Asianet Suvarna News

ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ DCP ಚೇತನ್ ಸಿಂಗ್ ರಾಥೋಡ್‌

ಬರೋಬ್ಬರಿ 130 ಕಿ.ಮೀ ನಡೆದು ಬಂದ ಕಟ್ಟಡ ಕೂಲಿ ಕಾರ್ಮಿಕರು| ಕೂಲಿ ‌ಕಾರ್ಮಿಕರಿಗೆ ಸ್ಥಳದಲ್ಲೇ ಆಹಾರ ವ್ಯವಸ್ಥೆಯನ್ನು ಮಾಡಿಸಿದ ಡಿಸಿಪಿ  ಚೇತನ್ ಸಿಂಗ್ ರಾಥೋಡ್‌‌| ಕಟ್ಟಡ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಆಹಾರ ವ್ಯವಸ್ಥೆ ಮಾಡಿಸಿದ  ಚೇತನ್ ಸಿಂಗ್ ರಾಥೋಡ್‌|

Bengaluru Central DCP Chetan Singh Rathore help to Migrant Wokers
Author
Bengaluru, First Published May 18, 2020, 1:47 PM IST
  • Facebook
  • Twitter
  • Whatsapp

ಬೆಂಗಳೂರು(ಮೇ.18): ರೈಲು ಸಿಗದೆ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ಕೇಂದ್ರ ವಿಭಾಗ ಡಿಸಿಪಿ  ಚೇತನ್ ಸಿಂಗ್ ರಾಥೋಡ್‌ ಅವರು ಟ್ರೈನ್ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬರೋಬ್ಬರಿ 130 ಕಿ.ಮೀ ನಡೆದು ಬಂದ ಜಾರ್ಖಂಡ್‌ ಮೂಲದ ಕಟ್ಟಡ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಆಹಾರ ವ್ಯವಸ್ಥೆಯನ್ನೂ ಸಹ ಮಾಡಿಸಿದ್ದಾರೆ. 

ಜಾರ್ಖಂಡ್‌ಗೆ ತೆರಳುವ ವಿಶೇಷ ರೈಲಿಗಾಗಿ ಕೂಲಿ ಕಾರ್ಮಿಕರು ಮೈಸೂರಿನಿಂದ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದಿದ್ದರು. ಆದರೆ ಅರಮನೆ ಮೈದಾನದಲ್ಲಿ ಬುಕ್ಕಿಂಗ್ ಮಾಡಿದ್ರೆ ಮಾತ್ರ ಟ್ರೈನ್ ಇಲ್ಲ ಅಂದ್ರೆ ಇಲ್ಲ ಎಂದು ಸಿಬ್ಬಂದಿ ಹೇಳಿದ್ದರು. ಸಾಲದಕ್ಕೆ ಇಂದು ಜಾರ್ಖಂಡ್‌ಗೆ ನಮ್ಮ ವಿಭಾಗದಿಂದ ಯಾವುದೇ ರೈಲು ಇಲ್ಲ ಸಿಬ್ಬಂದಿ ಹೇಳಿದ್ದರಂತೆ.

ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್: ಭಾನುವಾರ ಇನ್ನು ಫುಲ್ ಬಂದ್

ಇದರಿಂದ ಕಂಗಾಲಾಗಿದ್ದ ಕೂಲಿ ಕಾರ್ಮಕರು ಫುಟ್‌ಪಾತ್ ಮೇಲೆ ಕುಳಿತಿದ್ದರು. ಇವರ ಬಗ್ಗೆ ಡಿಸಿಪಿ ಚೇತನ್ ಸಿಂಗ್ ರಾಥೋಡ್‌ ಅವರು ವಿಚಾರಿಸಿದ್ದಾರೆ. ಈ ವೇಳೆ ಡಿಸಿಪಿ ಬಳಿ ತಮ್ಮ ಅಳಲು ತೋಡಿಕೊಂಡ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ವಸತಿ ಆಹಾರ ವಿಲ್ಲದೇ ಮೈಸೂರಿನಲ್ಲಿಯೇ ತಂಗಿದ್ದು, ಮಾಧ್ಯಮಗಳಲ್ಲಿ ಜಾರ್ಖಂಡ್‌ಗೆ ತೆರಳಲು ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರಲು ಸಂಚಾರ ವ್ಯವಸ್ಥೆ ಇಲ್ಲದೇ ನಡೆದು ಬಂದಿರೋದಾಗಿ ಹೇಳಿದ್ದಾರೆ.

ಕೊರೋನಾದಿಂದ ದೇಶದಲ್ಲಿ ಹೆಚ್ಚಾಯ್ತು ಬಡತನ..!

ಇವರ ಮಾತನ್ನ ಕೇಳಿದ ಕೂಡಲೇ ಜಾರ್ಖಾಂಡ್ ರೈಲನ್ನು ಟ್ರ್ಯಾಕ್‌ ಮಾಡಿ ತಕ್ಷಣ ಪಶ್ಚಿಮ ವಿಭಾಗದ ಡಿಸಿಪಿ ಜೊತೆ ಮಾತುಕತೆ ನಡೆಸಿ ಟ್ರೈನ್ ವೇಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಇಂದು ಜಾರ್ಖಂಡ್‌ಗೆ ಹೊರಡುವ ರೈಲಿನಲ್ಲಿ ಈ ಕಾರ್ಮಿಕರಿಗೆ ಟಿಕೆಟ್‌ ಸಹ ಬುಕ್ ಮಾಡಿಸಿದ್ದರು.
 

Follow Us:
Download App:
  • android
  • ios