ಮಂಡ್ಯ(ಡಿ.18): ಸಕ್ಕರೆ ನಾಡಿನಲ್ಲಿ ಹಾಲಿ ಶಾಸಕರ ನಡುವೆ ವಾಕ್ಸಮರ ಮುಂದುವರಿದಿದೆ. ಹಾಲಿ ಶಾಸಕರುಗಳ ನಡುವೆ ತೀವ್ರ ವಾಗ್ದಾಳಿ ನಡೆದಿದ್ದು, ಕೆ.ಆರ್‌. ಪೇಟೆ ಶಾಸಕ ಕೆ. ಸಿ. ನಾರಾಯಣ ಗೌಡ ಸಿ. ಎಸ್‌. ಪುಟ್ಟರಾಜು ವಿರುದ್ಧ ಕಿಡಿ ಕಾರಿದ್ದಾರೆ.

ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ ಹಾಗೂ ಮೇಲುಕೋಟೆ ಶಾಸಕ ಪುಟ್ಟರಾಜು ನಡುವೆ ವಾಕ್ ಸಮರ ನಡೆದಿದ್ದು, ನಾರಾಯಣಗೌಡಗೆ ಕಳೆದ ಚುನಾವಣೆಯಲ್ಲಿ ಟಿಕೆಟ್‌ ಕೊಡಿಸಿದ್ದು ನಾನು ಎಂದು ಪುಟ್ಟರಾಜು ಹೇಳಿದ್ದರು. ಇದೀಗ ಪುಟ್ಟರಾಜು ಹೇಳಿಕೆಗೆ ಕೌಂಟರ್ ಕೊಟ್ಟಿರುವ ನಾರಾಯಣಗೌಡ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರ: ನಾಯಿಗಳ ದಾಳಿಗೆ 16 ಕುರಿ ಬಲಿ, 8ಕ್ಕೆ ಗಾಯ

ನನಗೆ ಬಿ ಫಾಂ, ಸಿ ಫಾಂ ಕೊಟ್ಟಿದ್ದು ಅವರೇ ಎಂದು ಮಾತಾಡುತ್ತಾರೆ. ಸ್ವಾಮಿ ನಿಮ್ಮ ಬಿ ಫಾಂಅನ್ನು ನಾನು ಯಾರ ಬಳಿ ತಂದಿದ್ದೇನೆ ಎಂದು ಮರಿಬೇಡಿ. ನಿಮ್ಮ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯಾರು ಓಡಾಡಿದ್ದು ಯಾರು ಎಂದು ಮರೆಯಬೇಡಿ. ಹೆಚ್ಚಿಗೆ ಟೀಕೆ ಟಿಪ್ಪಣಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ವಾಗ್ದಾಳಿ ಶಾಸಕ ನಾರಾಯಣಗೌಡ ತಿರುಗೇಟು ನೀಡಿ, ಎಂಪಿ ಚುನಾವಣೆಯಲ್ಲಿ ಪುಟ್ಟರಾಜುಗೆ ಬಿ ಫಾಂ ಸಿಗಲು ನಾನು ಕಾರಣ. ಚುನಾವಣೆಯಲ್ಲಿ ನಾನು ಜಿಲ್ಲೆಯಾದ್ಯಂತ ಓಡಾಡಿದ್ದೇನೆ ಎಂದಿದ್ದಾರೆ. ಪರೋಕ್ಷವಾಗಿ ಪುಟ್ಟರಾಜು ಎಂಪಿ ಆಗಲು ನಾನು ಕಾರಣ ಎಂದು ನಾರಾಯಣಗೌಡ ಹೇಳಿದ್ದಾರೆ.

ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಕೃಷಿ ಅಧಿಕಾರಿ