'ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ'
ಕ್ವಾರಂಟೈನ್‌ಗೆ ಒಪ್ಪದಿದ್ದರೆ ಕಾನೂನು ಕ್ರಮ: ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್| ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದವರಲ್ಲಿ ಬಹುತೇಕರು ರಾಜ್ಯ ಸರ್ಕಾರದ ಆದೇಶದಂತೆ ಹೋಟೆಲ್ ಕ್ವಾರಂಟೈನ್‌ಗೆ ಹೋಗಿದ್ದಾರೆ| ಕೆಲವರು ಮಾತ್ರ ಮನೆಗಳಿಗೆ ಹೋಗುವ ಆಸೆಯಿಂದ ಕ್ವಾರಂಟೈನ್ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದ್ದಾರೆ|
ಬೆಂಗಳೂರು(ಮೇ.15): ಹೊರ ರಾಜ್ಯದಿಂದ ನಗರಕ್ಕೆ ಆಗಮಿಸಿದವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ನಲ್ಲಿರಬೇಕು. ಇದಕ್ಕೆ ಒಪ್ಪದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದವರಲ್ಲಿ ಬಹುತೇಕರು ರಾಜ್ಯ ಸರ್ಕಾರದ ಆದೇಶದಂತೆ ಹೋಟೆಲ್ ಕ್ವಾರಂಟೈನ್‌ಗೆ ಹೋಗಿದ್ದಾರೆ. ಕೆಲವರು ಮಾತ್ರ ಮನೆಗಳಿಗೆ ಹೋಗುವ ಆಸೆಯಿಂದ ಕ್ವಾರಂಟೈನ್ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದ್ದಾರೆ.
ಕೊರೋನಾ ಕಾಟ: ಪ್ರತಿ ಕುಟುಂಬದ ಕೋವಿಡ್ ಪರೀಕ್ಷೆ ಆರಂಭ
ಜತೆಗೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದು ಗಮನಕ್ಕೆ ಬಂದಿದೆ. ಅವರು ಮನೆಗೆ ಹೋಗುವ ಆಸೆಯಿಂದ ಸಮಾಜದ ಹಿತ ಮರೆತು ವರ್ತನೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.