Asianet Suvarna News Asianet Suvarna News

ಬಿಬಿಎಂಪಿ ಹೊಸ ಜಾಹೀರಾತು ನೀತಿ ಏಜೆನ್ಸಿಗೆ ಮಾತ್ರ ಅನುಕೂಲ: ಎನ್.ಆರ್.ರಮೇಶ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಯಾವುದೇ ಆದಾಯ ಇಲ್ಲದ ಮತ್ತು ವಂಚಕ ಜಾಹೀರಾತು ಏಜೆನ್ಸಿಗಳಿಗೆ ಅನುಕೂಲವಾಗುವ ಹೊಸ ಜಾಹೀರಾತು ನೀತಿಯನ್ನು ತಕ್ಷಣ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

BBMPs new ad policy agency only benefit Says Bjp Leader NR Ramesh gvd
Author
First Published Aug 4, 2024, 11:57 PM IST | Last Updated Aug 5, 2024, 9:17 AM IST

ಬೆಂಗಳೂರು (ಆ.04): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಯಾವುದೇ ಆದಾಯ ಇಲ್ಲದ ಮತ್ತು ವಂಚಕ ಜಾಹೀರಾತು ಏಜೆನ್ಸಿಗಳಿಗೆ ಅನುಕೂಲವಾಗುವ ಹೊಸ ಜಾಹೀರಾತು ನೀತಿಯನ್ನು ತಕ್ಷಣ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ. ನೂತನ ಜಾಹೀರಾತಿನಿಂದ ಪ್ರಭಾವ ಶಾಲಿ ರಾಜಕಾರಣಿಗಳು, ಅಧಿಕಾರಿಗಳಿಗೆ ಹತ್ತಾರು ಕೋಟಿ ರು. ಅಕ್ರಮ ಸಂಪಾದನೆಗೆ ದಾರಿ ಮಾಡಿಕೊಡುವ ದುರುದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಮುಖ್ಯ ರಸ್ತೆಗಳಲ್ಲಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡುವ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವನ್ನು ಪಾಲಿಕೆ ನೀಡಲಾಗಿದೆ. ಈ ನೀತಿಯಿಂದ ಪಾಲಿಕೆಗೆ ನಿರೀಕ್ಷಿಸಿದಷ್ಟು ಆದಾಯ ಬರುವುದಿಲ್ಲ, ರಸ್ತೆ ಬದಿಯಲ್ಲಿ ಜಾಹೀರಾತು ಫಲಕ ಗಳನ್ನು ಅಳವಡಿ ಸುವು ದರಿಂದ ಪ್ರತೀ ನಿತ್ಯ ಹತ್ತಾರು ಅಪಘಾತಗಳು ಸಂಭವಿ ಸುವ ಅವಕಾಶಗಳೇ ಅಧಿಕವಾ ಗಿರುತ್ತದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೋಲೀಸರ ಅಭಿಪ್ರಾಯ ವನ್ನೂ ಸಹ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕಡೆಗಣಿಸಿದೆ ಎಂದಿದ್ದಾರೆ. 

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್‌ ಶೆಟ್ಟರ್

ಜಾಹೀರಾತು ಏಜೆನ್ಸಿಗಳ ವಂಚಕರಿಂದ ಪಾಲಿಕೆಗೆ ಸಂದಾಯವಾಗ ಬೇಕಿರುವ ಒಟು 646 ಕೋಟಿ ರು. ನಷ್ಟು ಬೃಹತ್ ಮೊತ್ತದ ಜಾಹೀರಾತು ಶುಲ್ಕವನ್ನು ವಸೂಲಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಅದರ ಬದಲು ನೂರಾರು ವಂಚಕ ಜಾಹೀ ರಾತು ಏಜೆನ್ಸಿಗಳಿಂದ ನೂರಾರು ಕೋಟಿ ರು. ಅನ್ನು ಕಿಕ್‌ ಬ್ಯಾಕ್ ಕ್ ರೂಪದಲ್ಲಿ ಪಡೆದು, ನ್ಯಾಯಾಲಯಗಳ ಆದೇಶಗಳನ್ನು, ಹಿಂದಿನ ಸರ್ಕಾರಿ ಆದೇಶಗಳನ್ನು, ಪಾಲಿಕೆಯ ಸರ್ವಾನುಮತದ ನಿರ್ಣಯಗಳನ್ನು ಕಡೆಗ ಣಿಸಲಾಗುತ್ತಿದೆ. ಉದ್ಯಾನ ನಗರಿಯ ಅಂದ ಹಾಳುಗೆ ಡಹುವ ಮತ್ತು ಪ್ರತೀ ನಿತ್ಯ ಹತ್ತಾರು ಅಪಘಾತಗಳಿಗೆ ಕಾರಣವಾಗುವ ನಿರ್ಣಯವನ್ನು ಕೈಗೊಂಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

ಬಿಬಿಎಂಪಿಗೆ ಹೆಚ್ಚುವರಿ ₹750 ಕೋಟಿ ಸಂಗ್ರಹ: ಆಸ್ತಿ ತೆರಿಗೆ ಪಾವತಿದಾರರಿಗೆ ಜುಲೈ ಅಂತ್ಯದ ವರೆಗೆ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒನ್‌ ಟೈಮ್ ಸೆಟ್‌ಲ್ಮೆಂಟ್‌’ (ಒಟಿಎಸ್‌) ಯೋಜನೆ ಜಾರಿಯಿಂದ ಕಳೆದ ವರ್ಷಕ್ಕಿಂತ ₹750 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 2023 ಏಪ್ರಿಲ್‌ನಿಂದ ಜುಲೈ 31ಕ್ಕೆ ₹2,457 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ ಈ ಬಾರಿ ₹3,200 ಕೋಟಿ ಆಗಿದ್ದು ಸುಮಾರು ₹750 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ

ಈ ಬಾರಿ ಜುಲೈ ಅಂತ್ಯದವರೆಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡಿಕೆಯಿಂದ ಸುಮಾರು ₹270-300 ಕೋಟಿ ಹೆಚ್ಚುವರಿ ವಸೂಲಿ ಆಗಿದೆ. ಜತೆಗೆ ಓಟಿಎಸ್‌ ಯೋಜನೆ ಜಾರಿ ಫಲವಾಗಿ ಸುಮಾರು 400 ರಿಂದ 450 ಕೋಟಿ ರು. ವಸೂಲಿ ಆಗಿದೆ ಎಂದರು. ಆರ್ಥಿಕ ವರ್ಷದ ಆರಂಭದಲ್ಲಿ 3.95 ಲಕ್ಷ ಆಸ್ತಿಗಳಿಂದ ₹733.71 ಕೋಟಿ ಆಸ್ತಿ ತೆರಿಗೆ ಸುಸ್ತಿ ವಸೂಲಿ ಬಾಕಿ ಇತ್ತು. ಈ ಪೈಕಿ 1.07 ಲಕ್ಷ ಆಸ್ತಿ ಮಾಲೀಕರು ₹217 ಕೋಟಿ ಬಾಕಿ ಪಾವತಿಸಿದ್ದಾರೆ. ಇದರಿಂದ ಸುಸ್ತಿದಾರರ ಸಂಖ್ಯೆ 2.74 ಲಕ್ಷಕ್ಕೆ ಇಳಿಕೆಯಾಗಿದ್ದು, ₹516 ಕೋಟಿ ವಸೂಲಿ ಬಾಕಿ ಇದೆ. ಇನ್ನು ತಪ್ಪಾಗಿ ಮತ್ತು ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಗೊಂಡ 6,723 ಆಸ್ತಿಗಳಿಂದ ₹163.13 ಕೋಟಿ ವಸೂಲಿಯಾಗಿದೆ ಎಂದು ವಿವರಿಸಿದರು.

Latest Videos
Follow Us:
Download App:
  • android
  • ios