ಬೆಂಗಳೂರು: ರಾಜಕಾಲುವೆ ಪಕ್ಕ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ರೆಡಿ!
ಬಿಬಿಎಂಪಿಯು ಸಿದ್ಧಪಡಿಸಿಕೊಂಡಿರುವ ಯೋಜನೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರತಿ ಆಸ್ತಿಯನ್ನು ಗುರುತಿಸಿಕೊಳ್ಳಲಾಗಿದೆ. ಸ್ವಾಧೀನಕ್ಕೆ ಒಳಪಡುವ ಆಸ್ತಿಯ ಮಾಲೀಕರನ್ನು ಗುರುತಿಸಲಾಗಿದೆ. ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜ.03): ರಾಜಧಾನಿಯಲ್ಲಿರುವ ರಾಜಕಾಲುವೆಯ ಅಕ್ಕ-ಪಕ್ಕ ದಲ್ಲಿ ಸುಮಾರು 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ 20 ಕಿ.ಮೀ ಉದ್ದದ ನಾಲ್ಕು ರಸ್ತೆಗಳನ್ನು ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜಾಗಿದೆ.
ನಗರದಲ್ಲಿ 233 ಕಿ.ಮೀ ಉದ್ದದ ಪ್ರಾಥಮಿಕ ಹಾಗೂ 626 ಕಿ.ಮೀ ಉದ್ದ ಎರಡನೇ ಹಂತದ ರಾಜಕಾಲುವೆ ಸೇರಿ ದಂತೆ ಒಟ್ಟು 860 ಕಿ.ಮೀ ಉದ್ದದ ರಾಜಕಾಲುವೆ ಜಾಲವನ್ನು ಹೊಂದಿದೆ. ರಾಜಕಾಲುವೆ ಒತ್ತುವರಿ ಯಿಂದ ಪ್ರತಿವರ್ಷ ಮಳೆಗಾಲದಲ್ಲಿಯೂ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಹಾಗೂ ರಾಜಕಾಲುವೆ ಅಕ್ಕ-ಪಕ್ಕದಲ್ಲಿ ಬಫರ್ ಪ್ರದೇಶದ ಸಂರಕ್ಷಣೆ ಮಾಡುವುದು ಹಾಗೂ ಸುಧಾರಣೆ ಮಾಡುವ ಉದ್ದೇ ಶದಿಂದ ಬಿಬಿಎಂಪಿಯು ರಾಜಕಾಲುವೆಯ ಅಕ್ಕ - ಪಕ್ಕದಲ್ಲಿ ಒಟ್ಟು 300 ಕಿ.ಮೀ ಉದ್ದದ ಸರ್ವೀಸ್ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಆ ಪೈಕಿ ಇದೀಗ ನಾಲ್ಕು ಕಡೆ ಒಟ್ಟು 20 ಕಿ.ಮೀ ಉದ್ದ ರಸ್ತೆ ನಿರ್ಮಿಸಲು ಮುಂದಾಗಿದೆ.
100 ಕಡೆ ರಾಜಕಾಲುವೆ ಪಥವೇ ಬದಲು: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಭೂಸ್ವಾಧೀನಕ್ಕೂ ಪಾಲಿಕೆ ಸಿದ್ಧತೆ:
ಬಿಬಿಎಂಪಿಯು ಸಿದ್ಧಪಡಿಸಿಕೊಂಡಿರುವ ಯೋಜನೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರತಿ ಆಸ್ತಿಯನ್ನು ಗುರುತಿಸಿಕೊಳ್ಳಲಾಗಿದೆ. ಸ್ವಾಧೀನಕ್ಕೆ ಒಳಪಡುವ ಆಸ್ತಿಯ ಮಾಲೀಕರನ್ನು ಗುರುತಿಸಲಾಗಿದೆ. ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ. ಈ ಕುರಿತು ಆಕ್ಷೇಪಣೆ ಸಲ್ಲಿಸುವುದಕ್ಕೆ ಈಗಾಗಲೇ ದಿನ ನಿಗದಿಪಡಿಸಿದ್ದಾರೆ. ಸ್ವಾಧೀನಕ್ಕೆ ಒಳಪಡುವ ಕಟ್ಟಡದ ಮಾಲೀಕರಿಗೆ ಟಿಡಿಆರ್ ಮೂಲಕ ಪರಿಹಾರ ನೀಡುವುದಕ್ಕೆ ತೀರ್ಮಾನಿಸಲಾಗಿದೆ.
ಬೆಂಗಳೂರು: ರಾಜಕಾಲುವೆ ಜಾಗದಲ್ಲಿ ಲೇಔಟ್, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ
ಯಾವ್ಯಾವ ರಾಜಕಾಲುವೆ ಪಕ್ಕ ರಸ್ತೆ?
ಹೆಬ್ಬಾಳದಿಂದ ಥಣಿಸಂದ್ರವರೆಗೆ 7.5 ಕಿ.ಮೀ ಉದ್ದದ ರಸ್ತೆ, ಮೈಸೂರು ರಸ್ತೆಯಿಂದಹೊಸಕೆರೆ ಹಳ್ಳಿ ವರೆಗೆ 5.2 ಕಿ.ಮೀ, ಎನ್‌ಎಚ್ 7 ರಿಂದ ಯಲಹಂಕವರೆಗೆ 300 ಮೀಟರ್ ಹಾಗೂ ಬೆಳ್ಳಂದೂರು ಕೋಡಿಯಿಂದ ವರ್ತೂರು ಕೋಡಿ ವರೆಗೆ 7 ಕಿ.ಮೀ ಉದ್ದದ ಸೇರಿದಂತೆ ಒಟ್ಟು 20 ಕಿ.ಮೀ ರಸ್ತೆಯನ್ನು ಮೊದಲ ಹಂತ ದಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಬಿಬಿಎಂಪಿಯ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಕ್ಷೆ ತಯಾರಿ ಮಾಡಿಕೊಂಡಿದ್ದಾರೆ.
₹200 ಕೋಟಿ ಕ್ರಿಯಾ ಯೋಜನೆಯೂ ಸಿದ್ಧ
ರಾಜಕಾಲುವೆ ಅಕ್ಕ-ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಅಧಿಕಾರಿಗಳು ಈಗಾಗಲೇ 200 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆ ಸಿದ್ದಪಡಿಸಿಕೊಂಡು ಸರ್ಕಾರದಿಂದಲೂ ಅನುಮೋದನೆ ಪಡೆಯಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದಂತೆ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.