ಬೆಳಗಾವಿ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿ: ನಾಲ್ವರು ಮಹಿಳಾ ಕೃಷಿ ಕೂಲಿ ಕಾರ್ಮಿಕರು ಸಾವು
ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಕಬ್ಬನ್ನು ಕಾರ್ಖಾನೆಗೆ ಸಾಗಣೆ ಮಾಡುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ನಾಲ್ವರು ಪಾದಾಚಾರಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಳಗಾವಿ (ಫೆ.04): ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಕಬ್ಬನ್ನು ಕಾರ್ಖಾನೆಗೆ ಸಾಗಣೆ ಮಾಡುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ನಾಲ್ವರು ಪಾದಾಚಾರಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಅಫಘಾತ ಸಂಭವಿಸಿದೆ. ಈ ಭೀಕರ ಅಪಘಾತ ಸ್ಥಳದಲ್ಲೇ 4 ಜನ ಪಾದಚಾರಿ ಮಹಿಳೆಯರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೋರ್ವ ಮಹಿಳೆ ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಕಾರ್ಖಾನೆಗೆ ಕಬ್ಬು ಸಾಗಾಟ ಟ್ರಾಕ್ಟರ್ ಟೇಲರ್ ಪಲ್ಟಿಯಾಗಿ ಪಾದಾಚಾರಿಗಳ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಬಾಬರಿ ಮಸೀದಿಯನ್ನ ಮರೆಯೊಲ್ಲ, ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ತೇವೆಂದ ಸೈಯದ್
ಮೃತ ಮಹಿಳೆಯರನ್ನು ಮಾಲಾಬಾಯಿ ರವಸಾಬ್ ಐನಾಪುರೇ (61), ಚಂಪಾ ಲಕ್ಕಪ್ಪ ತಳಕಟ್ಟಿ (50), ಭಾರತಿ ವಡ್ರಾಳೇ (40) ಹಾಗೂ ಶೇಕೂ ನರಸಾಯಿ (45) ಎಂದು ತಿಳಿದುಬಂದಿದೆ. ಶೇಡಬಾಳ ಗ್ರಾಮದ ಸಮೀಪ ಜಮಖಂಡಿ ಮೀರಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಟ್ರಾಕ್ಟರ್ ಟೇಲರ್ ಚಕ್ರ ಕಟ್ಟಾಗಿ ಪಾದಚಾರಿ ಮೇಲೆ ಬಿದ್ದಿದೆ. ನಾಲ್ಕು ಜನ ಕೃಷಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಭೇಟಿ ಮಾಡಿದ್ದಾರೆ. ಕಾಗವಾಡ ಠಾಣೆ ಪೊಲೀಸರು ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಹೋಟೆಲ್‌ನಲ್ಲಿ ಸಂಬಳ ಕೇಳಿದ್ದಕ್ಕೆ ಮರಕ್ಕೆ ಕಟ್ಟಿಹಾಕಿ ಥಳಿಸಿದ ಮಾಲೀಕ:
ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಬಡಪಾಯಿ ಹೋಟೆಲ್ ಮಾಲೀಕನೋರ್ವ ಕಾರ್ಮಿಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕ. ಮಂಜು ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಕೊಪ್ಪ ಮೂಲದವನಾಗಿರುವ ಮಂಜು ನಡೆಸುತ್ತಿದ್ದ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸತೀಶ್. ತಿಂಗಳ ಕಾಲ ದುಡಿದರೂ ಸಂಬಳ ಕೊಡದೇ ಸತಾಯಿಸುತ್ತಿದ್ದ ಮಾಲೀಕ. ಹೀಗಾಗಿ ಸಂಬಳದ ವಿಚಾರವಾಗಿ ಮಾಲೀಕರೊಡನೆ ಗಲಾಟೆ ಮಾಡಿ ಕೆಲಸ ಬಿಟ್ಟುಹೋಗಿದ್ದ ಸತೀಶ್. ಆದರೆ ಬರಬೇಕಿದ್ದ ಸಂಬಳದ ಹಣದ ವಿಚಾರವಾಗಿ ಹೋಟೆಲ್ ಮಾಲೀಕ ಮಂಜುಗೆ ಫೋನ್ ಮಾಡಿ ಕಾರ್ಮಿಕ ಕೇಳಿದ್ದಾನೆ.
ಏಷ್ಯಾ ಖಂಡದಲ್ಲಿ ಬೆಂಗಳೂರೇ ನಂಬರ್ ಒನ್; ಚೀನಾ, ಜಪಾನ್ ಸಿಟಿಗಳನ್ನು ಹಿಂದಿಕ್ಕಿದ ಸಿಲಿಕಾನ್ ಸಿಟಿ
ಹೋಟೆಲ್ ಬಿಟ್ಟು ಸಂಬಳ ಕೇಳುತ್ತಿದ್ದನೆಂದು ಮಂಜು ಸಹೋದರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಹಣ ಕೊಡುತ್ತೇವೆ ಕಾರ್ಮಿಕನನ್ನು ಕರೆಸಿಕೊಂಡಿದ್ದಾರೆ. ಸಂಬಳದ ಆಸೆಗೆ ಬಂದಿದ್ದ ಕಾರ್ಮಿಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾಡಿನಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಮರಕ್ಕೆ ಕಟ್ಟಿಹಾಕಿ ಆರು ಜನರಿಂದ ಮನಸೋ ಇಚ್ಛೆ ಹಲ್ಲೆನಡೆಸಲಾಗಿದೆ. ಆರು ಜನರಿಂದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕ ಸತೀಶ್. ಹಲ್ಲೆ ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.