Asianet Suvarna News Asianet Suvarna News

ರಸ್ತೆ ಗುಂಡಿ ಮುಚ್ಚಲು ಮುಂಬೈ ಮಾಡೆಲ್ ಅನುಸರಿಸಲು ಮುಂದಾದ ಬಿಬಿಎಂಪಿ

ಕಳೆದ ಹಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮತ್ತೆ ಸರ್ವೇ ಕಾರ್ಯ ಆರಂಭಿಸಿ ಮುಂಬೈ ಮಾಡೆಲ್ ಅನುಸರಿಸಲು ಮುಂದಾಗಿದೆ.
 

BBMP to follow Mumbai model to close road potholes gow
Author
Bengaluru, First Published Aug 14, 2022, 9:11 PM IST

ಬೆಂಗಳೂರು ( ಆ.14): ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ರಸ್ತೆಯೆಲ್ಲಾ ಗುಂಡಿಯಾಗಿ ಪರಿವರ್ತನೆಯಾಗಿದೆ.ಎಷ್ಟೇ ಮುಚ್ಚಿದ್ರು ಮಳೆ ಬಿದ್ದ ಸಂದರ್ಭದಲ್ಲಿ ಮತ್ತೆ‌ ಮತ್ತೆ ಕಿತ್ತುಬರ್ತಿರೋ ರಸ್ತೆಗುಂಡಿಗಳಿಂದ ಸವಾರರಿಗೆ ಓಡಾಡಲು ಕಷ್ಟವಾಗುತ್ತಿದೆ. ಇದನ್ನ ತಪ್ಪಿಸಲು ಬಿಬಿಎಂಪಿ ಮುಂಬೈ ಮಾಡೆಲ್ ರೀತಿಯಲ್ಲಿ ಅನುಸರಿಸಲು ಮುಂದಾದಾಗಿದೆ. ಮಳೆಗಾಲದಲ್ಲಿ ಹಾಟ್ ಮಿಕ್ಸ್ ಬಳಸಲಾಗುತ್ತಿಲ್ಲ. ಮಳೆ ನೀರಿದ್ರೂ ಹಾಟ್ ಮಿಕ್ಸ್ ರಸ್ತೆ ಕಾಮಗಾರಿಗೆ ಯೂಸ್ ಲೆಸ್. ಅದಕ್ಕೆ ಕೋಲ್ಡ್ ಮಿಕ್ಸ್ ಬಳಕೆ ಮಾಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಮುಂಬೈನಲ್ಲಿ ಕೋಲ್ಡ್ ಮಿಕ್ಸ್ ಬಳಕೆ ಯಶಸ್ವಿ ಆದ ಬಳಿಕ ಅದೇ ಮಾದರಿಯಲ್ಲಿ ಇಲ್ಲೂ ಜಾರಿಗೆ ತರಲಾಗುತ್ತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಕೋಲ್ಡ್ ಮಿಕ್ಸ್ ನಿಂದ ಕಾಮಗಾರಿ ಶುರು ಮಾಡಲು ಬಿಬಿಎಂಪಿ ಮುಂದಾಗಿದೆ. ಆದ್ರೆ ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್ ನಿಂದ ಬಿಬಿಎಂಪಿ ಪದೇ ಪದೇ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಆಲ್ಲದೆ ಮುಂದಿನ ಎರಡು ತಿಂಗಳು ಮಳೆ ಇರಲಿದ್ದು, ಮಳೆಗಾಲದಲ್ಲಿ ಹಾಟ್ ಪ್ಲಾಂಟ್ ವರ್ಕ್ ಆಗೋದಿಲ್ಲ
ಅದಕ್ಕಾಗಿ ಕೋಲ್ಡ್ ಮಿಕ್ಸ್ ಬಳಕೆ ಮಾಡಲು ಮುಂದಾಗಿದೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 4450 ರಸ್ತೆಗುಂಡಿಗಳಿದ್ದು, ಬಿಬಿಎಂಪಿ 3900 ಪಾಟ್ ಹೋಲ್ ಮುಚ್ಚಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಾಸ್ತವವಾಗಿ ರಸ್ತೆಗುಂಡಿ ಮುಚ್ಚಿದ ಕಡೆ ಮತ್ತೆ ಪಾಟ್ ಹೋಲ್ ಉದ್ಭವಿಸಿವೆ. ಹೀಗಾಗಿ ಮತ್ತೆ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು‌ ಮುಂಬೈ ಮಾದರಿಯನ್ನ ಅನುಸರಿಸಲು ಮುಂದಾಗಿದೆ.

ಏನಿದು ಕೋಲ್ಡ್ ಮಿಕ್ಸ್ ಕಾಮಗಾರಿ?
ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ರು ಯಾವುದೇ ಸಮಸ್ಯೆ ಆಗೋದಿಲ್ಲ. ಪಾಟ್ ಹೋಲ್ ನಲ್ಲಿ ನೀರಿದ್ರೂ ನೋ ಪ್ರಾಬ್ಲಂ, ಮಳೆ ಬರ್ತಿದ್ರೂ ಪಾಟ್ ಹೋಲ್ ಮುಚ್ಚಬಹುದು ಅಂತ  ಕೋಲ್ಡ್ ಕೆಮಿಕಲ್ ಅಡಿಟಿವ್ಸ್ ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತೆ. ಆದ್ರೆ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಹೇಳುವ ಪ್ರಕಾರ ನಿರಂತರ ಮಳೆಯಿಂದ ರಸ್ತೆ ಕಾಮಗಾರಿ ಆಗ್ತಿಲ್ಲ. ಮಳೆಗಾಲಕ್ಕೆ ಕೋಲ್ಡ್ ಮಿಕ್ಸ್ ಬಳಕೆ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಮುಂಬೈ ಮಾದರಿ ವರ್ಕ್ ಶುರುವಾಗುತ್ತೆ. ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮತ್ತೆ ರಸ್ತೆ ಗುಂಡಿ ಹೆಚ್ಚಳ; ಕಳೆದ ಹಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮತ್ತೆ ಸರ್ವೇ ಕಾರ್ಯ ಆರಂಭಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಈ ಹಿಂದೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದ್ದರು.

ಭಾರೀ ಮಳೆ: ಬೆಂಗ್ಳೂರಲ್ಲಿ ಮತ್ತೆ ರಸ್ತೆ ಗುಂಡಿ ಹೆಚ್ಚಳ

ಕಳೆದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ 17,595 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿ 16,739 ಗುಂಡಿಗಳನ್ನು ಮುಚ್ಚಿದೆ. ಇನ್ನೂ 856 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಈ ನಡುವೆ ಭಾರಿ ಮಳೆ ಸುರಿದಿದೆ. ಇದರಿಂದ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಜತೆಗೆ ರಸ್ತೆ ಗುಂಡಿ ಸಮಸ್ಯೆ ಮತ್ತೆ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಆ.5ರಿಂದ ರಸ್ತೆ ಗುಂಡಿಗಳ ಸರ್ವೇ ಕಾರ್ಯ ಆರಂಭಿಸಿದ್ದು, ಸರ್ವೇ ಪೂರ್ಣಗೊಂಡ ನಂತರ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದರು.

ಬಿಬಿಎಂಪಿ ಮಾಜಿ ಉಪಮೇಯರ್ ಹೈಡ್ರಾಮಾ: ಫೇಸ್ಬುಕ್‌ ವಿಡಿಯೋ ಮೂಲಕ ಆತ್ಮಹತ್ಯೆಗೆ ಯತ್ನ!

ಮಳೆಯ ಪ್ರಮಾಣ ಹೆಚ್ಚಳದಿಂದಾಗಿ ಹಾಟ್‌ ಬಿಟುಮಿನ್‌ ಮಿಕ್ಸ್‌ ಹಾಕಿ ರಸ್ತೆ ಮುಚ್ಚುವುದು ಅಸಾಧ್ಯ. ಹೀಗಾಗಿ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ಮೂಲಕ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ನಿರ್ಧರಿಸಿದೆ. ಅದಕ್ಕಾಗಿ ಕಣ್ಣೂರಿನಲ್ಲಿನ ಹಾಟ್‌ ಬಿಟುಮಿನ್‌ ಮಿಕ್ಸ್‌ ಘಟಕದಲ್ಲಿಯೇ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಹಾಟ್‌ ಬಿಟುಮಿನ್‌ ಮಿಕ್ಸ್‌ ಯಂತ್ರಕ್ಕೆ ಪ್ರತ್ಯೇಕ ಯಂತ್ರವನ್ನು ಅಳವಡಿಸಿ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದ್ದರು.

Follow Us:
Download App:
  • android
  • ios