Asianet Suvarna News Asianet Suvarna News

ಯಾರು ಕಾಲು ಹಿಡಿಯುವ ಮಗ ನಾನಲ್ಲ : ಯತ್ನಾಳ್ ಗುಡುಗು

ನಾನು ಅಟಲ್‌ ಬಿಹಾರಿ ವಾಜಪೇಯಿ, ಆಡ್ವಾಣಿ ಕಾಲು ನಮಸ್ಕಾರ ಮಾಡಿದ್ದೇನೆ. ಬೇರೆ ಯಾರ ಕಾಲು ಹಿಡಿಯುವ ಮಗ ನಾನಲ್ಲ. ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ನಮಗೆ ಬಹಳ ತೊಂದರೆಯಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಮುರಗೇಶ ನಿರಾಣಿ ಅವರಿಗೆ ತಿರುಗೇಟು ನೀಡಿದರು.

Basanagowda Patil Yatnal Slams Nirani snr
Author
First Published Dec 26, 2022, 5:38 AM IST

 ವಿಜಯಪುರ :  ನಾನು ಅಟಲ್‌ ಬಿಹಾರಿ ವಾಜಪೇಯಿ, ಆಡ್ವಾಣಿ ಕಾಲು ನಮಸ್ಕಾರ ಮಾಡಿದ್ದೇನೆ. ಬೇರೆ ಯಾರ ಕಾಲು ಹಿಡಿಯುವ ಮಗ ನಾನಲ್ಲ. ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ನಮಗೆ ಬಹಳ ತೊಂದರೆಯಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಮುರಗೇಶ ನಿರಾಣಿ ಅವರಿಗೆ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು  (Tumakur)  ಸಿದ್ಧಗಂಗಾ, ಸಿದ್ಧೇಶ್ವರ ಶ್ರೀಗಳ ಕಾಲು ನಮಸ್ಕಾರ ಮಾಡಿದ್ದೇನೆ. ಆದರೆ, ತಲೆ ಹಿಡುಕ ಸ್ವಾಮಿಗಳ ಕಾಲು ಮುಗಿಯಲ್ಲ ಎಂದರು.

ಮೀಸಲಾತಿ (Resarvation)  ಘೋಷಣೆ ಆಗುವ ಭರವಸೆ ಇದೆ. 2 ಎ ಸಮಾನವಾದ ಮೀಸಲಾತಿ ಸಿಗುತ್ತದೆ. ತಾಯಿ ಆಣೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪಂಚಮಸಾಲಿ 2ಎ ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ತಾಯಿ ಆಣೆ ಮಾಡಿದ ಮೇಲೆ ಕೊಡಲಿಲ್ಲ ಅಂದರೆ ಏನು ಆಗುತ್ತದೆ ನೋಡಿ. ಆಣೆ ಮಾಡಿದ್ಮೇಲೂ ಎಚ್‌ಡಿ ಕುಮಾರಸ್ವಾಮಿ ಬಿಜೆಪಿಗೆ ಅಧಿ​ಕಾರ ನೀಡಲಿಲ್ಲ. ಅದಕ್ಕಾಗಿ ನಮ್ಮ ಪಕ್ಷ ಅಧಿ​ಕಾರಕ್ಕೆ ಬಂದಿದೆ ಎಂದರು.

ವಚನ ಭ್ರಷ್ಟತೆ ಇರುತ್ತದೆ. ಅದಕ್ಕಾಗಿ ಸಿಎಂ ಭರವಸೆ ಈಡೇರಿಸುತ್ತಾರೆ. ಬೇರೆ ಸಮಾಜದವರು ಮೀಸಲಾತಿ ಕೇಳುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ನಮಗೆ ಮೀಸಲಾತಿ ನೀಡುವ ವಿಶ್ವಾಸವಿದೆ. ಒಂದು ವೇಳೆ ವಚನ ಭ್ರಷ್ಟರಾದರೆ ಕುಮಾರಸ್ವಾಮಿ ಅವರಿಗಾದ ಗತಿ ಬೊಮ್ಮಾಯಿ ಅವರಿಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಬೇರೆ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದಾರೆ. ತಳವಾರ ಸಮುದಾಯಕ್ಕೆ ಎಸ್ಟಿಮೀಸಲು ಕೊಟ್ಟಿದ್ದಾರೆ. ಅದರಂತೆ ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೂ ಮೀಸಲಾತಿ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸದಾಗಿ ಬರುವವರೂ ಇದ್ದಾರೆ:

ಜನಾರ್ಧನರೆಡ್ಡಿ ನೂತನ ಪಕ್ಷ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ನಮ್ಮ ಪಕ್ಷದ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎಂಬುದಷ್ಟೆನಮ್ಮ ಮುಂದಿನ ಗುರಿ ಇದೆ. ಯಾರು ಪಕ್ಷ ಮಾಡಿದರು, ಯಾರು ಪಕ್ಷ ಬಿಟ್ಟರು ? ಇನ್ನು ಕೆಲವರು ಪಕ್ಷ ಬಿಟ್ಟು ಹೋಗುವವರೂ ಇದ್ದಾರೆ, ಹೊಸದಾಗಿ ಪಕ್ಷಕ್ಕೆ ಬರುವವರು ಇದ್ದಾರೆ ಎಂದರು.

ಕೆಲವೊಂದು ಮಂದಿ ಪ್ರಾಣ ಹೋದರು ಸೋನಿಯಾಗಾಂಧಿ ​ಅವರನ್ನು ಬಿಟ್ಟು ಬೇರೆ ಪಕ್ಷ ಸೇರುವುದಿಲ್ಲ ಎಂದು ನಾಟಕ ಮಾಡುತ್ತಾರೆ. ಅಲ್ಲಿ ದೆಹಲಿಗೆ ಹೋಗಿ ನಾವು ಬಿಜೆಪಿ ಸೇರುತ್ತೇವೆ ಎಂದು ಇಲ್ಲಿಯವರೇ ಒಂದಿಬ್ಬರು ಓಡಾಡುತ್ತಿದ್ದಾರೆ ಎಂದರು.

ಸಚಿವ ಸಂಪುಟ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಂಪುಟ ವಿಚಾರದಲ್ಲಿ ಇಲ್ಲವೇ ಇಲ್ಲ. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ.ಯೊಗೇಶ್ವರ ಅವರು ಮಂತ್ರಿ ಆಗಬೇಕು ಅಂತಿದಾರೆ. ನಾನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದು ಇಷ್ಟೆ. ಮೀಸಲಾತಿ ಕೊಡಿ, ಕಥೆ ಹೇಳಬೇಡಿ ಎಂದು ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಎಂದಿದ್ದೇನೆ ಎಂದರು.

ನಮಗೇನು ಸಚಿವ ಸ್ಥಾನ ಬೇಕಾಗಿಲ್ಲ, ಮೂರು ತಿಂಗಳ ಮಂತ್ರಿ ಆಗೋದು ಅವಶ್ಯಕತೆ ಇಲ್ಲ. ನನಗೇನು ಮಂತ್ರಿ ಆಗಬೇಕು ಎಂಬುದು ಇಲ್ಲ, ನಾನು ತಲೆ ಕೆಡಿಸಿಕೊಂಡಿಲ್ಲ, ನಾ ಆಗೋದು ಇಲ್ಲಾ ಎಂದರು.

  • ನಾನು ಅಟಲ್‌ ಬಿಹಾರಿ ವಾಜಪೇಯಿ, ಆಡ್ವಾಣಿ ಕಾಲು ನಮಸ್ಕಾರ ಮಾಡಿದ್ದೇನೆ.
  • ಬೇರೆ ಯಾರ ಕಾಲು ಹಿಡಿಯುವ ಮಗ ನಾನಲ್ಲ.
  • ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ನಮಗೆ ಬಹಳ ತೊಂದರೆಯಾಗಿದೆ
  • ಶಾಸಕ ಬಸನಗೌಡ ಪಾಟೀಲ ಯತ್ನಾಳ  ಸಚಿವ ಮುರಗೇಶ ನಿರಾಣಿ ಅವರಿಗೆ ತಿರುಗೇಟು
Follow Us:
Download App:
  • android
  • ios