ಬೇಡಜಂಗಮ ಪ್ರಮಾಣಪತ್ರ; 18ರಂದು ವಿಧಾನಸೌಧ ಚಲೋ

  • 18ರಂದು ವಿಧಾನಸೌಧ ಚಲೋ: ಜಂಗಮರಿಗೆ ಮನವಿ
  • ತಾಲೂಕಿನ ಜಂಗಮರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಳ್ಳುವಂತೆ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ಕರೆ
  • ಸತ್ಯ ಪ್ರತಿಪಾದನಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ್‌ ನೇತೃತ್ವದಲ್ಲಿ ಹೋರಾಟ
beda jangama caste certificate demand Vidhanasoudha chalo on oct 18 rav

ಶಿಕಾರಿಪುರ (ಅ.12) : ಬೇಡ ಜಂಗಮ ಪ್ರಮಾಣಪತ್ರಕ್ಕಾಗಿ ಕಳೆದ ಹಲವು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೇಡ ಜಂಗಮ ಸತ್ಯ ಪ್ರತಿಪಾದನಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ್‌ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಭಾಗವಾಗಿ ಅ. 18ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ದಿಸೆಯಲ್ಲಿ ನಡೆಯಲಿರುವ ನಿರ್ಣಾಯಕ ಹೋರಾಟದಲ್ಲಿ ತಾಲೂಕಿನ ಎಲ್ಲ ಜಂಗಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ ಎಂದು ತಾಲೂಕು ವೀರಶೈವ ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಬೇಡ ಜಂಗಮ ಜನಾಂಗಕ್ಕೆ ಪ.ಜಾತಿ ಮೀಸಲಾತಿ ಬೇಡ: ಎಚ್‌.ಸಿ. ಮಹದೇವಪ್ಪ

ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಪೀಠದ ಅನುಯಾಯಿಗಳು, ವೀರಶೈವ ಲಿಂಗಾಯಿತರಾದ ಜಂಗಮರು ವೀರಶೈವರಿಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದು 1978ರಲ್ಲಿಯೇ ಬೇಡ ಜಂಗಮರಿಗೆ ಸರ್ಕಾರ ಪ್ರಮಾಣ ಪತ್ರ ವಿತರಿಸಲು ಸ್ಪಷ್ಟವಾದ ಆದೇಶವಿದೆ. ಅಕ್ಕಪಕ್ಕದ ರಾಜ್ಯದಲ್ಲಿ ನೀಡುತ್ತಿರುವ ಪ್ರಮಾಣ ಪತ್ರವನ್ನು ರಾಜ್ಯಲ್ಲಿಯೂ ವಿತರಿಸುವಂತೆ ಆಗ್ರಹಿಸಿ ಕಳೆದ 104 ದಿನದಿಂದ ಸತ್ಯಪ್ರತಿಪಾದನಾ

ಸಮಿತಿ ಅಧ್ಯಕ್ಷ ಬಿ.ಡಿ. ಹಿರೇಮಠ್‌ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಹೋರಾಟಕ್ಕೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನು ಸರ್ಕಾರ ಈವರೆಗೆ ವ್ಯಕ್ತಪಡಿಸಿಲ್ಲ. ಈ ದಿಸೆಯಲ್ಲಿ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಶಕ್ತಿ ಪ್ರದರ್ಶನದ ಅಗತ್ಯವಿದೆ ಎಂದು ತಿಳಿಸಿದರು.

ಇದೇ 18ರಂದು ಬಿ.ಡಿ ಹಿರೇಮಠ್‌ ನೇತೃತ್ವದಲ್ಲಿ ಹೋರಾಟ ಸಮಿತಿ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲ ಜಂಗಮರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಸಮಸ್ತರೂ ಸಮಿತಿ ಹೋರಾಟವನ್ನು ಬೆಂಬಲಿಸಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ವೀರಶೈವ ಜಂಗಮ ಜಿಲ್ಲಾ ಸಮಿತಿ ಸದಸ್ಯ ಐ.ಎಂ. ಶಿವಾನಂದಸ್ವಾಮಿ ಮಾತನಾಡಿ, ಬೇಡ ಜಂಗಮ ಹೋರಾಟ ಹೊಸತಲ್ಲ. ಅಂಬೇಡ್ಕರ್‌ರವರು ರಾಷ್ಟ್ರಮಟ್ಟದಲ್ಲಿ ಜಾತಿ ವಿಂಗಡಿಸುವಾಗ 101 ವಿವಿಧ ಜಾತಿ ಪಟ್ಟಿಯಲ್ಲಿ ಬೇಡ ಜಂಗಮವನ್ನು ಕ್ರಮ ಸಂಖ್ಯೆ 19ರಲ್ಲಿ ನಮೂದಿಸಲಾಗಿದೆ. ಸರ್ಕಾರದ ಸೌಲಭ್ಯವನ್ನು ಇದುವರೆಗೂ ಕೇವಲ 17-18 ಜಾತಿ ಸಮುದಾಯ ಮಾತ್ರ ಪಡೆಯುತ್ತಿದ್ದು, ಇನ್ನುಳಿದ ಎಲ್ಲಾ ಜಾತಿ ವರ್ಗದವರಿಗೂ ಸೌಲಭ್ಯ ದೊರೆಯಬೇಕು ಎಂಬುದು ಬಿ.ಡಿ ಹಿರೇಮಠ್‌ ರವರ ನ್ಯಾಯಸಮ್ಮತವಾದ ಆಗ್ರಹವಾಗಿದ್ದು ಇದರಲ್ಲಿ ಬೇಡ ಜಂಗಮ ಸಮಾಜ ಸಹ ಸೇರಿದೆ ಎಂದು ತಿಳಿಸಿದರು.

ಜಾತಿ ಪ್ರಮಾಣ ಪತ್ರಕ್ಕಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಮೇರೆಗೆ 1975ರ ಜ.1ರಂದು ಪ್ರಮಾಣ ಪತ್ರ ವಿತರಿಸುವಂತೆ ಸ್ವಷ್ಟವಾದ ಆದೇಶದ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ 10 ಸಾವಿರ ಜಂಗಮರಿಗೆ ವಿತರಿಸಲಾಗಿದೆ ಎಂದು ತಿಳಿಸಿದ ಅವರು, ಮಹಾರಾಷ್ಟ್ರದಲ್ಲಿ ಪ್ರಮಾಣಪತ್ರ ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ದಿಸೆಯಲ್ಲಿ ಸರ್ಕಾರ ಆದೇಶ ಸರಳೀಕರಿಸಿ ಜಿಲ್ಲಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸುವ ಹಕ್ಕು ನೀಡಬೇಕಾಗಿದೆ ಎಂದು ಆಗ್ರಹಿಸಿದರು.

ಎಸ್‌ಸಿ ಮೀಸಲಿಗೆ ಬೇಡ ಜಂಗಮರ ಹೋರಾಟ, ಹೋರಾಟಗಾರರನ್ನು ತಡೆದಿದ್ದಕ್ಕೆ ಟ್ರಾಫಿಕ್‌ ಜಾಮ್‌

ಗೋಷ್ಠಿಯಲ್ಲಿ ವೀರಮಹೇಶ್ವರ ಪತ್ತು ಬೆಳೆಸುವ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾ. ಜಂಗಮ ಸಮಾಜದ ಕಾರ್ಯದರ್ಶಿ ಪ್ರಭುಸ್ವಾಮಿ ಕಾನಳ್ಳಿ, ಶಿಕ್ಷಣ ಇಲಾಖೆ ನಿವೃತ್ತ ಸಿಬ್ಬಂದಿ ಚನ್ನಬಸವಯ್ಯ, ಮುಖಂಡ ಬೋಜರಾಜ ಪಾಟೀಲ್‌, ಪಟ್ಟದಯ್ಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios