Asianet Suvarna News Asianet Suvarna News

ನಮ್ಮ ಮೆಟ್ರೋ ಪ್ರಯಾಣಿಕರಿಗೆ ವೀಕೆಂಡ್ ಶಾಕ್

* ಮೆಟ್ರೋ ಸಂಚಾರದ ಅವಧಿ ವಿಸ್ತರಣೆ 
* ಆದ್ರೆ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ವೀಕೆಂಡ್ ಶಾಕ್
* ಈ ಬಗ್ಗೆ ಸುತ್ತೋಲೆ ಹೊಡಿಸಿರುವ ಬಿಎಂಆರ್​ಸಿಎಲ್

Bengaluru Namma Metro no operate in Weekend Over curfew rbj
Author
Bengaluru, First Published Jun 30, 2021, 6:18 PM IST

ಬೆಂಗಳೂರು, (ಜೂನ್.30): ಅನ್ ಲಾಕ್ 3.0 ಹಿನ್ನೆಲೆ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಆದ್ರೆ, ವೀಕೆಂಡ್‌ನಲ್ಲಿ ಮೆಟ್ರೋ ಓಡಾಟ ಇರಲ್ಲ. 

ಹೌದು...ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್, ನಾಳೆ (ಜುಲೈ.01) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಸಂಚಾರ ಇರಲಿದೆ.  

ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಜನದಟ್ಟಣೆ ಸಂದರ್ಭದಲ್ಲಿ 5 ‌ನಿಮಿಷಕ್ಕೊಂದು ಓಡಾಟ ನಡೆಸಲಿದೆ. ಜನದಟ್ಟಣೆ ಇಲ್ಲದ ವೇಳೆ 15 ನಿಮಿಷಕ್ಕೊಂದು ಮೆಟ್ರೋ ಓಡಾಟ ನಡೆಸಲಿದೆ 
 
ಆದ್ರೆ, ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಸಂಚಾರವಿಲ್ಲ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಮೆಟ್ರೋ ಓಡಾಟ ಇರಲ್ಲ. ಎಂದು ಬಿಎಂಆರ್​ಸಿಎಲ್ ಸುತ್ತೋಲೆ ಹೊರಡಿಸಿದೆ.

ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತಗೊಳ್ಳಲಿದೆ. ಇದರಿಂದ ನಮ್ಮ ಮೆಟ್ರೋ ಪ್ರಯಾಣಿಕರು ವೀಕೆಂಡ್‌ನಲ್ಲಿ ಮೆಟ್ರೋ ಕಡೆ ತಲೆ ಹಾಕಬೇಡಿ.

Follow Us:
Download App:
  • android
  • ios