ಬಂಗಾರಪೇಟೆ (ಸೆ.02): ವಿಕಲಚೇತನ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪ ಹೇಳಿ ಆಟೋ ಚಾಲಕನೊಬ್ಬನನ್ನು ಕೊಲೆ ಮಾಡಲು ನಡೆಸಿದ ಯತ್ನವನ್ನು ಸಬ್‌ಇನ್ಸ್‌ಪೆಕ್ಟರ್‌ ಜಗದೀಶ್‌ರೆಡ್ಡಿ ತಪ್ಪಿಸಿ ಆಟೋ ಚಾಲಕನನ್ನು ರಕ್ಷಿಸಿದ್ದಾರೆ.

ಎಸ್‌ಐ ರಕ್ಷಿಸಿದ ಆಟೋ ಚಾಲಕನನ್ನು ಪಟ್ಟಣದ ಟಿಪ್ಪುನಗರದ ಸಿಬ್ಗತ್‌ ಉಲ್ಲಾ ಖಾನ್‌ ಎಂದು ಗುರುತಿಸಲಾಗಿದೆ. ಟಿಪ್ಪುನಗರದ ಬಳಿ ಮಂಗಳವಾರ ಮಧ್ಯಾಹ್ನ ಆಟೋ ಚಾಲಕನ ಬಳಿ ಬಂದ ಇಬ್ಬರು ಅಪರಿಚಿತರು, ವಿಕಲಚೇತನ ವ್ಯಕ್ತಿಯನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಬಾಡಿಗೆ ಗೊತ್ತುಮಾಡಿದ್ದಾರೆ.

ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದ ಮೂವರು ಅರೆಸ್ಟ್‌...

ಕೋಲಾರ ಮುಖ್ಯ ರಸ್ತೆಯ ಅನಿಗಾನಹಳ್ಳಿ ಗೇಟ್‌ ಬಳಿ ಆಟೋ ಹೋಗುತ್ತಿದ್ದಾಗ ಆರೋಪಿಗಳು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಆಟೋ ನಿಲ್ಲಿಸಿದ್ದಾರೆ. ರಸ್ತೆಯಲ್ಲಿ ಜನ ಸಂಚಾರವಿಲ್ಲದಿದ್ದನ್ನು ಗಮನಿಸಿದ ಬಳಿಕ ಚಾಲಕನನ್ನು ಬೆಲ್ಟ್‌ ನಿಂದ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದಾಗ ಇದೇ ಮಾರ್ಗದಲ್ಲಿ ಬರುತ್ತಿದ್ದ ಬಂಗಾರಪೇಟೆಯ ಪಿಎಸೈ ಜಗದೀಶ್‌ ರೆಡ್ಡಿ ಅವರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ.

ಕೂಡಲೇ ಆರೋಪಿಗಳನ್ನು ಬೆನ್ನಟ್ಟಿಬಂಧಿಸಿದ್ದಾರೆ. ಚಾಲಕನ ಕೊಲೆ ಯತ್ನಕ್ಕೆ ಕಾರಣ ತಿಳಿದುಬಂದಿನ. ಬಂಗಾರಪೇಟೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.