ಬೆಂಗಳೂರು[ಜ. 14] ಹಬ್ಬ ಬಂತೆಂದೂ ಸಂಭ್ರಮಿಸುವುದು ಸರಿ. ಸಂಭ್ರಮದ ನಂತರ ಉಂಟಾಗುವ ತ್ಯಾಜ್ಯ, ಕಸ, ಹೂವಿನ ರಾಶಿ, ತರಕಾರಿ ಸಿಪ್ಪೆಯನ್ನು ಕಂಡಕಂಡೆ ಬಿಸಾಡಿದರೆ ನೀವೇ ತೆರವು ಮಾಡಬೇಕಾದೀತು ಎಚ್ಚರಿಕೆ.

ದಾರಿಯಲ್ಲಿ ಉಗುಳಿದ ಪುಣೆ ಯುವಕನ ವಿಡಿಯೋ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತನ ಬಳಿಗೆ ಅವನ ಎಂಜಲನ್ನೇ ಕ್ಲೀನ್ ಮಾಡಿಸಲಾಗಿತ್ತು. ಈಗ ಬಿಬಿಎಂಪಿ ಸಹ ದಿಟ್ಟ ಕ್ರಮಕ್ಕೆ ಮುಂದಾಗಿಉದೆ.

ಸಂಕ್ರಾಂತಿ ಹಬ್ಬದ ಕಸವನ್ನು ಜನರೇ ಕ್ಲೀನ್ ಮಾಡುವಂತೆ ಸೂಚಿಸಿದೆ.  ಕಬ್ಬು, ಹೂವು ಸೇರಿದಂತೆ ಹಲವು ವಸ್ತುಗಳಿಂದ ಉಂಟಾಗುವ ತ್ಯಾಜ್ಯವನ್ನು ಮನೆಯ ಬಳಿ ಬರುವ ಗಾಡಿಗಳಿಗೆ ಹಾಕಬೇಕು. ಬದಲಾಗಿ ರಸ್ತೆಯಲ್ಲಿ ಅಥ್ವಾ ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

ಬಿಬಿಎಂಪಿ ಅಪರ ಆಯುಕ್ತ ರಂದೀಪ್. ಡಿ ಸೂಚನೆ ನೀಡಿದ್ದು  ಕಸವನ್ನು ಕ್ಲೀನ್ ಮಾಡದೆ ಹೋದಲ್ಲಿ ಆಯಾ ವಲಯದ ಪಾಲಿಕೆ ಅಧಿಕಾರಿಗಳಿಂದ ದಂಡ ವಿಧಿಸಲಾಗುತ್ತದೆ. ಕಸ ವಿಲೆವಾರಿ ಮೇಲೆ ನಿಗಾ ಇರಿಸಲಾಗುವುದು ಎಂದು ತಿಳಿಸಿದ್ದಾರೆ.