Asianet Suvarna News Asianet Suvarna News

ತ್ಯಾಜ್ಯ ವಿಂಗಡಣೆ ಮಾಡದವರಿಗೆ ದಂಡ ಹೆಚ್ಚಳಕ್ಕೆ ಚಿಂತನೆ

ಕೊಳಗೇರಿ ಮತ್ತು ಅಭಿವೃದ್ಧಿಯಾಗದ ನಗರ ಪ್ರದೇಶದಲ್ಲಿ ಕಸ ವಿಂಗಡಣೆಯ ದಂಡ ಪ್ರಮಾಣ ಕಡಿಮೆ ಮಾಡುವ ಬಗ್ಗೆಯೂ ಚರ್ಚೆ|  ಕೊಳಗೇರಿಯ ನಿವಾಸಿಗಳಿಗೆ ಮೊದಲು ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸಬೇಕು| ಬಿಬಿಎಂಪಿ ಕಸ ನಿರ್ವಹಣೆ ಬೈಲಾ-2019ರ ಅನ್ವಯ ದಂಡ| 

BBMP Thinking for Increase Fine to Those Who Not Sort Garbagegrg
Author
Bengaluru, First Published Oct 1, 2020, 7:30 AM IST
  • Facebook
  • Twitter
  • Whatsapp

ಬೆಂಗಳೂರು(ಅ.01): ನಗರದಲ್ಲಿ ತ್ಯಾಜ್ಯ ವಿಂಗಡಣೆ ಮಾಡದವರಿಗೆ ವಿಧಿಸುವ ದಂಡ ಪ್ರಮಾಣವನ್ನು 2 ಸಾವಿರದಿಂದ 3 ಸಾವಿರಕ್ಕೆ ಹೆಚ್ಚಿಸುವ ಹಾಗೂ ಕೊಳಗೇರಿ ಪ್ರದೇಶದಲ್ಲಿ ದಂಡ ಪ್ರಮಾಣ ಇಳಿಕೆಯ ಬಗ್ಗೆ ಬಿಬಿಎಂಪಿ ಚಿಂತನೆ ಮಾಡುತ್ತಿದೆ.

ನಗರದಲ್ಲಿ ಪ್ರತ್ಯೇಕ ತ್ಯಾಜ್ಯ ಸಂಗ್ರಹಿಸುವ ಪದ್ಧತಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ಕಡ್ಡಾಯವಾಗಿ ತ್ಯಾಜ್ಯವನ್ನು ವಿಂಗಡಿಸಿ, ತ್ಯಾಜ್ಯ ಸಂಗ್ರಹಿಸುವ ಸಿಬ್ಬಂದಿಗೆ ನೀಡಬೇಕು. ಇಲ್ಲವಾದರೆ ದಿನಕ್ಕೆ 1ರಿಂದ 2 ಸಾವಿರದವರೆಗೆ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಆದರೆ, ಇದೀಗ ದಂಡ ಪ್ರಮಾಣವನ್ನು ಎರಡರಿಂದ ಮೂರು ಸಾವಿರಕ್ಕೆ ಏರಿಕೆ ಮಾಡಲು ಬಿಬಿಎಂಪಿ ಚರ್ಚೆ ನಡೆಸುತ್ತಿದೆ.

ದಂಡ ಇಳಿಕೆಗೂ ಚರ್ಚೆ:

ಕೊಳಗೇರಿ ಮತ್ತು ಅಭಿವೃದ್ಧಿಯಾಗದ ನಗರ ಪ್ರದೇಶದಲ್ಲಿ ಕಸ ವಿಂಗಡಣೆಯ ದಂಡ ಪ್ರಮಾಣ ಕಡಿಮೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಕೊಳಗೇರಿಯ ನಿವಾಸಿಗಳಿಗೆ ಮೊದಲು ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸಬೇಕು. ಅಲ್ಲಿಯವರೆಗೆ ಈಗಿರುವ ಮೊದಲ ಬಾರಿಗೆ ಕಸ ವಿಂಗಡಣೆ ನಿಯಮ ಉಲ್ಲಂಘನೆಗೆ ಇರುವ .1 ಸಾವಿರ ದಂಡ, 2 ಮತ್ತು ಅದಕ್ಕಿಂತ ಹೆಚ್ಚಿನ ಬಾರಿ ನಿಯಮ ಉಲ್ಲಂಘನೆಗೆ ದಂಡ ಪ್ರಮಾಣವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ.

ಮಹಾಲಕ್ಷ್ಮೀಪುರದ ತ್ಯಾಜ್ಯ ವಿಂಗಡಣೆ ಘಟಕ ಮುಚ್ಚಿ: BBMPಗೆ ಹೈಕೋರ್ಟ್‌ ಸೂಚನೆ

ಸರ್ಕಾರ ಅನುಮೋದನೆ ಬೇಕು:

ಬಿಬಿಎಂಪಿ ಕಸ ನಿರ್ವಹಣೆ ಬೈಲಾ-2019ರ ಅನ್ವಯ ದಂಡ ವಿಧಿಸಲಾಗುತ್ತಿದೆ. ಒಂದು ವೇಳೆ ದಂಡ ಇಳಿಕೆ ಮತ್ತು ಏರಿಕೆ ಮಾಡಬೇಕಾದರೆ ಸರ್ಕಾರದ ಅನುಮೋದನೆ ಬೇಕಿದೆ. ಆ ನಂತರ ದಂಡ ಜಾರಿ ಆಗಬೇಕಾಗಲಿದೆ.

ನಗರದಲ್ಲಿ ಕಸ ನೀಡುವುದರಲ್ಲಿ ನಿಯಮ ಉಲ್ಲಂಘನೆ ದಂಡ ಪ್ರಮಾಣವನ್ನು ಇನ್ನೂ ಹೆಚ್ಚು ಮಾಡುವ ಪ್ರಸ್ತಾವನೆಯೂ ಇದೆ. ಆದರೆ, ಹಿಂದುಳಿದ ಪ್ರದೇಶ ಹಾಗೂ ಕೊಳಗೇರಿಗಳಲ್ಲಿ ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಪ್ರಮಾಣ ಇಳಿಸುವ ಬಗ್ಗೆ ಸಹ ಚರ್ಚೆ ನಡೆದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ ಡಿ.ರಂದೀಪ್‌ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios