Asianet Suvarna News Asianet Suvarna News

ಬೆಂಗಳೂರು - ಮೈಸೂರು ಜನರೆ ಎಚ್ಚರ : ಕಾಡಲಿದೆ ಭಯಂಕರ ನೀರಿನ ದಾಹ

  • ಬೆಂಗಳೂರು, ಮೈಸೂರು ಜನರೇ ಎಚ್ಚರ ಎಚ್ಚರ.  ನೀರನ್ನು ಹಿತ-ಮಿತವಾಗಿ ಬಳಸಿ
  • ಬೇಸಿಗೆಯಲ್ಲಿ ನೀರಿನ ಹಾಹಾಕಾರ ಎದುರಾಗುವುದು ಖಚಿತ
Bengaluru Mysuru People Likely To face water crisis in summer snr
Author
Bengaluru, First Published Sep 20, 2021, 10:07 AM IST

 ಮಂಡ್ಯ  (ಸೆ.20):  ಬೆಂಗಳೂರು, ಮೈಸೂರು ಜನರೇ ಎಚ್ಚರ ಎಚ್ಚರ.  ನೀರನ್ನು ಹಿತ-ಮಿತವಾಗಿ ಬಳಸಿ, ಇಲ್ಲದಿದ್ದರೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಎದುರಾಗುವುದು ಖಚಿತ. 

ಈ ಬಾರಿ ಕೆಆರ್‌ಎಸ್‌ ಜಲಾಶಯ ಮಲೆ  ಕೊರತೆಯಿಂದ ಭರ್ತಿಯಾಗಿಲ್ಲ. ಬೆಂಗಳೂರು ಮೈಸೂರು  ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆ ಬೇಸಿಗೆಗೆ ನೀರಿನ ದಾಹ ಎದುರಾಗುವುದರಲ್ಲಿ ಸಂಶಯವಿಲ್ಲ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯ ಪ್ರತೀ ವರ್ಷದ ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುತಿತ್ತು. ಆದರೆ ಈ ಬಾರಿ  ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಲಿಲ್ಲ. 

ಆಲಮಟ್ಟಿ: 26 ಗೇಟ್‌ ಮೂಲಕ 1,20,000 ಕ್ಯುಸೆಕ್‌ ನೀರು ಬಿಡುಗಡೆ

ಮುಂದೆಯೂ ಮಳೆಯಾಗದೇ ಇದ್ದರೆ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಅತ್ಯಧಿಕ ಪ್ರಮಾಣದಲ್ಲಿ ಕುಸಿಯಲಿದೆ. ಇದರಿಂದ  ಎರಡು ಮಹಾನಗರದ ಜನತೆಗೆ ದಾಹ ಕಾಡುವುದು ಖಚಿತ. 

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ KRS ಡ್ಯಾಂನಲ್ಲಿ ಸದ್ಯ ಕೇವಲ 115.92 ಅಡಿ ನೀರಿದೆ. ಮಳೆಗಾಲ ಮುಕ್ತಾಯವಾಗುವ ಮೊದಲೆ ನೀರಿನ ಕೊರತೆ ಕಾಣುತ್ತಿದೆ.   38.107 ಟಿಎಂಸಿ ನೀರಿನಲ್ಲೇ ಕೃಷಿ, ಕುಡಿಯುವ ನೀರಿನ ಜೊತೆಗೆ ತಮಿಳುನಾಡಿಗೂ ಬಿಡಬೇಕಾದ ಅನಿವಾರ್ಯತೆ ಇದೆ. 

ರಾಜ್ಯ ಸರ್ಕಾರದ ಮುಂದೆ ನೀರಿನ ಸಮಸ್ಯೆ ನೀಗಿಸುವ ಬಹುದೊಡ್ಡ ಸವಾಲು ಇದ್ದು,  ಸದ್ಯ ಲಭ್ಯವಿರುವ ನೀರಿನಲ್ಲಿ ಪರಿಸ್ಥಿತಿ ಎದುರಿಸುವುದು ಕಷ್ಟಕರವಾಗಿದೆ.   ಜೂನ್‌ನಿಂದ ಈವರೆಗೆ ತಮಿಳುನಾಡಿಗೆ ಸುಮಾರು 80 ಟಿಎಂಸಿ ನೀರು ಬಿಡುಗಡೆ ಮಾಡಬೇಕಿದ್ದು, ಇನ್ನೂ ಸೆಪ್ಟೆಂಬರ್, ಅಕ್ಟೋಬರ್ ಕೋಟ ನೀರು ಬಿಡುವುದು ಅನಿವಾರ್ಯವಾಗಿದೆ.

KRS ಡ್ಯಾಂ ಇಂದಿನ ನೀರಿನ ಮಟ್ಟ - ಡ್ಯಾಂ ಗರಿಷ್ಠ ಮಟ್ಟ 124.80 ಅಡಿ

ಇಂದಿನ ಮಟ್ಟ :115.92 ಅಡಿ
ಒಳಹರಿವು   : 5097 ಕ್ಯೂಸೆಕ್ 
ಹೊರಹರಿವು :10777 ಕ್ಯೂಸೆಕ್ 
ಸಂಗ್ರಹ.       : 38.107 ಟಿಎಂಸಿ

Follow Us:
Download App:
  • android
  • ios