ಮುಖ್ಯಮಂತ್ರಿ ಅವರ ಅಧ್ಯಕ್ಷತೆ ಸಭೆಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪೂರೈಕೆ ಮಾಡುವ ಆಹಾರದ ಪದಾರ್ಥಗಳ ಬದಲಾವಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಅಂತಿಮವಾಗಿ ಸರ್ಕಾರದಿಂದ ಬರುವ ಸೂಚನೆಯಂತೆ ಆಹಾರದ ಮೆನು ಇರಲಿದೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು(ಜೂ.16): ಇಂದಿರಾ ಕ್ಯಾಂಟೀನ್ ಮೆನುನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ನೀಡುವ ಸೂಚನೆಯಂತೆ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಗುರುವಾರ ಕ್ಯಾಂಟೀನ್‌ನಲ್ಲಿ ಮೊಟ್ಟೆ ಕೊಡುವ ಪ್ರಸ್ತಾವನೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಅಧ್ಯಕ್ಷತೆ ಸಭೆಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪೂರೈಕೆ ಮಾಡುವ ಆಹಾರದ ಪದಾರ್ಥಗಳ ಬದಲಾವಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಅಂತಿಮವಾಗಿ ಸರ್ಕಾರದಿಂದ ಬರುವ ಸೂಚನೆಯಂತೆ ಆಹಾರದ ಮೆನು ಇರಲಿದೆ ಎಂದಷ್ಟೇ ಹೇಳಿದರು.
ಇಂದಿರಾ ಕ್ಯಾಂಟೀನ್ ಮರುಚಾಲನೆ: ಹೊಸ ಆಹಾರ ಮೆನು ಇಲ್ಲಿದೆ!
ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ನಿಗದಿ ಪಡಿಸಿರುವ ದರ ಒಂದೇ ಆಗಿದೆ. ಆದರೆ, ರಾತ್ರಿ ನೀಡುವ ಊಟದ ಪದಾರ್ಥಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ, ಪದಾರ್ಥಗಳ ಸಂಖ್ಯೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಗುಣಮಟ್ಟಹಾಗೂ ಪ್ರಮಾಣ ಹೆಚ್ಚಿಸಲಾಗುವುದು ಎಂದರು.
ಅದರೊಂದಿಗೆ ಆಹಾರದ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ನೀಡುವ ದರದ ಪರಿಷ್ಕರಣೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಗ್ರಾಹಕರ ಊಟ, ತಿಂಡಿಗೆ .25 (ಎರಡು ಊಟ, ಒಂದು ತಿಂಡಿ) ಹಾಗೂ ಸರ್ಕಾರ ಮತ್ತು ಬಿಬಿಎಂಪಿಯಿಂದ .42 ಸೇರಿಸಿ ಒಟ್ಟು .67 ದರ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
