ಬೆಂಗಳೂರು [ಸೆ.09]:  ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ವೇಳೆಯಲ್ಲಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಹಿಂದಕ್ಕೆ ಎಳೆದಿದ್ದಕ್ಕೆ ಉಪಮೇಯರ್‌ ಭದ್ರೇಗೌಡ ನಗರ ಪ್ರದಕ್ಷಿಣೆಯನ್ನು ಅರ್ಧಕ್ಕೆ ಬಿಟ್ಟು ವಾಪಾಸ್‌ ಹೋದ ಘಟನೆ ನಡೆಯಿತು.

ಬನ್ನೇರುಘಟ್ಟರಸ್ತೆಯ ಜೇಡಿಮರ ಜಂಕ್ಷನ್‌ ಬಳಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವ, ಮೇಯರ್‌, ಉಪಮೇಯರ್‌ ಮೊದಲು ಬಸ್‌ನಿಂದ ಹೊರಗೆ ಇಳಿದು ಬಂದು ಪರಿಶೀಲನೆ ನಡೆಸುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಬಸ್‌ನಿಂದ ಇಳಿದು ಜನರ ಮಧ್ಯದಲ್ಲಿದ್ದ ಮುಖ್ಯಮಂತ್ರಿಗಳ ಪಕ್ಕಕ್ಕೆ ತೆರಳಲು ಮುಂದಾಗಿದ್ದಾರೆ. ಈ ವೇಳೆ ಉಪಮೇಯರ್‌ ಭದ್ರೇಗೌಡ ಹಾಗೂ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ನಡುವೆ ವಾಗ್ವಾದ ಉಂಟಾಗಿದೆ. ಆಗ ಉಪಮೇಯರ್‌ ಭದ್ರೇಗೌಡ ಅವರ ಹಿಂಬದಿಯಲ್ಲಿ ನಿಂತಿದ್ದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಉಪಮೇಯರ್‌ ಅವರನ್ನು ಎರಡು ಕೈ ಹಿಡಿದು ಹಿಂದಕ್ಕೆ ಎಳೆದರು. ಹಾಗಾಗಿ, ಬೇಸರಗೊಂಡು ತಾವು ನಗರ ಪ್ರದಕ್ಷಿಣೆ ಮೊಟಕುಗೊಳಿಸಿ ವಾಪಾಸ್‌ ಹೋಗಿರುವುದಾಗಿ  ಉಪಮೇಯರ್‌ ತಿಳಿಸಿದ್ದಾರೆ.