Asianet Suvarna News Asianet Suvarna News

ಅರಸರ ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭ : ಹರೀಶ್ ಗೌಡ

Beginning of Political Life in Karmabhoomi of Kings: Harish Gowda

Beginning of Political Life in Karmabhoomi of Kings: Harish Gowda snr
Author
First Published Apr 27, 2023, 5:57 AM IST

  ಹುಣಸೂರು :  ಅರಸರ ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯವೆಂದು ಜೆಡಿಎಸ್‌ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ತಿ ದಿವಂಗತ ದೇವರಾಜ ಅರಸರ ಹುಟ್ಟೂರು ಕಲ್ಲಹಳ್ಳಿಯಲ್ಲಿ ಬುಧವಾರ ಮತಯಾಚನೆ ನಡೆಸಿ ಅವರು ಮಾತನಾಡಿದರು.

ದನಿ ಇಲ್ಲದವರಿಗೆ ದನಿಯಾಗಿ ದೇಶಾದ್ಯಂತ ತಮ್ಮ ಆಡಳಿತ ವೈಶಿಷ್ಟ್ಯತೆಗೆ ಪ್ರಸಿದ್ಧಿ ಪಡೆದ ಅರಸರ ನೆಲದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ. ಜನತೆ ಪ್ರೀತಿಯಿಂದ ಆದರಿಸುತ್ತಿದ್ದಾರೆ. ತಾಲೂಕಿನಾದ್ಯಂತ ಜನರ ಪ್ರೀತಿ ವಿಶ್ವಾಸ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಜಾತಿ, ಮತ, ಧರ್ಮಗಳನ್ನು ನೋಡದೇ ಕೇವಲ ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡು ದುಡಿದ ನನ್ನ ತಂದೆಯವರ ಕಾರ್ಯವೈಖರಿಯಿಂದಾಗಿಯೇ ಜನರು ಇಂದಿಗೂ ನಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮತದಾರರ ಮನೆಮನೆಗೆ ತೆರಳಿ ಪಕ್ಷದ ಬೆಂಬಲಕ್ಕೆ ಕೋರಬೇಕು. ಗ್ರಾಮಗಳಲ್ಲಿ ಒಡೆದ ಮನಸುಗಳನ್ನು ಒಂದಾಗಿಸಿ ಅಭಿವೃದ್ಧಿಯತ್ತ ಚಿತ್ರ ಹರಿಸುವಂತೆ ಮಾಢುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದು ಕಿವಿಮಾತು ಹೇಳಿದರು.

ಜಿಪಂ ಮಾಜಿ ಸದಸ್ಯ ಸಿ.ಟಿ. ರಾಜಣ್ಣ ಮಾತನಾಡಿ, ಚುನಾವಣಾ ಸಮಯದಲ್ಲಿ ಜಿ.ಡಿ. ಹರೀಶ್‌ಗೌಡರ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಅದಕ್ಕೆ ಕಿವಿಗೊಡದೆ ರೈತ ಪರ ದನಿಯೆತ್ತುವ ಜೆಡಿಎಸ್‌ ಅನ್ನು ಬೆಂಬಲಿಸಬೇಕೆಂದು ಕೋರಿದರು.

ತಾಲೂಕು ಅಧ್ಯಕ್ಷ ದೇವರಾಜ್‌ ಒಡೆಯರ್‌, ಜೆಡಿಎಸ್‌ ಪಕ್ಷದ ಮುಖಂಡರಾದ ರಂಜಿತಾ ಚಿಕ್ಕಮಾದು, ಶ್ರೀಧರ್‌, ಬಸವಣ್ಣ, ಪಟೇಲ್‌, ಶಿವಶಂಕರ್‌, ರಮೇಶ್‌, ವೆಂಕಟೇಶ್‌ ಹಾಗೂ ಕಲ್ಲಳ್ಳಿ ಗ್ರಾಮಸ್ಥರು ಇದ್ದರು.

ಹಲವರು ಜೆಡಿಎಸ್ ಸೇರ್ಪಡೆ

ಹುಣಸೂರು (ನ.15):  ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಸಮೀಪದ ರಾಮನ ಹಳ್ಳಿ ಗ್ರಾಮದ ಲೋಕೇಶ್‌, ಮಹದೇವ ಸ್ವಾಮಿ, ಬೋರ ನಾಯ್ಕ, ಸಿದ್ದ ನಾಯ್ಕ, ಮುನಿರ್‌, ರಾಘು ಶೆಟ್ಟಿ, ಚಂದ್ರ ಶೆಟ್ಟಿ, ವಿಶ್ವೇಶ ಶೆಟ್ಟಿ, ಲೋಕೇಶ್‌, ಜಾಕಿ ರಮೇಶ್‌, ಸಿದ್ದರಾಜು, ಮಂಜುನಾಥ್‌ ಅಪಾರ ಬೆಂಬಲಿಗರು ಸೇರ್ಪಡೆಯಾದರು.

ನಂತರ ಹರೀಶ್‌ ಗೌಡ ಅವರು ಮಾತನಾಡಿ, ನಿರಂತರ ಕಾರ್ಯಗಳಿಂದ ಜೆಡಿಎಸ್‌ (JDS)  ಜನ ಮನ್ನಣೆ ಪಡೆಯುತ್ತಿದ್ದು, ರಾಜ್ಯದ (Karnataka)  ಬಹುತೇಕ ಜನ ಜೆಡಿಎಸ್‌ ಕಾರ್ಯಕರ್ತರಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಕೆಎಂಎಫ್‌ ನಿರ್ದೇಶಕ ಕೆ.ಎಸ್‌. ಕುಮಾರ್‌, ಬಿಳಿಕೆರೆ ಗ್ರಾಪಂ ಅಧ್ಯಕ್ಷ ರಾಜೇಶ್‌, ಬಿಳಿಕೆರೆ ಮಧು, ಸತೀಶ ಪಾಪಣ್ಣ, ಜಿಪಂ ಮಾಜಿ ಸದಸ್ಯ ಸುರೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್‌, ಕೆಂಪೇಗೌಡ, ಸತೀಶ್‌ ಇದ್ದರು.

ರೈತರ ಪರವಾಗಿ ಕೆಲಸ ಮಾಡಿದ ಜೆಡಿಎಸ್‌ - ಜೆಡಿಎಸ್‌ ಪಕ್ಷದ ಕಾರ್ಯಕಾರಣಿ ಸಭೆ; ಹಲವರು ಜೆಡಿಎಸ್‌ಗೆ ಸೇರ್ಪಡೆ

 ತಾಳಿಕೋಟೆ :  ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸಾಕಷ್ಟುಇದ್ದರೂ ಕೂಡಾ ರೈತರ ಪರ ಕಾಳಜಿ ಉಳ್ಳ ಪಕ್ಷ ಮಾತ್ರ ಜೆಡಿಎಸ್‌ ಮಾತ್ರ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್‌ ನಾಯಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು.

ಸೋಮವಾರ ತಾಲೂಕಿನ ಬೇಕಿನಾಳ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಬಲ ತುಂಬುವ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕಾದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆ ಎದುರಿಸಬೇಕಿದೆ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು, ಆಗಿನ ಅವಧಿಯಲ್ಲಿ .9 ಸಾವಿರ ಕೋಟಿ ಬಿಡುಗಡೆ ಮಾಡಿ ಆಲಮಟ್ಟಿಡ್ಯಾಂ ಎತ್ತರಿಸಿ ಈ ಭಾಗಕ್ಕೆ ನೀರು ಸಿಗುವಂತೆ ಮಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನವರು ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿವೆ ಎಂದರು.

ಜೆಡಿಎಸ್‌ ಪಕ್ಷದ ತಾಲೂಕು ಕಾರ್ಯಾಧ್ಯಕ್ಷ ಮಡುಸೌಕಾರ ಬಿರಾದಾರ ಮಾತನಾಡಿ, ಜೆಡಿಎಸ್‌ನ ನಾಯಕ ರಾಜುಗೌಡ ಪಾಟೀಲ ಹೃದಯವಂತರಾಗಿದ್ದಾರೆ. 15 ವರ್ಷಗಳಿಂದ ಕಾರ್ಯಕರ್ತರನ್ನು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾ ಸಾಗಿದ್ದಾರೆ. 2023ರಲ್ಲಿ ರಾಜುಗೌಡರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಸಮಾನತೆ ತರಬೇಕಿದೆ ಎಂದರು.

Follow Us:
Download App:
  • android
  • ios