ಚಿಕ್ಕಬಳ್ಳಾಪುರ: 1 ವರ್ಷ ಸಾಲ ಮರುಪಾವತಿಸಿ ಎಂದು ರೈತರನ್ನು ಕೇಳುವಂತಿಲ್ಲ, ಡಿಸಿ ಖಡಕ್ ಆದೇಶ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯ ದಿಟ್ಟ ನಿರ್ಧಾರದಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಸಾಲ ಸೋಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೇ ರೈತ ಸಮಸ್ಯೆಗೆ ಸಿಲುಕಿದ್ದಾನೆ. ಇದರ ಮಧ್ಯೆಯೇ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತೆಗದುಕೊಂಡಿರೋ ನಿರ್ಧಾರ ರೈತರಿಗೆ ಆಶಾಕಿರಣವಾಗಿದೆ.
ವರದಿ- ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ(ನ.22): ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೂಡ ಬರಕ್ಕೆ ಹೊರತಾಗಿಲ್ಲ. ಮಳೆಯಿಲ್ಲದೇ ಬೆಳೆ ಬಾರದೇ, ಹಾಕಿರೋ ಬೆಳೆ ಸರಿಯಾಗಿ ಆಗದೇ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬೆನ್ನೆಲ್ಲೇ ಇಲ್ಲಿನ ಜಿಲ್ಲಾಧಿಕಾರಿಯ ದಿಟ್ಟ ನಿರ್ಧಾರದಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಸಾಲ ಸೋಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೇ ರೈತ ಸಮಸ್ಯೆಗೆ ಸಿಲುಕಿದ್ದಾನೆ. ಇದರ ಮಧ್ಯೆಯೇ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತೆಗದುಕೊಂಡಿರೋ ನಿರ್ಧಾರ ರೈತರಿಗೆ ಆಶಾಕಿರಣವಾಗಿದೆ.
ಹೌದು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಒಂದು ವರ್ಷದ ಅವಧಿಗೆ ಯಾವುದೇ ಬ್ಯಾಂಕ್‌ಗಳು ರೈತರಿಗೆ ಸಾಲ ಮರುಪಾವತಿಸುವಂತೆ ಕೇಳಬಾರದು ಹಾಗೂ ನೊಟೀಸ್ ನೀಡಬಾರದೆಂದು ಆದೇಶಿಸಿದ್ದಾರೆ.
ಕುರ್ಚಿ ಉಳಿಸಿಕೊಳ್ಳಲು ಸಿದ್ದು, ಕಿತ್ತುಕೊಳ್ಳಲು ಡಿಕೆಶಿ ಸಭೆ ಮೇಲೆ ಸಭೆ: ಸಿ.ಟಿ.ರವಿ
ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಬ್ಯಾಂಕ್‌ಗಳಿಗೆ ಆದೇಶ ರವಾನೆ
ಬರಗಾಲದ ಹಿನ್ನೆಲೆ, ಆರ್ ಬಿಐ ಮಾರ್ಗ ಸೂಚಿ ಅನ್ವಯ ಯಾವುದೇ ಬ್ಯಾಂಕ್ ಗಳು ರೈತರಿಗೆ ಹಣ ಮರುಪಾವತಿ ಮಾಡುವಂತೆ ಕಿರುಕುಳ ನೀಡುವಂತಿಲ್ಲ. ಪ್ರಸಕ್ತ ಸಾಲಿನ ವರ್ಷ ಬರಗಾಲ ಎಂದು ಘೋಷಣೆ ಮಾಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಯಾವುದೇ ರೈತರಿಗೆ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡುವಂತೆ ನೊಟೀಸ್ ನೀಡಬಾರದೆಂದು ಆದೇಶ ಮಾಡಿದ್ದಾರೆ. ಈ ಸಂಬಂಧ ಲೀಡ್ ಬ್ಯಾಂಕ್ ಮೂಲಕ ಎಲ್ಲಾ ಬ್ಯಾಂಕ್ ಗಳಿಗೆ ಆದೇಶ ರವಾನಿಸಿದ್ದಾರೆ.
ಬ್ಯಾಂಕ್ ಮಾತ್ರವಲ್ಲ ಖಾಸಗಿ ಫೈನಾನ್ಸ್‌ಗಳಿಗೂ ವಾರ್ನಿಂಗ್
ಇನ್ನೂ ಬರೀ ಬ್ಯಾಂಕ್ ಗಳಿಗೆ ಮಾತ್ರವಲ್ಲ, ಖಾಸಗಿ ಪೈನಾನ್ಸ್ ನವರು ಕೂಡ ರೈತರಿಗೆ ಕಿರುಕುಳ ನೀಡುಬಾರದು ಎಂದು ಜಿಲ್ಲಾಧಿಕಾರಿ ರವೀಂದ್ರ ಅವರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.. ಈಗಾಗಲೇ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ರೈತರಿಗೆ ಹಣ ಕಟ್ಟುವಂತೆ ಪೀಡಿಸುವಮತಿಲ್ಲ, ಒಂದು ವೇಳೆ ಡಿಮ್ಯಾಂಡ್ ಮಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!
ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ರೈತರು ಫುಲ್ ಖುಷ್
ಇನ್ನೂ ಜಿಲ್ಲಾಧಿಕಾರಿಯವರು ಬ್ಯಾಂಕ್ ಗಳಿಗೆ ಆದೇಶ ಮಾಡುತಿದ್ದಂತೆ ಈ ನಿರ್ಧಾರದಿಂದ ರೈತರು ನಿಟ್ಟುಸಿರುಬಿಡುವಂತಾಗಿದೆ. ಸಾಲಸೋಲ ಮಾಡಿದ್ದ ರೈತರಿಗೆ ಬಡ್ಡಿ ಕಟ್ಟೋದು ಕಷ್ಟವಾಗಿತ್ತು. ಆದ್ರೆ ಒಂದು ವರ್ಷದ ಅವಧಿ ಯಾವುದೇ ಕಂತುಗಳ ಕಟ್ಟದಂತೆ ಡಿಸಿ ಅವರ ಈ ಆದೇಶ ನಮಗೆ ಅನುಕೂಲವಾಗಿದೆ ಅಂತಾ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಮಾದರಿಯಲ್ಲೇ ಇಡೀ ರಾಜ್ಯಾದ್ಯಂತ ಈ ರೀತಿಯ ನಿರ್ಧಾರ ಮಾಡಿ ರೈತರಿಗೆ ಅನುಕೂಲ ಆಗುವಂತೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಏನೇ ಆಗಲಿ ಡಿಸಿ ರವೀಂದ್ರ ಅವರ ಈ ನಿರ್ಧಾರ ಕಷ್ಟದಲ್ಲಿರೋ ರೈತರಿಗೆ ವರದಾನವಾಗಿದೆ.