ವಿಜಯಪುರ: ಸುಡು ಬಿಸಿಲಿಗೆ ಬೇಸತ್ತು ಬಿಯರ್‌ ಮೊರೆ ಹೋದ ಮದ್ಯಪ್ರಿಯರು..!

ಕಳೆದ 2ದಶಕಗಳಲ್ಲೇ ಬಿಸಿಲು 45 ಡಿಗ್ರಿ ತಲುಪುವ ಮೂಲಕ ಗುಮ್ಮಟನಗರಿ ಜನರನ್ನ ಕಂಗೆಡುವಂತೆ ಮಾಡಿದೆ. ಹೀಗಾಗಿ ರಮ್‌, ವಿಸ್ಕಿ, ಬೇರೆ ರೀತಿಯ ಮದ್ಯಗಳನ್ನ ಕುಡಿಯುತ್ತಿದ್ದ ಮದ್ಯಪ್ರಿಯರು ಚಿಲ್ಡ್‌ ಬಿಯರ್‌ ಮೊರೆ ಹೋಗಿದ್ದಾರೆ. ಚಿಲ್ಡ್‌ ಬಿಯರ್‌ ಕುಡಿದ್ರೆ ದೇಹಕ್ಕೆ ತಂಪು ಅಂತಾ ಮದ್ಯಪ್ರಿಯರು ಹಾಟ್‌ ಡ್ರಿಂಕ್ಸ್‌ ಗಳಿಗೆ ಕೊಕ್‌ ಕೊಟ್ಟು ಬಿಯರ್‌ ಕುಡಿಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿಗ ಬಿಯರ್‌ ಬಾರಿ ಡಿಮ್ಯಾಂಡ್‌ ಬಂದಿದೆ.

Beer Sales Increased in Vijayapura Due to Summer Season grg

- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ(ಮೇ.21): ಮೊದಲೆ ಬರದ ನಾಡು ಅಂತ ಕುಖ್ಯಾತಿಗೆ ಒಳಗಾಗಿರೋ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಬಿಸಿಲು ಜನರ ಕಂಗೆಡುವಂತೆ ಮಾಡಿದೆ. ಅಲ್ಲದೆ ಈ ವರ್ಷ ಬಿಸಿಲ ತಾಪಮಾಣ 43 ರಿಂದ 45ಡಿಗ್ರಿ ತಲುಪಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬಿಸಿಲಿಗೆ ಬೇಸತ್ತ ಮದ್ಯಪ್ರಿಯರು ಬಿಯರ್‌ ಮೊರೆ ಹೋಗಿದ್ದಾರೆ. ಪರಿಣಾಮ ಕಳೆದ ದಶಕದಲ್ಲೆ ಬಿಯರ್‌ ಅತ್ಯಧಿಕ ಮಾರಾಟವಾಗಿ ದಾಖಲೆ ಬರೆದಿದೆ.

ಬಿಸಿಲಿಗೆ ಬೇಸತ್ತು ಬಿಯರ್‌ಗೆ ಮೊರೆ..!

ಕಳೆದ 2ದಶಕಗಳಲ್ಲೇ ಬಿಸಿಲು 45 ಡಿಗ್ರಿ ತಲುಪುವ ಮೂಲಕ ಗುಮ್ಮಟನಗರಿ ಜನರನ್ನ ಕಂಗೆಡುವಂತೆ ಮಾಡಿದೆ. ಹೀಗಾಗಿ ರಮ್‌, ವಿಸ್ಕಿ, ಬೇರೆ ರೀತಿಯ ಮದ್ಯಗಳನ್ನ ಕುಡಿಯುತ್ತಿದ್ದ ಮದ್ಯಪ್ರಿಯರು ಚಿಲ್ಡ್‌ ಬಿಯರ್‌ ಮೊರೆ ಹೋಗಿದ್ದಾರೆ. ಚಿಲ್ಡ್‌ ಬಿಯರ್‌ ಕುಡಿದ್ರೆ ದೇಹಕ್ಕೆ ತಂಪು ಅಂತಾ ಮದ್ಯಪ್ರಿಯರು ಹಾಟ್‌ ಡ್ರಿಂಕ್ಸ್‌ ಗಳಿಗೆ ಕೊಕ್‌ ಕೊಟ್ಟು ಬಿಯರ್‌ ಕುಡಿಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿಗ ಬಿಯರ್‌ ಬಾರಿ ಡಿಮ್ಯಾಂಡ್‌ ಬಂದಿದೆ.

4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು

ದಶಕದಲ್ಲೇ ಅತಿ ಹೆಚ್ಚು ಬಿಯರ್‌ ಮಾರಾಟ..!

ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿಸ್ಕಿಂತ ಬಿಯರ್‌ ಹೆಚ್ಚು ಮಾರಾಟವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ 2023 ಮಾರ್ಚ್ ತಿಂಗಳಲ್ಲಿ ಬಿಯರ್‌ 73374 ಬಾಕ್ಸ್ ಮಾರಾಟವಾಗಿದ್ರೆ,  ಏಪ್ರಿಲ್ ತಿಂಗಳಲ್ಲಿ 70443 ಬಾಕ್ಸ್ ,ಮೇ ತಿಂಗಳಲ್ಲಿ 24865 ಬಾಕ್ಸ್ ಮಾರಾಟವಾಗಿದ್ದವು. 2024 ಮಾರ್ಚ್ ತಿಂಗಳಲ್ಲಿ 84294 ಬಾಕ್ಸ್ , ಏಪ್ರಿಲ್ ತಿಂಗಳಲ್ಲಿ 88265 ಬಾಕ್ಸ್ ,ಮೇ  17ವರೆಗೆ 45616 ಬಾಕ್ಸ್ ಮಾರಾಟವಾಗುವ ಮೂಲಕ ದಾಖಲೆ ಪ್ರಮಾಣದಲ್ಲಿ ಬಿಯರ್ ಸೇಲ್ ಆಗಿದೆ. ಹೀಗಾಗಿ ಸರ್ಕಾರಕ್ಕೂ ಆದಾಯ ದುಪ್ಪಟ್ಟು ಪ್ರಮಾಣದಲ್ಲಿ ಸಂಗ್ರಹವಾಗಿದೆ..

ಬಿಯರ್‌ ಯಾಕೆ ಕುಡಿಯೋದು?!

ಬೇಸಿಗೆಯಲ್ಲಿ ಬಿಸಿಲ ತಾಪಕ್ಕೆ ಯಾಕೆ ಬಿಯರ್‌ ಕುಡಿಯುತ್ತಾರೆ? ಇಷ್ಟೊಂದು ಪ್ರಮಾಣದಲ್ಲಿ ಬೀಯರ್‌ ಸೇಲ್‌ ಆಗಿದ್ಯಾಕೆ ಅನ್ನೋದನ್ನ ನೋಡೋದಾದ್ರೆ. ಹಾಟ್‌ ಡಿಂಕ್ಸ್‌ ದೇಹದಲ್ಲಿ ತಾಪಮಾನ ಹೆಚ್ಚಿಸುತ್ವೆ. ಹೀಗಾಗಿ ಚಳಿಗಾಲದಲ್ಲಿ ರಮ್‌, ವಿಸ್ಕಿಯನ್ನ ಹೆಚ್ಚಾಗಿ ಸೇವಿಸಲಾಗುತ್ತೆ. ಬೇಸಿಗೆಯಲ್ಲಿ ಅತಿ ಹೆಚ್ಚಾದ ತಾಪಮಾನದ ನಡುವೆ ಹೆಚ್ಚು ವಿಸ್ಕಿ ಸೇವನೆ ಮಾಡಿದ್ರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ವೆ. ಚರ್ಮ ಸುಕ್ಕುಗಟ್ಟೊದು, ದೇಹದಲ್ಲಿ ಹೀಟ್‌ ಸಮಸ್ಯೆಯಿಂದ ಪೈಲ್ಸ್‌ ಸಮಸ್ಯೆ ಉಂಟಾಗೋ ಸಾಧ್ಯತೆಗಳಿರುತ್ವೆ. ಹೀಗಾಗಿ ಚೀಲ್ಡ್‌ ಬಿಯರ್‌ ಮೊರೆ ಹೋಗೋದು ಕಾಮನ್.‌ ಆದ್ರೆ ಅತಿಯಾದ್ರೆ ಅಮೃತವು ವಿಷ ಅನ್ನೋ ಹಾಗೇ ಬಿಯರ್‌ ಸಹ ಅತಿಯಾದ್ರೆ ದೇಹಕ್ಕೆ ಒಳ್ಳೆಯದಲ್ಲ. 

ಬೇಕಾಬಿಟ್ಟಿ ಬಿಯರ್‌ ಮಾರಾಟ ಆರೋಪ..!

ಬೇಸಿಗೆ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಬೀಯರ್‌ ಸೇಲ್‌ ಆಗ್ತಿದ್ರೆ, ಇತ್ತ ಬಾರ್‌, ವೈನ್‌ ಶಾಪ್‌ ಮಾಲಿಕರು ಮದ್ಯಪ್ರಿಯರನ್ನ ಯಾಮಾರಿಸೋ ಕೆಲಸ ಮಾಡ್ತಿದ್ದಾರೆ. ಬಾರ್ ಗಳಲ್ಲಿ ತಮಗೆ ಮನಸ್ಸಿ ಬಂದ ಬ್ರಾಂಡನ್ನು ಗ್ರಾಹಕರಿಗೆ ನೀಡ್ತಿದ್ದಾರೆ. ಗ್ರಾಹಕರು ಕೇಳುವ ಬಿಯರ್‌ ಬ್ರಾಂಡ್ ಬಿಟ್ಟು ತಮಗೆ ಕಮಿಷನ್ ಸಿಗುವ ಬ್ರಾಂಡುಗಳನ್ನು ಸೇಲ್ ಮಾಡ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಎಂ ಆರ್ ಪಿ ಕಿಂತಲೂ ಹೆಚ್ಚಿನ ದರಕ್ಕೆ ಬಿಯರ್‌ ಮಾರಾಟ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆ ಅಬಕಾರಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮದ್ಯ ಪ್ರೇಮಿಗಳು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios