Asianet Suvarna News Asianet Suvarna News

ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್

ಕಳೆದ 2 ವರ್ಷಗಳಿಂದ ವಿಘ್ನ ವಿನಾಯಕನಿಗೆ ಕೋವಿಡ್‌ನಿಂದಲೇ ವಿಘ್ನ ಎದುರಾಗಿತ್ತು. ಆದ್ರೆ ಈ‌ ಬಾರಿ ಎಲ್ಲ ವಿಘ್ನಗಳು ನಿವಾರಣೆಯಾಗಿದ್ದು, ಬೀದಿ ಬದಿಗಳಲ್ಲಿ, ಮನೆ ಮನಗಳಲ್ಲಿ‌ ಗಣೇಶ ಕೂರಿಸಲು ಬಿಬಿಎಂಪಿ ಯಾವುದೇ ನಿರ್ಬಂಧವಿಲ್ಲದೇ ಗ್ರೀನ್ ಸಿಗ್ನಲ್ ನೀಡಿದೆ. 

BBMP green signal for grand ganeshotsava celebration gow
Author
Bengaluru, First Published Aug 20, 2022, 6:58 PM IST

ವರದಿ: ರಕ್ಷಾ ಕಟ್ಟೆಬೆಳಗುಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಆ.20): ಕಳೆದ 2 ವರ್ಷಗಳಿಂದ ವಿಘ್ನ ವಿನಾಯಕನಿಗೆ ಕೋವಿಡ್‌ನಿಂದಲೇ ವಿಘ್ನ ಎದುರಾಗಿತ್ತು. ಆದ್ರೆ ಈ‌ ಬಾರಿ ಎಲ್ಲ ವಿಘ್ನಗಳು ನಿವಾರಣೆಯಾಗಿದ್ದು, ಬೀದಿ ಬದಿಗಳಲ್ಲಿ, ಮನೆ ಮನಗಳಲ್ಲಿ‌ ಗಣೇಶ ಕೂರಿಸಲು ಬಿಬಿಎಂಪಿ ಯಾವುದೇ ನಿರ್ಬಂಧವಿಲ್ಲದೇ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ 2 ವರ್ಷಗಳ ಕಾಲ ಕೋವಿಡ್‌ನಿಂದ ಬೀದಿ ಬದಿಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲು ಅನುಮತಿ‌ ನೀಡಿರಲಿಲ್ಲ ನೂರಾರು ನಿಬಂಧನೆಗಳನ್ನು ಬಿಬಿಎಂಪಿ ವಿಧಿಸಿದ್ರಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗದೆ ಜನರು ಬೇಸರಗೊಂಡಿದ್ರು. ಆದ್ರೀಗ ಕೋವಿಡ್ ಕ್ಷೀಣಿಸಿ ಜನಜೀವನ ಸಾಮಾನ್ಯವಾಗಿದೆ. ಈ ಹಿನ್ನೆಲೆ ಹಿಂದಿದ್ದ ನಿಯಮಗಳನ್ನು ಸಡಿಲಗೊಳಿಸಿ ರಸ್ತೆಗಳಲ್ಲಿ ಗಣೇಶ ಕೂರಿಸಲು‌ ಬಿಬಿಎಂಪಿ ಅನುಮತಿ‌ ನೀಡಿದೆ. 15 ದಿನಗಳವರೆಗೂ ಗಣೇಶ ಕೂರಿಸಲು ಬಿಬಿಎಂಪಿಯಿಂದ ಅನುಮತಿ ನೀಡಲಾಗ್ತಿದೆ.  ಈ ಬಾರಿ ಬರೊಬ್ಬರಿ 15 ದಿನಗಳ ಕಾಲ ಬೀದಿಗಳಲ್ಲಿ ಗಣೇಶ ಕೂರಿಸಲು ಅನುಮತಿ ನೀಡಲಾಗಿದ್ದು, ಏಕ ಗವಾಕ್ಷಿ ಪದ್ದತಿಯಲ್ಲಿ ಗಣೇಶ ಕೂರಿಸಲು ಇಚ್ಚಿಸುವವರು ಅನುಮತಿ ಪಡೆಯಬೇಕಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗು ಬೆಸ್ಕಾಂ ಇಲಾಖೆಗಳಿಗೆ ಸಂಬಂಧಿಸಿದಂತೆ ಒಂದೇ ಅನುಮತಿ ಪಡೆಯಲು ಏರ್ಪಾಡು ಮಾಡಲಾಗಿದ್ದು, ವಲಯ ಕಚೇರಿಗಳಲ್ಲಿ ಅನುಮತಿ ಕೋರಬೇಕಾಗಿದೆ.

ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..

ಜೊತೆಗೆ ಅನುಮತಿ ಸಿಕ್ಕವರು, ಅದ್ದೂರಿಯಾಗಿ ಸಾಂಸ್ಕೃತಿಕ ಹಾಗು ಕಲಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಬಹುದು ಎನ್ನಲಾಗಿದೆ.  ಆದ್ರೆ, ಯಾರೇ ಗಣೇಶ ಕೂರಿಸಬೇಕಂದ್ರೂ ಕಡ್ಡಾಯವಾಗಿ ಅನುಮತಿ ಪಡೆಯೋದ್ರ ಜತೆಗೆ ಶಾಂತಿ‌ ಭಂಗವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.  ದಿನಾಂಕ ಆಗಸ್ಟ್ 30 ರಿಂದ , ಸೆಪ್ಟೆಂಬರ್ 15ರ ವರೆಗಷ್ಟೆ ಗಣೇಶ ಇಡಲು ಅನುಮತಿ ಇದ್ದು, ಹೆಚ್ಚೆಂದರೆ 15 ದಿನಗಳ ಕಾಲ ಮಾತ್ರ ಗಣೇಶ ಇಡಲು ಅವಕಾಶ ಮಾಡಿಕೊಡಲಾಗುವುದೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಗಣೇಶ ಚತುರ್ಥಿ 2022 ಯಾವಾಗ? ಶುಭ ಮುಹೂರ್ತವೇನು?

ಇನ್ನೂ ಗಣೇಶ ವಿಸರ್ಜನೆಗಾಗಿ ನಗರದ ನಾಲ್ಕು ಕಲ್ಯಾಣಿಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮನೆ ಮನೆಗಳಲ್ಲಿ ಇರಿಸುವ ಚಿಕ್ಕ ಪುಟ್ಟ ಗಣೇಶ ವಿಸರ್ಜನೆಗೆ ಎಲ್ಲ ವಾರ್ಡ್ ಗಳಲ್ಲಿಯೂ ಟ್ಯಾಂಕರ್ ವ್ಯವಸ್ಥೆ ಸಹ‌ ಮಾಡಲಾಗುವುದು. ಮಣ್ಣಿನ ಗಣಪತಿ ಹೊರತು ಪಡಿಸಿ ಪಿಓಪಿ ಗಣೇಶಕ್ಕೆ ನಿರ್ಬಂಧವಿದೆ. ಹಲಸೂರು ಕೆರೆ, ಸ್ಯಾಂಕಿಕೆರೆ, ಹೆಬ್ಬಾಳ ಹಾಗೂ ಯಡಿಯೂರು ಕೆರೆಗಳಲ್ಲಿ ಗಣೇಆ ವಿಸರ್ಜನೆಗೆ ಅವಕಾಶವಿದೆ. ಕೊರೊನಾ ಮಂಕಾಗಿದ್ದ ಗಣೇಶ ಹಬ್  ಈ ಬಾರಿ ಸಂಡಗರ ಸಂಭ್ರಮದಿಂದ ಮೇಳೈಸೋ ಲಕ್ಷಣ ಕಾಣ್ತಾ ಇದೆ. ಬಿಬಿಎಂಪಿ ನೀಡಿರುವ ಗ್ರೀನ್ ಸಿಗ್ನಲ್  ಅದ್ದೂರಿ ಗಣೇಶೋತ್ಸವ ಆಚರಣೆಗಾಗಿ ಪ್ಲಾನ್ ಮಾಡುತ್ತಿದ್ದವರಿಗೆಲ್ಲ ಗಣೇಶ ವರ ನೀಡಿದಂತಾಗಿದೆ.

Follow Us:
Download App:
  • android
  • ios