಲ್ಯ ರಸ್ತೆಯ ಸುತ್ತಮುತ್ತಾ ವಾಹನ‌ ಪಾರ್ಕಿಂಗ್ ನಿರ್ಬಂಧ ಮಾಡಲಾಗಿದೆ. ವಿಠಲ್ ಮಲ್ಯ ರಸ್ತೆಯ  ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್ ಜಂಕ್ಷನ್ ವರೆಗೆ  ಆರ್.ಆರ್.ಎಂ.ಆರ್ ರಸ್ತೆ- ರಿಚ್ಮಂಡ್ ಸರ್ಕಲ್ ನಿಂದ ಹಡ್ಸನ್‌ ಜಂಕ್ಷನ್ ವರೆಗೆ, ಎನ್ ಆರ್ ರಸ್ತೆಯ  ಹಡ್ನನ್ ಸರ್ಕಲ್ ನಿಂದ ಟೌನ್ ಹಾಲ್ ಜಂಕ್ಷನ್ ವರೆಗೆ, ಕೆ ಬಿ ರಸ್ತೆಯಲ್ಲಿ ಹೆಚ್ ಎಲ್ ಡಿ ಜಂಕ್ಷನ್ ನಿಂದ ಕೀನ್ಸ್ ಜಂಕ್ಷನ್ ವರೆಗೆ,  ಕೆ.ಜಿ. ರಸ್ತೆಯಲ್ಲಿ ಪೊಲೀಸ್ ಕಾರ್ನರ್ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಜಂಕ್ಷನ್ ವರೆಗೆ ವಾಹನ ನಿಲುಗಡೆ ಮಾಡುವಂತಿಲ್ಲ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios