*  ಕೃಷ್ಣಸ್ವಾಮಿ ಭಟ್ಟರ್ ಕಾಂಚಿಪುರಂ‌ನಲ್ಲಿ ಹೃದಯಾಘಾತದಿಂದ ನಿಧನ*  ಮೇಲುಕೋಟೆ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಅರ್ಚಕರಾಗಿದ್ದ ಭಟ್ಟರ್ *  10 ವರ್ಷಗಳ ಹಿಂದೆ ಬೇಲೂರು ಚೆನ್ನಕೇಶವ ದೇವಾಲಯದ ಪ್ರಧಾನ ಅರ್ಚಕರಾಗಿ ನೇಮಕವಾಗಿದ್ದ ಕೃಷ್ಣಾ ಭಟ್ಟರ್ 

ಮಂಡ್ಯ(ಮೇ.24): ಮೇಲುಕೋಟೆ ಅರ್ಚಕ ಕೃಷ್ಣಸ್ವಾಮಿ ಭಟ್ಟರ್(60) ಇಂದು(ಮಂಗಳವಾರ) ವಿಧಿವಶರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಅರ್ಚಕರಾಗಿದ್ದ ಕೃಷ್ಣಸ್ವಾಮಿ ಭಟ್ಟರ್ ಕಾಂಚಿಪುರಂ‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಕೃಷ್ಣಸ್ವಾಮಿ ಭಟ್ಟರ್ ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯವರಾಗಿದ್ದಾರೆ. ಕೃಷ್ಣಾ ಭಟ್ಟರ್ ಕಾಂಚಿಪುರಂ‌ನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣಾ ಭಟ್ಟರ್ ಅವರು 10 ವರ್ಷಗಳ ಹಿಂದೆ ಬೇಲೂರು ಚೆನ್ನಕೇಶವ ದೇವಾಲಯದ ಪ್ರಧಾನ ಅರ್ಚಕರಾಗಿ ನೇಮಕವಾಗಿದ್ದರು. ಕೃಷ್ಣಾ ಭಟ್ಟರ್ ಅವರು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಅರ್ಚಕರಾದ ವರದರಾಜ ಭಟ್ಟರ್ ಅವರ ಸಹೋದರರಾಗದ್ದರು. 

KN Mohan Kumar Passes Away: ಸ್ಯಾಂಡಲ್‌ವುಡ್ ನಿರ್ದೇಶಕ ಕೆ.ಎನ್‌.ಮೋಹನ್‌ ಕುಮಾರ್‌ ವಿಧಿವಶ

ಕೃಷ್ಣಾ ಭಟ್ಟರು ದೇವರ ಪ್ರತಿಷ್ಠಾನ ಕಾರ್ಯ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲೂ ಅರ್ಚಕರಾಗಿ ಕೆಲಸ ಮಾಡಿದ್ದರು.