ಬೆಳಗಾವಿ [ಜೂ.19] : ಕಬ್ಬಿನ ಬಿಲ್ ಪಾವತಿಸದೇ ರೈತರ ಬದುಕಿ ನೊಂದಿಗೆ ಚೆಲ್ಲಾಟವಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಾಜಿ ಸಚಿವ ಉಮೇಶ್ ಕತ್ತಿ ಹಾಗೂ ಶಾಸಕ ಶ್ರೀಮಂತ ಪಾಟೀಲ್ ಮಾಲೀಕತ್ವದ ಕಾರ್ಖಾನೆಗಳು ಸೇರಿದಂತೆ ಒಟ್ಟು 9 ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶಿಸಿದ್ದಾರೆ. 

ರೈತರಿಗೆ ನಿಗದಿತ ಅವಧಿಯೊಳಗೆ ಬಿಲ್ ಪಾವತಿಸದ ಹಾಗೂ ಎಫ್‌ಆರ್‌ಪಿ ದರದಂತೆ ಪ್ರಸಕ್ತ ಹಂಗಾಮಿನಲ್ಲಿ ಬಿಲ್ ಪಾವತಿಸಿದ ಜಿಲ್ಲೆಯ ೯ ಕಾರ್ಖಾನೆಗಳು ಒಟ್ಟು 350 .71 ಕೋಟಿ ರು. ಬಾಕಿ ಉಳಿಸಿಕೊಂಡಿದ್ದು, ಈ ಕಾರ್ಖಾನೆಗಳ ಮುಟ್ಟುಗೋಲಿಗೆ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಜೂ. 15 ರಂದು ಕಾರ್ಖಾನೆ ವ್ಯಾಪ್ತಿಯ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ. 

ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ದರದಲ್ಲಿ ಕಬ್ಬಿನ ಬಿಲ್ ನೀಡದಿರುವ ಸಕ್ಕರೆ ಕಾರ್ಖಾನೆಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ 2019ರ ಜ. 3 ರಂದು ನೋಟಿಸ್  ನೀಡಿದ್ದರು. ಜತೆಗೆ ಜ.11ರೊಳಗೆ ಪ್ರಸಕ್ತ ಹಂಗಾಮಿಗೆ ಬಿಲ್ ಪಾವತಿಗೆ ಕ್ರಮಕೈಗೊಂಡಿ
ದ್ದರು. ಈ ವೇಳೆ ಕೆಲವರು ಪಾವತಿಸಿದ್ದರೂ, ಇನ್ನೂ ಕೆಲವರು ಬಾಕಿ ಉಳಿಸಿಕೊಂಡಿರು ವುದರಿಂದ ಜಪ್ತಿಗೆ ಆದೇಶಿಸಿದ್ದಾರೆ.