ಪ್ರವಾಸಿಗರ ಗಮನಕ್ಕೆ: ನಾಳೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ..!

2023ರಲ್ಲಿ ಭಾರತ G20 ಅತಿಥ್ಯ ವಹಿಸಿರುವುದರಿಂದ ವಿವಿಧ ವಿಷಯಗಳ ಸಮಗ್ರ ಚರ್ಚೆ ಮತ್ತು ಸಂಶೋಧನೆಗಳ ಬಗ್ಗೆ ವಿಚಾರ ಸಂಕೀರ್ಣಗಳು ನಡೆಯುತ್ತಿವೆ. ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ಗೆ ಆಗಮಿಸುತ್ತಿರುವ  G20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು. 

Bannerghatta National Park Not Open to Public on Feb 9th grg

ವರದಿ: ಟಿ.ಮಂಜುನಾಥ, ಹೆಬ್ಬಗೋಡಿ, ಆನೇಕಲ್

ಆನೇಕಲ್(ಫೆ.08): ದಕ್ಷಿಣ ಭಾರತದ ಪ್ರತಿಷ್ಠಿತ ಬಯೋಲಾಜಿಕಲ್ ಪಾರ್ಕ್‌ಗಳ ಪೈಕಿ ಬೆಂಗಳೂರಿನ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಕೂಡ ಒಂದಾಗಿದೆ. ಬೆಂಗಳೂರಿಗೆ ಕೂಗಳತೆ ದೂರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಯೋಲಾಜಿಕಲ್ ಪಾರ್ಕ್, 800 ಹೆಕ್ಟರ್‌ನಲ್ಲಿರುವ ವಿಶಾಲವಾಗಿರುವ ಸಫಾರಿ, ಎಪೆಫೆಂಟ್ ಸಫಾರಿ, ಬಿಯರ್ ಸಫಾರಿ, ಚಿಟ್ಟೆ ಪಾರ್ಕ್ ಮತ್ತು ಪಾರ್ಕ್ ಹೊಂದಿರುವ ಬನ್ನೇರುಘಟ್ಟ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತದೆ.

Bannerghatta National Park Not Open to Public on Feb 9th grg

ಪ್ರತಿ ನಿತ್ಯ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. 2023ರಲ್ಲಿ ಭಾರತ G20 ಅತಿಥ್ಯ ವಹಿಸಿರುವುದರಿಂದ ವಿವಿಧ ವಿಷಯಗಳ ಸಮಗ್ರ ಚರ್ಚೆ ಮತ್ತು ಸಂಶೋಧನೆಗಳ ಬಗ್ಗೆ ವಿಚಾರ ಸಂಕೀರ್ಣಗಳು ನಡೆಯುತ್ತಿವೆ. ಹೀಗಾಗಿ ನಾಳೆ(09)ರಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ಗೆ G20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. 

ಬಿಎಂಟಿಸಿಯಿಂದ ಪ್ರವಾಸಿಗರಿಗೆ ಬಂಪರ್ ಆಫರ್, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ಒನ್ ಡೇ ಟ್ರಿಪ್

ಜೀವ ಪರಿಸರ ಮರುಸ್ಥಾಪನೆ ತ್ವರಿತಗೊಳಿಸುವಿಕೆ ಮತ್ತು ಜೀವ ವೈವಿಧ್ಯತೆಯ ಸಮೃದ್ದಿಕರಣ‌ ಚರ್ಚೆಗಳ ನಡೆಯಲಿವೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಭದ್ರತಾ ದೃಷ್ಟಿಯಿಂದ ನಾಳೆ(ಗುರುವಾರ) ಇಡೀ ಪಾರ್ಕ್ ಸಾರ್ವಜನಿಕರಿಗೆ ಪ್ರವೇಶವಿರೋದಿಲ್ಲವೆಂದು ಪಾರ್ಕ್‌ನ‌ ಅಧಿಕಾರಿಗಳು ಅಧಿಕೃತ ಪ್ರಕಟಣೆ ನೀಡಿದ್ದಾರೆ.

Latest Videos
Follow Us:
Download App:
  • android
  • ios