Asianet Suvarna News Asianet Suvarna News

ವಾಸಕ್ಕೆ ದೇಶದಲ್ಲೇ ಬೆಂಗಳೂರು 2ನೇ ಬೆಸ್ಟ್‌ ನಗರ..!

ಸ್ಪರ್ಧೆಯಲ್ಲಿ ದೇಶದ 263 ನಗರದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಆನ್‌ಲೈನ್‌ ಮೂಲಕ ಅಭಿಪ್ರಾಯ, ಅನಿಸಿಕೆಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ನಾಗರಿಕರು ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸುವುದರಲ್ಲಿ ಬೆಂಗಳೂರು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ

Bengaluru is the 2nd Best City to live in the India grg
Author
First Published Dec 18, 2022, 9:30 AM IST

ಬೆಂಗಳೂರು(ಡಿ.18):  ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಲಾಗುತ್ತಿರುವ ಈಸ್‌ ಆಫ್‌ ಲಿವಿಂಗ್‌-2022ರ ‘ನಾಗರಿಕರ ಗ್ರಹಿಕೆ ಸಮೀಕ್ಷೆ’ (ಸಿಟಿಜನ್‌ ಪರ್ಸೆಪ್ಶನ್‌ ಸರ್ವೇ) ನಡೆಸಲಾಗುತ್ತಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರು ದೇಶದಲ್ಲಿ 2ನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಟ್‌ ಸಿಟಿ ಮಿಷನ್‌, ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಕಳೆದ ನ.9 ರಿಂದ ಆರಂಭಿಸಲಾಗಿದ್ದು, ಡಿ.23ವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ದೇಶದ 263 ನಗರದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಆನ್‌ಲೈನ್‌ ಮೂಲಕ ಅಭಿಪ್ರಾಯ, ಅನಿಸಿಕೆಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ನಾಗರಿಕರು ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸುವುದರಲ್ಲಿ ಬೆಂಗಳೂರು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರು ನೂತನ ಜಿಲ್ಲಾಧಿಕಾರಿಯಾಗಿ ದಯಾನಂದ.ಕೆ.ಎ ನೇಮಕ: 45 ಡಿವೈಎಸ್ಪಿಗಳ ವರ್ಗಾವಣೆ

ಈವರೆಗೆ ಬೆಂಗಳೂರಿನ 2.03 ಲಕ್ಷ ಮಂದಿ ತಮ್ಮ ಅಭಿಪ್ರಾಯವನ್ನು ಸಲ್ಲಿಕೆ ಮಾಡಿದಾರೆ. ಮೊದಲ ಸ್ಥಾನದಲ್ಲಿ ಭೂಪಾಲ್‌ ನಗರದ 2.20 ಲಕ್ಷ ಮಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರದ ಥಾಣೆ, 4ನೇ ಸ್ಥಾನದಲ್ಲಿ ನವೆ ಮುಂಬೈ, 5ನೇ ಸ್ಥಾನದಲ್ಲಿ ಪಿಂಪ್ರಿ-ಚಿಂಚ್‌ವಾಡ್‌, 6ನೇ ಸ್ಥಾನದಲ್ಲಿ ಉಲ್ಲಾಸನಗರ, 7ನೇ ಸ್ಥಾನದಲ್ಲಿ ಆಂಧ್ರಪ್ರದೇಶದ ವಿಶಾಕಪಟ್ಟಣ್ಣ, 8ನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರ, 9ನೇ ಸ್ಥಾನದಲ್ಲಿ ಮಹಾರಾಷ್ಟ್ರದ ಮೀರಾ ಭಯಂದರ್‌ ಹಾಗೂ 10ನೇ ಸ್ಥಾನದಲ್ಲಿ ಗುಜರಾತ್‌ನ ಸೂರತ್‌ ನಗರವಿದೆ.

ಕರ್ನಾಟಕದ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಹುಬ್ಬಳಿ-ಧಾರಾವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದೆ.
ಆನ್‌ಲೈನ್‌ ಮೂಲಕ ನಡೆಯುವ ಈ ಸರ್ವೇಯಲ್ಲಿ ಒಟ್ಟು 17 ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರ ನೀಡಬೇಕಾಗಲಿದೆ. ನಿಮ್ಮ ನಗರದಲ್ಲಿ ನೀವು ಹೇಗೆ ಪ್ರಯಾಣಿಸುತ್ತೀರಾ?, ಬಾಡಿಗೆ ಮನೆ ಅಥವಾ ಸ್ವಂತ ಮನೆ ಹೊಂದಿದ್ದೀರಾ?, ವಿದ್ಯುತ್‌ ಹಾಗೂ ನೀರಿನ ಸಮಸ್ಯೆ ಇದೆಯೇ?, ಆರೋಗ್ಯ, ಶಿಕ್ಷಣ ಸೇವೆ ಹೇಗಿದೆ?, ಉದ್ಯೋಗ ಅವಕಾಶಗಳು ಹೇಗಿದೆ?, ನಿಮ್ಮ ನಗರ ಎಷ್ಟುಸುರಕ್ಷಿತ?, ಸ್ಥಳೀಯ ಮಹಾನಗರ ಪಾಲಿಕೆಗೆ ಹೇಗೆ ಸ್ಪಂದಿಸುತ್ತದೆ ಸೇರಿದಂತೆ ವಿವಿಧ ಪ್ರಶ್ನೆಗಳಿವೆ. ಬಹು ಆಯ್ಕೆ ಮೂಲಕ ಉತ್ತರ ನೀಡಬೇಕಾಗಲಿದೆ.

‘ನನ್ನ ನಗರ ನಮ್ಮ ಹೆಮ್ಮೆ’ ಘೋಷಣೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಚ್‌ ಸಿಟಿ ಸಂಸ್ಥೆಯು ಈ ನಾಗರಿಕ ಗ್ರಹಿಕೆ ಸಮೀಕ್ಷೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದು, ನನ್ನ ನಗರ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಪ್ರಚಾರ ಪಡೆಸುತ್ತಿದೆ. https://eol2022.org/CitizenFeedback ಈ ಲಿಂಕ್‌ ಭೇಟಿ ನೀಡುವ ಉತ್ತರಿಸಬಹುದು. ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನಾಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ಸುಧಾರಣೆ, ನೀತಿ ರೂಪಿಸಿ ಸಾರ್ವಜನಿಕರ ನಗರದ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ನೆರವಾಗಲಿದೆ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದ್ದಾರೆ.

Follow Us:
Download App:
  • android
  • ios