ಬೆಂಗಳೂರು: ಬದುಕು ಕಿತ್ತುಕೊಂಡ ಜಾಗದಲ್ಲೇ ಚಪ್ಪಲಿ ಹೊಲೆಯುವ ಕೆಲಸ ಆರಂಭಿಸಿದ ವೃದ್ಧ ನಂಜುಡಪ್ಪ
ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ 45 ವರ್ಷದಿಂದ ಚಪ್ಪಲಿ ಹೊಲಿಯುತ್ತಿದ್ದ ಜೀವನ ಕಟ್ಟಿಕೊಂಡಿದ್ದ ಶೆಡ್ ಅನ್ನು ಬಿಬಿಎಂಪಿ ತೆರವು ಮಾಡಿದೆ. ಆದರೆ, ವೃದ್ಧ ನಂಜುಂಡಪ್ಪ ಬೇರೆ ವೃತ್ತಿ ಮತ್ತು ಸ್ಥಳದ ಅರಿವಿಲ್ಲದ ಕಾರಣ ಮತ್ತದೇ ಜಾಗದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಪುನಾರಂಭಿಸಿದ್ದಾನೆ.
ಬೆಂಗಳೂರು (ನ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆದು ಐಷಾರಾಮಿ ಜೀವನ ಮಾಡುವವರು ಹಾಗೂ ರಾಜಕಾಲುವೆಯನ್ನು ಒತ್ತುವರಿ ಮಾಡಿ ಐಷಾರಾಮಿ ಜೀವನ ಮಾಡುವವರನ್ನು ಬಿಟ್ಟು ಗೇಣು ಹೊಟ್ಟೆ, ತುಂಡು ಬಟ್ಟೆಗಾಗಿ 45 ವರ್ಷಗಳಿಂದ ಚಪ್ಪಲಿ ಹೊಲೆಯುತ್ತಾ ವೃದ್ಧ ನಂಜುಂಡಪ್ಪ ಬದುಕು ಕಟ್ಟಿಕೊಂಡಿದ್ದನು. ಆದರೆ, ಬಿಬಿಎಂಪಿ ಅಧಿಕಾರಿಗಳು ಫುಟ್‌ಪಾತ್ ಜಾಗದಲ್ಲಿ ಶೆಡ್ ನಿರ್ಮಿಇಸಿಕೊಂಡಿದ್ದಾನೆಂದು ಆತನ ಶೆಡ್‌ಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದೆ. ಆದರೂ, ತನ್ನ ಬದುಕು ಕಟ್ಟಿಕೊಳ್ಳುವ ಛಲ ಬಿಡದ ಹಾಗೂ ಬೇರೆ ಉದ್ಯೋಗ ಮತ್ತು ಬೇರೆ ಹೋದರೆ ತನ್ನ ವ್ಯಾಪಾರಕ್ಕೆ ಕುತ್ತು ಬರುತ್ತದೆಂಬ ಉದ್ದೇಶದಿಂದ ಬದುಕು ಕಿತ್ತುಕೊಂಡ ಜಾಗದಲ್ಲಿಯೇ ಪುನಃ ಕೆಲಸ ಮಾಡಲು ಮುಂದಾಗಿದ್ದಾನೆ.
ಸರ್ಕಾರದ ನೀತಿ ನಿಯಮಗಳು ಸಾರ್ವಜನಿಕ ಸ್ನೇಜಹಿಯಾಗಿದ್ದರೂ ಅದರಲ್ಲಿ ಕೆಲವೊಂದಿಷ್ಟು ಅಮಾಯಕರು ಬಲಿಪಶುವಾಗುವುದು ಮಾತ್ರ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಬಿಬಿಎಂಪಿ ವತಿಯಿಂದ ಜಯನಗರ ಬಸ್ ನಿಲ್ದಾಣದ ಬಳಿ ನಿರ್ಮಿಸಲಾದ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದ ಪಾದಚಾರಿ ಮಾರ್ಗವನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದರು. ಅದರಲ್ಲಿ, ಚಪ್ಪಲಿ ಹೊಲಿಯುವುದು, ಬ್ಯಾಗ್ ರಿಪೇರಿ, ಶೂ ಪಾಲಿಶ್, ತರಕಾರಿ ಮಾರಾಟ ಸೇರಿದಂತೆ ಹಲವು ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದರು. ಆದರೆ, ಬಿಬಿಎಂಪಿಯ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಿಂದ 45 ವರ್ಷದಿಂದ ಚಪ್ಪಲಿ ಹೊಲೆಯುತ್ತಾ ಬದುಕು ಕಟ್ಟಿಕೊಂಡಿದ್ದ ವೃದ್ಧ ನಂಜುಂಡಪ್ಪನೂ ಈಗ ಬೀದಿಗೆ ಬಿದ್ದಿದ್ದಾನೆ.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಫುಟ್‌ಪಾತ್ ಒತ್ತುವರಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಿಬಿಎಂಪಿ!
ಅಂಗಲಾಚಿದರೂ ಬಿಡದೇ ತೆರವುಗೊಳಿಸಿದ ಬಿಬಿಎಂಪಿ: ಮಂಗಳವಾರ ಬೆಳಗಾಗುತ್ತಿದ್ದಂತೆ ಹತ್ತಾರು ಪೊಲೀಸರು, ಮೂರ್ನಾಲ್ಕು ಜೆಸಿಬಿಗಳು ಹಾಗೂ 20ಕ್ಕೂ ಅಧಿಕ ಮಾರ್ಷಲ್‌ಗಳೊಂದಿಗೆ ಬಂದ ಬಿಬಿಎಂಪಿ ಅಧಿಕಾರಿಗಳು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿಕೊಂಡಿದ್ದ ತರಕಾರಿ ವ್ಯಾಪಾರಿಗಳು, ಪೆಟ್ಟಿ ಅಂಗಡಿಗಳು ಹಾಗೂ ಇತರೆ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ದಿಕ್ಕು ತೋಚದೇ ಕೆಲವು ಅಲ್ಲಿಂದ ಓಡಿಹೋದರೆ, ಇದನ್ನು ಬಿಟ್ಟು ಬೇರೆ ಬದುಕು ಇಲ್ಲವೇ ಇಲ್ಲವೆಂದು ನಂಬಿಕೊಂಡಿರುವ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರವು ಮಾಡದಂತೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ಕರುಣೆ ತೋರದ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಎಲ್ಲವನ್ನೂ ತೆರವು ಮಾಡಿದ್ದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಹುದ್ದೆ ಖಾಲಿ: ಸುಮೊಟೊ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ಬದುಕು ಕಿತ್ತುಕೊಂಡ ಜಾಗದಲ್ಲಿ ಕೆಲಸ ಪುನಾರಂಭ: ವೃದ್ಧ ನಂಜುಂಡಪ್ಪ ತಾನು ಚಪ್ಪಲಿ ಹೊಲೆದು ಬರುವ ಬಿಡಿಗಾಸಿನಲ್ಲಿ ಕುಟುಂಬ ನಿರ್ವಹಣೆ ಮಾಡಿದ್ದೂ ಅಲ್ಲದೇ ಹೊಟ್ಟೆ- ಬಟ್ಟೆ ಕಟ್ಟಿ ಶಾಶ್ವತ ಅಂಗಡಿಯೊಂದು ಇರಲೆಂದು ಕಬ್ಬಿಣದ ಶೆಡ್ ಅನ್ನು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ನಿರ್ಮಿಸಿಕೊಂಡಿದ್ದನು. ಆದರೆ, ಇಂದು ನಂಜಪ್ಪನ ಬಾಳಿಕೆ ಬೆಂಕಿಯಿಡಲು ರಕ್ಕಸದಂತೆ ಬಿಬಿಎಂಪಿ ತೆರವು ಕಾರ್ಯಾಚರಣೆಯ ಸದಸ್ಯರನ್ನು ನಮ್ಮ ಶೆಡ್ ಒಡೆದು ಹಾಕಬೇಡಿ, ಅದನ್ನು ತೆಗೆದುಕೊಂಡು ಬೇರೆಡೆ ಹೋಗುತ್ತೇನೆಂದು ಹೇಳಿದರೂ ಕೇಳದೇ ಶೆಡ್ ಒಡೆದು ಹಾಕಿ ಧ್ವಂಸಗೊಳಿಸಿದರು. ಇದರಿಂದ ಸಿಟ್ಟಿಗೆದ್ದ ವೃದ್ಧ ನಂಜುಂಡಪ್ಪ ನಾನು ಇದೇ ಜಾಗದಲ್ಲಿ ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತೇನೆ. ನಮ್ಮ ಕೆಲಸ ತೆರವುಗೊಳಿಸಲು ನಿಮಗೆ ಅದ್ಯಾವ ನಿಯಮವಿದೆ ತೆರವು ಮಾಡಿ ಎಂದು ಹಠವಿಡಿದು ಪುನಃ ಕೆಲಸ ಆರಂಭಿಸಿದ್ದಾರೆ.