Asianet Suvarna News Asianet Suvarna News

Bengaluru : 112 ಪೊಲೀಸ್‌ ದೂರವಾಣಿ ಆಯ್ತು, ವಾಟ್ಸಾಪ್‌ ಮೂಲಕವೂ ದೂರು ಕೊಡಬಹುದು

ಬೆಂಗಳೂರಿನಲ್ಲಿ ಸಾರ್ವಜನಿಕರು ದೂರು ಅಥವಾ ವಿಚಾರಗಳಿಗೆ ಪೊಲೀಸರನ್ನು ಸಂಪರ್ಕ ಮಾಡಲು 112 ದೂರವಾಣಿ ಜೊತೆಗೆ, 9480801000 ಸಂಖ್ಯೆ ಮೂಲಕ ವಾಟ್ಸಾಪ್‌ ಸಂದೇಶ ಕಳಿಸಬಹುದು. 

Bengaluru people can also complaint lodge through WhatsApp along with 112 police number sat
Author
First Published Jun 14, 2023, 6:52 PM IST

ಬೆಂಗಳೂರು (ಜೂ.14):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಯಾವುದೇ ದೂರು ಅಥವಾ ವಿಚಾರಗಳಿಗೆ ಪೊಲೀಸರನ್ನು ಸಂಪರ್ಕ ಮಾಡಲು ಪೊಲೀಸರ 112 ದೂರವಾಣಿ ಜೊತೆಗೆ ವಾಟ್ಸಾಪ್‌ ಸಂದೇಶದ ಮೂಲಕ ಮಾಹಿತಿ ನೀಡಲು 94808 01000 ಮೊಬೈಲ್‌ ಸಂಖ್ಯೆಯನ್ನೂ ನೀಡಿದೆ. 

ಸಾರ್ವಜನಿಕರಿಗೆ ಪೊಲೀಸರಿಂದ ಮತ್ತೊಂದು ಮೆಸೇಜ್ ನೀಡಿದೆ. ಏನೇ ದೂರುಗಳು, ವಿಚಾರಗಳು ಇದ್ದರೆ 112ಗೇ ಕರೆ ಮಾಡ್ಬೇಕು ಅಂತಾ ಇಲ್ಲ. ಇನ್ನುಮುಂದೆ ವಾಟ್ಸಪ್ ಮೂಲಕವೂ ಮಾಹಿತಿ ತಿಳಿಸಬಹುದು. ಇತ್ತೀಚೆಗೆ ಹೊಯ್ಸಳದಲ್ಲಿ ರೌಂಡ್ ಹೊಡೆದು ಮಾಹಿತಿ ಪಡೆದಿದ್ದ ಪೊಲೀಸ್ ಕಮಿಷನರ್ ದಯಾನಂದ್‌ ಅವರು, ಜನರಿಂದ ದೂರು ನೀಡುವುದರ ಬಗ್ಗೆ ಒಂದಷ್ಟು ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ 112 ಯಾವ ರೀತಿ ವರ್ಕ್ ಆಗ್ತಿದೆ ಎನ್ನುವುದರ ಮಾಹಿತಿ ಪಡೆದಿದ್ದರು. ಆದ್ದರಿಂದ 112 ಉನ್ನತೀಕರಣದ ಬಗ್ಗೆ ಪೊಲೀಸ್‌ ಇಲಾಖೆ ಆಲೋಚನೆ ಮಾಡಿತ್ತು. ಅದರ ಅಂಗವಾಗಿ ಜನರಿಂದ ದೂರು, ಸಲಹೆ ಪಡೆಯಲು ಹೊಸ ಉನ್ನತೀಕರಣ ಮಾಡಲಾಗಿದೆ.

ಹೆಣ್ಮಕ್ಕಳು ಜೆರಾಕ್ಸ್‌ ತೋರ್ಸಿದ್ರೆ ಸುಮ್ನಿರ್ತಿಯಾ, ನಂಗ್ಯಾಕೆ ರೇಗಾಡ್ತೀಯಾ? 

ಇನ್ನುಮುಂದೆ ಸಾರ್ವಜನಿಕರು ಏನೇ ದೂರುಗಳು ಹಾಗೂ ವಿಚಾರಗಳಿದ್ದರೂ ವಾಟ್ಸಪ್ ಮೂಲಕವೂ ದೂರು, ಸಲಹೆಗಳನ್ನ ಕೊಡಬಹುದು. 9480801000 ನಂಬರ್ ಗೆ ವಾಟ್ಸಪ್ ಮೂಲಕ ಸಂದೇಶವನ್ನು ಕಳಿಸಬಹುದು. ಎಲ್ಲೇ ಏನೇ ನಡೆದರೂ ಫೋಟೋ, ವಿಡಿಯೋ ಸಮೇತ ದೂರು ನೀಡಬಹುದು. ಇಷ್ಟು ದಿನ 112ಗೆ ಕರೆ ಮಾಡಿ ನಂತರ ಕಂಟ್ರೋಲ್ ರೂಂ ಸಿಬ್ಬಂದಿ ಮಾತನಾಡಿ ಮಾಹಿತಿ ಪಡೆಯುತ್ತಿದ್ದರು. ನಂತರ ಅವರಿಂದ ಸ್ಥಳೀಯ ಠಾಣೆಗೆ ಹೋಗಿ ಹೊಯ್ಸಳ ವಾಹನ ಮತ್ತು ಪೊಲೀಸರು ಅಲ್ಲಿಗೆ ಬರುತ್ತಿದ್ದರು. 

ಆದರೆ, ಈಗ ವಾಟ್ಸಪ್ ನಂಬರ್ ಮೂಲಕ ಎಲ್ಲಾ ರೀತಿಯ ದೂರು, ಸಮಸ್ಯೆ, ಸಲಹೆಗಳನ್ನ ತಿಳಿಸಬಹುದು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರಿಂದ ಮಾಹಿತಿ ನೀಡಲಾಗಿದೆ. 

ನಿಷೇಧಿತ PFI ಸಂಘಟನೆಯ ಮಾಸ್ಟರ್ ಮೈಂಡ್ ಬಂಧನ: ಬೆಂಗಳೂರು (ಜೂ.14):  ದೇಶದ ನಿಷೇಧಿತ ಸಂಘಟನೆ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (Popular Front of India-PFI) ಸಂಘಟನೆಯ ಮಾಸ್ಟರ್‌ ಮೈಂಡ್‌ ಆಗಿದ್ದ ಮೊಹಮದ್ ಯೂನಸ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಮೊಹಮದ್ ಯೂನಸ್ ಬಂಧನ ಮಾಡಲಾಗಿದೆ. ಕೆಲವು ಯುವಕರಿಗೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಟ್ರೈನಿಂಗ್ ಕೊಡುತ್ತಿದ್ದನು. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ವಾಸವಾಗಿದ್ದುಕೊಂಡು ತೆಲಂಗಾಣದಲ್ಲಿ ಟ್ರೈನಿಂಗ್ ಕೊಟ್ಟು ಬರುತ್ತಿದ್ದನು. ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಶಸ್ತಾಸ್ತ್ರಗಳ ತರಬೇತಿಯನ್ನು ನೀಡುತ್ತಿದ್ದನು. 

Bengaluru : ಸ್ವಂತ ಮಗಳೇ ಹೆತ್ತ ತಾಯಿಯನ್ನು ಕೊಂದಿದ್ದಕ್ಕೆ ಕೊನೆಗೂ ಸಿಕ್ತು ಕಾರಣ

ಬಳ್ಳಾರಿಯಲ್ಲಿ ವಾಸವಿದ್ದ ಯೂನಸ್‌: 2022 ರಲ್ಲಿ ಬಳ್ಳಾರಿಯ ಯೂನಸ್ ಮನೆ ಮೇಲೆ ಎನ್ಐಎ ದಾಳಿ ಮಾಡಿತ್ತು. ಈ ವೇಳೆ ಪರಾರಿಯಾಗಿದ್ದ‌ ಮೊಹಮದ್ ಯೂನಸ್, ನಂತರ ಇಡೀ ಕುಟುಂಬವನ್ನು ತೆಲಂಗಾಣಕ್ಕೆ ಶಿಫ್ಟ್ ಮಾಡಿಸಿದ್ದನು. ತೆಲಂಗಾಣದಲ್ಲಿ ಹೆಸರು ಬದಲಿಸಿಕೊಂಡು ವಾಸವಾಗಿದ್ದನು. ಬಶೀರ್ ಅಂತ ಹೆಸರು ಬದಲಾಯಿಸಿ ಫ್ಲಂಬರ್ ಕೆಲಸ ಮಾಡಿಕೊಂಡಿದ್ದನು. ತೆಲಂಗಾಣ ಹಾಗೂ ಆಂಧ್ರಪ್ರದೇಶದ ತರಬೇತುದಾರರಿಗೆ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದನು. ಈ ಮೂಲಕ ದೇಶದಲ್ಲಿ ಸಂಘಟನೆ ನಿಷೇಧ ಮಾಡಿದ್ದರೂ ಸಂಘಟನೆಯ ಎಲ್ಲ ಸದಸ್ಯರಿಗೆ ತರಬೇತಿ ನೀಡುತ್ತಿದ್ದನು.

Follow Us:
Download App:
  • android
  • ios