ಗದಗ: ಕಪ್ಪತ್ತಗುಡ್ಡ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಲು ಹೊರಟ್ಟಿ ಆಗ್ರಹ

ಸಿಎಂಗೆ ಪತ್ರ ಬರೆದಿರುವ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು, ಗದಗ, ಮುಂಡರಗಿ ಮತ್ತು ಶಿರಹಟ್ಟಿತಾಲೂಕುಗಳಲ್ಲಿ ಹಬ್ಬಿರುವ ಕಪ್ಪತ್ತಗುಡ್ಡ 2017ರಲ್ಲಿ ‘ವನ್ಯಜೀವಿಧಾಮ’ ಎಂದು ಘೋಷಿಸಲ್ಪಟ್ಟಿದೆ. ಈ ಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿಯ ಕಾಟವಾದರೆ ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆವ ಹಸಿರು ನೋಡಲು ಬರುವ ಪ್ರವಾಸಿಗರಿಂದ ಮತ್ತೊಂದು ರೀತಿಯ ತೊಂದರೆಯಾಗುತ್ತಿದೆ. ಆಗಾಗ ಗಣಿಧಣಿಗಳ ಕೆಟ್ಟಕಣ್ಣು ಸಹ ಈ ಗುಡ್ಡದ ಮೇಲೆ ಇರುವುದರಿಂದ ಇದನ್ನು ಸಂರಕ್ಷಿಸಲು ‘ವಿಶೇಷ ಕಾರ್ಯಪಡೆ’ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

Basavaraj Horatti Demand to Create Special Task Force for the Conservation of Kappattagudda grg

ಗದಗ(ಆ.13): ಕಪ್ಪತ್ತಗುಡ್ಡ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಬೇಕು, ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು, ಗದಗ, ಮುಂಡರಗಿ ಮತ್ತು ಶಿರಹಟ್ಟಿತಾಲೂಕುಗಳಲ್ಲಿ ಹಬ್ಬಿರುವ ಕಪ್ಪತ್ತಗುಡ್ಡ 2017ರಲ್ಲಿ ‘ವನ್ಯಜೀವಿಧಾಮ’ ಎಂದು ಘೋಷಿಸಲ್ಪಟ್ಟಿದೆ. ಈ ಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿಯ ಕಾಟವಾದರೆ ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆವ ಹಸಿರು ನೋಡಲು ಬರುವ ಪ್ರವಾಸಿಗರಿಂದ ಮತ್ತೊಂದು ರೀತಿಯ ತೊಂದರೆಯಾಗುತ್ತಿದೆ. ಆಗಾಗ ಗಣಿಧಣಿಗಳ ಕೆಟ್ಟಕಣ್ಣು ಸಹ ಈ ಗುಡ್ಡದ ಮೇಲೆ ಇರುವುದರಿಂದ ಇದನ್ನು ಸಂರಕ್ಷಿಸಲು ‘ವಿಶೇಷ ಕಾರ್ಯಪಡೆ’ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

GADAG: ಸಸ್ಪೆಂಡ್ ಆದ ಕಂದಾಯ ಅಧಿಕಾರಿಗೆ ಸರ್ಕಾರದಿಂದ ಬಡ್ತಿ ಗಿಫ್ಟ್!

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ವನ್ಯಜೀವಿಧಾಮದ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶವಿಲ್ಲ. 10 ಕಿ.ಮೀ ಒಳಗಿನ ಜಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದೇ ಅರ್ಥೈಸಲಾಗಿದೆ. ವಸ್ತು ಸ್ಥಿತಿ ಹೀಗಿದ್ದರೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 1 ಕಿ.ಮೀ ಮಿತಗೊಳಿಸಲು ರಾಜ್ಯಸರ್ಕಾರ ಕೈಗೊಂಡ ತೀರ್ಮಾನ ಸರಿಯಲ್ಲ. ಅಲ್ಲದೇ ಪರಿಸರದ ಮೇಲಾಗುವ ಪರಿಣಾಮಗಳನ್ನು ಕಡೆಗಣಿಸಿದಂತಾಗುತ್ತದೆ. ಮುಂದಿನ ಪೀಳಿಗೆಗೆ ಇಂತಹ ನಿಸರ್ಗ ಸಂಪತ್ತನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂದು ಹೊರಟ್ಟಿಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದಾರೆ.

ಇಲ್ಲಿ ಗಾಳಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಖನಿಜ ಸಂಪತ್ತು ಇದೆ. ಹುಲುಸಾಗಿ ಬೆಳೆದಿರುವ ಸಸ್ಯಗಳಲ್ಲಿ ಔಷಧೀಯ ಗುಣವಿದೆ. ಈ ಸಸ್ಯಗಳನ್ನು ಬೆಳೆಸಿ ಪೋಷಣೆ ಮಾಡಿದರೆ ಉತ್ತರ ಕರ್ನಾಟಕದ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತದೆ. ಇಂತಹ ಕಪ್ಪತ್ತಗುಡ್ಡವನ್ನು ರಕ್ಷಿಸಿಕೊಳ್ಳಬೇಕಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios