ಡ್ರೈವರ್‌ಗೆ ಕೊರೋನಾ: ಹೋಂ ಕ್ವಾರಂಟೈನ್‌ಗೊಳಗಾದ ಬೆಂಗ್ಳೂರು ಪೊಲೀಸ್ ಆಯುಕ್ತ

ಕೊರೋನಾ ಮಧ್ಯೆ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಹಾಮಾರಿ ಕೊರೋನಾ ಬಿಟ್ಟು ಬಿಡದೇ ಕಾಡುತ್ತಿದೆ. ಇದೀಗ ಪೊಲೀಸ್ ಆಯುಕ್ತರ ಕಾರು ಚಾಲಕನಿಗೆ ವಕ್ಕರಿಸಿದೆ.

Bengaluru Police Commissioner Bhaskar Rao home quarantine after driver tests positive Covid19

ಬೆಂಗಳೂರು, (ಜುಲೈ.17): ಕೊರೋನಾ ವಾಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೂ ಕೊರೋನಾ ವಕ್ಕರಿಸುತ್ತಿದೆ. ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರು ಚಾಲಕನಿಗೆ ಸೋಂಕು ತಗುಲಿದೆ.

ಈ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಹೋಂ ಕ್ವಾರಂಟೈನ್‌ಗೊಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ‌ ಖಚಿತಪಡಿಸಿದ್ದಾರೆ.

ಕರ್ನಾಟಕದ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಕೊರೋನಾ: ಬೆಂಬಲಿಗರಿಗೆ ಆತಂಕ

ಕಾರು ಚಾಲಕನಿಗೆ ಕೊರೋನಾ ಪಾಸಿಟಿವ್ ಅಂತ ವರದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಐಸೋಲೇಷನ್ ಮಾಡಲಾಗಿದೆ. ಅಲ್ಲದೇ ನಾನು 4 ದಿನ ಕ್ವಾರಂಟೈನ್‌ ಒಳಗಾಗಲಿದ್ದೇನೆ. ಅಲ್ಲದೇ ಸೋಮವಾರ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ ಎಂದು  ಎಂದು ಟ್ವೀಟ್ ಮಾಡಿದ್ದಾರೆ.

3 ತಿಂಗಳ ಅವಧಿಯಲ್ಲಿ 5ನೇ ಬಾರಿಗೆ ಸೋಮವಾರ ಪರೀಕ್ಷೆಗೆ ಒಳಪಡಲಿದ್ದೇನೆ. ನಾನು  ಸೋಂಕಿತರೊಂದಿಗೆ ಹಲವಾರು ಬಾರಿ ಸಂವಹನಗಳಲ್ಲಿ ಪಾಲ್ಗೊಂಡಿದ್ದೆ. ಇನ್ನೂ ಕೊರೊನಾ ದೃಢಪಟ್ಟಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios