ಬೆಂಗಳೂರು(ಏ. 07)   ಕೊರೋನಾ ಬಂದೋಬಸ್ತ್ ನಡುವೆಯೂ ಕರ್ತವ್ಯಪ್ರಜ್ಞೆ ಮೆರೆದ ಬೆಂಗಳೂರು ಪೊಲೀಸರಿಗೆ ಒಂದು ಸಲಾಂ ಹೇಳಲೇಬೇಕು.  ಸಿಕ್ಕ ಮೊಬೈಲ್ ಅನ್ನು ಮಾಲೀಕರಿಗೆ  ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹಿಂದಿರುಗಿಸಿದ್ದಾರೆ.

ಕತ್ರಿಗುಪ್ಪೆ ರಿಲಯನ್ಸ್ ಮಾರ್ಟ್ ನಲ್ಲಿ ದುಬಾರಿ ಮೊಬೈಲ್‌ ನ್ನು  ಚಂದ್ರಕಲಾ ಎಂಬುವರು ಕಳೆದುಕೊಂಡಿದ್ದರು.  ಈ ವೇಳೆ ಪೇದೆ ಶಿವನಗೌಡ ಪಾಟೀಲ್ ಗೆ ಮೊಬೈಲ್ ಸಿಕ್ಕಿತ್ತು.  ನಂತರ ಮಾಲೀಕರ ಪತ್ತೆ ಮಾಡಿ ಕರೆ ಮಾಡಿ ಮೊಬೈಲ್  ನೀಡಿದ್ದಾರೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೇದೆ ಶಿವನಗೌಡ ಪಾಟೀಲ್ ಕಾರ್ಯಕ್ಕೆ ಪ್ರಶಂಸೆ  ಜತೆಗೆ ಮೆಚ್ಚುಗೆ ವ್ಯಕ್ತವಾಗಿದೆ.  ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಪೊಲೀಸರು  ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ.

ಜನರಿಗೆ ಮನೆಯ ಒಳಗೆ ಇರಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಹಿತ ಕಾಪಾಡುತ್ತಿರುವ ಸಕಲ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ.

"