Belagavi News: ಗಂಟಲಲ್ಲಿ ಸಿಕ್ಕ ಕೃಷ್ಣನ ಮೂರ್ತಿ, ಕಾಪಾಡಿದನಾ ಆ ದೇವರು?

*ಪೂಜೆ ವೇಳೆ ಲೋಹದ ಬಾಲ ಕೃಷ್ಣನ ಮೂರ್ತಿ ನುಂಗಿದ ವ್ಯಕ್ತಿ
*ಶಸ್ತ್ರಚಿಕಿತ್ಸೆ ಮಾಡಿ ಕಂಠದಿಂದ ಕೃಷ್ಣನ ತೆಗೆದ ವೈದ್ಯರು
*ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

Belagavi doctors remove small Krishna idol swallowed by man during pooja mnj

ವರದಿ: ಮಹಾಂತೇಶ ಕುರಬೇಟ್, ಬೆಳಗಾವಿ

ಬೆಳಗಾವಿ (ಜೂ. 23): ದೇವರಿಗೆ ಪೂಜೆ ಮಾಡಿ ತೀರ್ಥ ಸೇವಿಸುವ ವೇಳೆ ಅಂಗೈಯಲ್ಲಿ ಇಟ್ಟುಕೊಂಡಿದ್ದ ಬಾಲ ಕೃಷ್ಣನ (Bal Krishna) ಲೋಹದ ಮೂರ್ತಿಯನ್ನು 45 ವರ್ಷದ ವ್ಯಕ್ತಿಯೋರ್ವ ನುಂಗಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ಬೆಳಗಾವಿ ಮೂಲದ 45 ವರ್ಷದ ವ್ಯಕ್ತಿಯೋರ್ವ ನಿತ್ಯ ದೇವರ ಪೂಜೆ ಮಾಡಿ ಬಳಿಕ ದೇವರತೀರ್ಥ ಸೇವನೆ ಮಾಡುವ ಅಭ್ಯಾಸ ರೂಢಿ ಮಾಡಿಕೊಂಡಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಅಚಾತುರ್ಯದಿಂದ ಲೋಹದ ಬಾಲ ಕೃಷ್ಣ ಮೂರ್ತಿಯನ್ನೇ ನುಂಗಿದ್ದಾನೆ. ಬಳಿಕ ಆ ವ್ಯಕ್ತಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನ ಸಂಪರ್ಕಿಸಿದ್ದ. 

ಆಗ ಸ್ಥಳಿಯ ವೈದ್ಯರು ಎಕ್ಸರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸರೇ (X-Ray) ರಿಪೋರ್ಟ್‌ನಲ್ಲಿ ಕೃಷ್ಣ ಇರುವ ವಿಗ್ರಹ ಗಂಟಲಿನಲ್ಲಿದ್ದಿದ್ದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬಾಲ ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿತ್ತು. ಇದನ್ನ ಎಂಡೋಸ್ಕೋಪ್ ಮಾಡಿ ದೃಢಪಡಿಸಿಕೊಂಡು ಇಎನ್‌ಟಿ (ENT) ವಿಭಾಗದ ವೈದ್ಯರು ಯಶಸ್ಬಿ ಶಸ್ತ್ರ ಚಿಕಿತ್ಸೆ  ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ.

ವೈದ್ಯರಿಗೆ ಸವಾಲಾಗಿದ್ದ ಶಸ್ತ್ರಚಿಕಿತ್ಸೆ:  ಗಂಟಲಿನಲ್ಲಿ ಸಿಲುಕಿದ್ದ ಪುಟ್ಟ ಕೃಷ್ಣನ ಮೂರ್ತಿ ಹೊರತಗೆಯೋದು ವೈದ್ಯರಿಗೆ ಸವಾಲಾಗಿತ್ತು. ಅದರಲ್ಲೂ ಬಾಲ ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿತ್ತು.

ಇದನ್ನೂ ಓದಿ: ಮಕ್ಕಳಿಗೆ ಈ ಆಹಾರ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಜೋಕೆ

ಕೆಎಲ್‌ಇ ಆಸ್ಪತ್ರೆಯ ಇಎನ್ ಟಿ ವಿಭಾದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ, ಅರವಳಿಕೆ (Anaesthetist) ವೈದ್ಯ ಡಾ. ಚೈತನ್ಯ ಕಾಮತ್ ಸೇರಿ ಇತರ ಶುಶ್ರೂಷೆಯರ ಸಹಾಯದಿಂದ ರೋಗಿಯ ಗಂಟಲಿನಲ್ಲಿ ಸಿಲುಕಿದ್ದ ಬಾಲ ಕೃಷ್ಣನ ವಿಗ್ರಹವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ.  ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios