Asianet Suvarna News Asianet Suvarna News

ಶಿವಮೊಗ್ಗ: ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಕರಡಿ ಸಾವು

ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಕರಡಿ ಮೃತಪಟ್ಟಿದೆ. ಈ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಗಳಲ್ಲಿ ಕರಡಿಗಳಿದ್ದು, ಸಾಮಾನ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಉದಾಹರಣೆಗಳಿಲ್ಲ.

Bear Dies in Road Accident in Shivamogga
Author
Bangalore, First Published Aug 1, 2019, 2:13 PM IST
  • Facebook
  • Twitter
  • Whatsapp

ಶಿವಮೊಗ್ಗ(ಆ.01): ಭದ್ರಾವತಿ ತಾಲೂಕಿನ ಅಗರದಳ್ಳಿ ಗ್ರಾಮದ ಬಳಿ ಮಂಗಳವಾರ ರಾತ್ರಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರಡಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಕರಡಿ ಮೃತದೇಹವನ್ನು ವಶಕ್ಕೆ ಪಡೆದು, ಪೋಸ್ಟ್‌ ಮಾರ್ಟ್‌ಂ ಮಾಡಿ ಅಂತ್ಯ ಸಂಸ್ಕಾರ ನಡೆಸಿದರು.

ಕಾಳಿ ಅರಣ್ಯದಲ್ಲಿ ಹುಲಿ, ಚಿರತೆಗೆ 23 ನೀರಿನ ತೊಟ್ಟಿ

ಕಳೆದ ತಿಂಗಳು ಕುಂಸಿ ಬಳಿಯೂ ಇದೇ ರೀತಿ ಘಟನೆ ನಡೆದು ಕರಡಿ ಮೃತಪಟ್ಟಿತ್ತು. ಶಿವಮೊಗ್ಗದ ಕೆಲವೇ ಪ್ರದೇಶಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಕರಡಿಗಳಿದ್ದು, ಸಾಮಾನ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಉದಾಹರಣೆಯೇ ಇಲ್ಲ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios