ದಾವಣಗೆರೆ(ಜೂ.05): ಇಲ್ಲಿನ ನಗರ ಪಾಲಿಕೆ ಮೇಯರ್‌-ಉಪ ಮೇಯರ್‌ ಸೇರಿ 50 ಸದಸ್ಯರ ಬ್ಯಾಂಕ್‌ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾ ಆಗಿ, ಮತ್ತೆ ಬ್ಯಾಂಕ್‌ಗೆ ವಾಪಸ್ಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಹಾಗೂ ಆಡಳಿತ-ವಿಪಕ್ಷ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 50 ಜನರ ಖಾತೆಗಳಿಗೆ 3 ಕೋಟಿಗೂ ಅಧಿಕ ಹಣ ಜಮಾ ಆಗಿದೆ. ಬ್ಯಾಂಕ್‌ನ ಸಿಬ್ಬಂದಿ ಹಣ ಜಮಾ ಮಾಡುವ ವೇಳೆ ಎರಡು ಸೊನ್ನೆ ಹೆಚ್ಚು ಸೇರಿಕೊಂಡಿದ್ದರಿಂದ ಈ ಅವಾಂತರವಾಗಿದೆ. ಇದರಿಂದಾಗಿ ಮೇಯರ್‌ಗೆ 16 ಸಾವಿರ, ಉಪ ಮೇಯರ್‌ಗೆ 10 ಸಾವಿರ, ಸದಸ್ಯರಿಗೆ ತಲಾ 6 ಸಾವಿರ ರು.ಗಳಂತೆ ನೀಡಬೇಕಾಗಿದ್ದ ಗೌರವಧನ ಮಾತ್ರ ಸಾವಿರದ ಬದಲು ಲಕ್ಷ ಲೆಕ್ಕದಲ್ಲಿ ಸಂದಾಯವಾಗಿದೆ. 

ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಎಚ್ಚೆತ್ತ ಬ್ಯಾಂಕ್‌ನವರು ಅನೇಕರ ಖಾತೆಯಲ್ಲಿದ್ದ ಹಣ ಬ್ಲಾಕ್‌ ಮಾಡಿದ್ದಾರೆ. ಪಾಲಿಕೆಗೆ ಮಾಹಿತಿ ನೀಡಿ ಸದಸ್ಯರಿಗೆ ಕರೆ ಮಾಡಿ, ಹಣವನ್ನು ವಾಪಸ್‌ ಪಡೆದಿದ್ದಾರೆ.