Asianet Suvarna News Asianet Suvarna News

ಚಾಮರಾಜಪೇಟೆ ಕ್ಷೇತ್ರದಲ್ಲಿ 1 ಲಕ್ಷ ಬಾಂಗ್ಲಾ ಮುಸ್ಲಿಮರಿದ್ದಾರೆ; ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1 ಲಕ್ಷ ಬಾಂಗ್ಲಾದೇಶದ ಮುಸ್ಲಿಮರು ಅಕ್ರಮವಾಗಿ ನೆಲೆಸಿದ್ದಾರೆ.

Bangladesh muslim living in Chamarajpet constituency says Sriram sena founder Pramod Muthalik sat
Author
First Published Aug 12, 2024, 4:09 PM IST | Last Updated Aug 12, 2024, 4:09 PM IST

ಬೆಂಗಳೂರು (ಆ.12): ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1 ಲಕ್ಷ ಬಾಂಗ್ಲಾದೇಶ ಮುಸ್ಲಿಮರು ಬಂದು ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಪೊಲೀಸರು ಓಡಿಸಬೇಕು. ಇಲ್ಲವಾದರೆ ಶ್ರೀರಾಮ ಸೇನೆಯಿಂದ ಒದ್ದು ಓಡಿಸಲಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಅಲ್ಲಿನ ಮುಸ್ಲಿಮರು ಹೊಡೆದು ತೀವ್ರವಾಗಿ ಘಾಸಿಗೊಳಿಸಿದ್ದಾರೆ. ಬಾಂಗ್ಲಾದಲ್ಲಿರುವ ಹಿಂದೂ ದೇವಾಲಯಗಳು, ಹಿಂದೂಗಳ ಮನೆಗಳು ಹಾಗೂ ಹಿಂದೂ ಜನರನ್ನು ಕೊಲೆ ಮಾಡಿ ನದಿಗೆ ಬೀಸಾಡಿದ್ದಾರೆ. ಇಂತಹ ಕ್ರೂರಿಗಳು ಅಕ್ರಮವಾಗಿ ನುಸುಳಿ ಬಂದು ನಮ್ಮ ರಾಜ್ಯದಲ್ಲಿಯೂ ನೆಲೆಸಿದ್ದು, ಕೂಡಲೇ ಅವರನ್ನು ವಾಪಸ್ ಓಡಿಸಬೇಕು ಬೆಂಗಳೂರು ಪೊಲೀಸ್ ಕಮಿಷನರ್‌ ಮುಂದೆ ಆಗ್ರಹಿಸಿದರು.

ಬಾಂಗ್ಲಾ ದಂಗೆಕೋರರ ವಿರುದ್ಧ ತಿರುಗಿಬಿದ್ದ ಹಿಂದೂಗಳು: ಬೀದಿಯಲ್ಲಿ ಮೊಳಗಿದ ಹರೇ ರಾಮ್ ಹರೇ ಕೃಷ್ಣ

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟ ಶ್ರೀರಾಮ ಸೇನೆ ಸಂಸ್ಥಾಪಕ  ಪ್ರಮೋದ್ ಮುತಾಲಿಕ್ ಅವರು, ಕರ್ನಾಟಕದದಲ್ಲಿರೋ ಬಾಂಗ್ಲಾ ಮುಸ್ಲಿಮರನ್ನ ವಾಪಸ್ ಅವರ ದೇಶಕ್ಕೆ ಓಡಿಸಬೇಕು. ಬಾಂಗ್ಲಾದಲ್ಲಿ ಹಿಂದೂ ಮುಸ್ಲಿಂ ಜಗಳ ನಡೀತಿಲ್ಲ. ಮೀಸಲಾತಿ ವಿಚಾರಕ್ಕೆ ಹೋರಾಟ ಆಗ್ತಿದೆ. ಆದರೂ ಕೂಡ ಅಲ್ಲಿ ಹಿಂದೂಗಳ ಹತ್ಯೆ ಆಗ್ತಿದೆ. ದೇವಸ್ಥಾನಗಳ ಮೇಲೆ ದಾಳಿ‌ ನಡೆಸಲಾಗ್ತಿದೆ. ಇಲ್ಲಿರೋ ಬಾಂಗ್ಲಾ ಮುಸ್ಲಿಮರನ್ನ ನಾವು ಓಡಿಸಬೇಕು. ಕೆಲವರು ವೋಟ್ ಬ್ಯಾಂಕ್‌ಗಾಗಿ ಅಕ್ರಮವಾಗಿ ಬಾಂಗ್ಲಾದಿಂದ ಬಂದ ಮುಸ್ಲಿಮರಿಗೆ ಆಧಾರ್ ಕಾರ್ಡ್, ಐಡಿ ಕಾರ್ಡ್ ಮಾಡಿಸಿ ಕೊಟ್ಟಿದ್ದಾರೆ. ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದನ್ನು ಬಿಟ್ಟು ನಿಶ್ಕ್ರಿಯರಾಗಿದ್ದಾರೆ.

ಇನ್ನುಮುಂದೆ ನಾವು ಅಕ್ರಮವಾಗಿ ಬಂದ ಬಾಂಗ್ಲಾ ವಲಸಿಗರಿಗೆ ಸ್ಥಳೀಯವಾಗಿ ವಸತಿ ಸೌಲಭ್ಯಗಳನ್ನು ಕೊಡುವ ರಾಜಕೀಯ ನಾಯಕರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅಂಥವರ ವಿರುದ್ಧ ಹೋರಾಟ ಮಾಡುವುದಕ್ಕೆ ನಾವು ಮನವಿ ಮಾಡೋಲ್ಲ. ನಾವು ಸೀದಾ ಬಾಂಗ್ಲಾ ಮುಸ್ಲಿಮರನ್ನ ಒದ್ದು ಓಡಿಸ್ತೀವಿ. ಚಾಮರಾಜಪೇಟೆ ಕ್ಷೇತ್ರದಲ್ಲಿ ಬರೋಬ್ಬರಿ 1 ಲಕ್ಷ ಬಾಂಗ್ಲಾ ಮುಸ್ಲಿಮರಿದ್ದಾರೆ. ರಾಜಕಾರಣಿಗಳು ಇವರ ಬಗ್ಗೆ ಕ್ರಮ ಕೈಗೊಳ್ಳಬೇಕು. ಪೊಲೀಸರು ಆಂತರಿಕ ಭದ್ರತೆ ಬಗ್ಗೆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೂಗಳು ಬಡಿದಾಡಿಕೊಂಡಿದ್ದರೆ ಕ್ಷುದ್ರ ಮನಸ್ಸಿನವರಿಗೆ ಲಾಭ: ದತ್ತಾತ್ರೇಯ ಹೊಸಬಾಳೆ

ರಾಜಕಾರಣಿಗಳ ಹಿಂದೆ ಸುತ್ತಾಡಿ ಪ್ರಮೋಷನ್, ಪೋಸ್ಟಿಂಗ್ ಗೋಸ್ಕರ ಕೆಲಸ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬಾಂಗ್ಲಾ ಮುಸ್ಲಿಮರಿದ್ದಾರೆ. ಪೊಲೀಸರು ಖಾಲಿ ಮಾಡ್ಸಿಲ್ಲ ಅಂದ್ರೆ ನಾವೇ ಒದ್ದು ಓಡಿಸ್ತೀವಿ. ನಮಗೆ ಗುಂಡು ಹೊಡೀತಾರೋ ಹೊಡೀಲಿ. ನಾವು ಅವರನ್ನ ಒದ್ದು ಓಡಿಸ್ತೀವಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

Latest Videos
Follow Us:
Download App:
  • android
  • ios