ಬೆಂಗಳೂರು (ಅ.06): ಬೆಂಗಳೂರು ಹಾಗೂ ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಕ್ಟೋಬರ್ 7 ರಿಂದ ಸಂಚಾರ ಸ್ಥಗಿತವಾಗಲಿದೆ. 

ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚಾರ ನಡೆಸುತಿತ್ತು. 

ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ರೈಲು ಸೇವೆಗೆ ಸಿದ್ಧತೆ .

ವಿಶೇಷ ರೈಲಿನ ಜೊತೆಗೆ ವಾರದಲ್ಲಿ ಮೂರು ಬಾರಿ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್ ರೈಲು ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಿದೆ. 

ವಾರದಲ್ಲಿ ಬುಧವಾರ ಶುಕ್ರವಾರ, ಭಾನುವಾರ ಸಂಚಾರ ನಡೆಸಲಿದೆ. ಅಕ್ಟೋಬರ್ 7 ರಿಂದ ಬದಲಾವಣೆಯಾಗಲಿದೆ.

ಕೊರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ರೈಲು, ರಸ್ತೆ ಸಾರಿಗೆಯಲ್ಲಿ ಭಾರೀ ಬದಲಾವಣೆಯಾಗಿತ್ತು. ಹಲವು ಸೇವೆಗಳು ಬದಲಾಗಿದ್ದವು.  ಇದೀಗ ನಿಧಾನಕ್ಕೆ ಸಾರಿಗೆ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ.