ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಹೋಟೆಲ್ ಓಪನ್ ಮಾಡುವ ವಿಚಾರವಾಗಿ ನಗರ ಪೊಲೀಸ್ ಕಮೀಷನರ್ ಸಿ.ಎಚ್‌.ಪ್ರತಾಪ್‌ ರೆಡ್ಡಿ ಪ್ರತಿಕ್ರಿಯಿಸಿದ್ದು, ಈ ಮೊದಲೇ ರಾತ್ರಿ ಒಂದು ಗಂಟೆಯವರೆಗೆ ಓಪನ್ ಮಾಡಲು ಆದೇಶ ಇದೆ‌. ಮೇಘರಿಕ್ ಕಮೀಷನರ್ ಆಗಿದ್ದ ವೇಳೆಯೇ ಆದೇಶ ಹೊರಡಿಸಿದ್ದರು.

ಬೆಂಗಳೂರು (ಅ.15): ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಹೋಟೆಲ್ ಓಪನ್ ಮಾಡುವ ವಿಚಾರವಾಗಿ ನಗರ ಪೊಲೀಸ್ ಕಮೀಷನರ್ ಸಿ.ಎಚ್‌.ಪ್ರತಾಪ್‌ ರೆಡ್ಡಿ ಪ್ರತಿಕ್ರಿಯಿಸಿದ್ದು, ಈ ಮೊದಲೇ ರಾತ್ರಿ ಒಂದು ಗಂಟೆಯವರೆಗೆ ಓಪನ್ ಮಾಡಲು ಆದೇಶ ಇದೆ‌. ಮೇಘರಿಕ್ ಕಮೀಷನರ್ ಆಗಿದ್ದ ವೇಳೆಯೇ ಆದೇಶ ಹೊರಡಿಸಿದ್ದರು. ಕೆಲವು ಕಡೆ ಠಾಣಾ ವ್ಯಾಪ್ತಿಯಲ್ಲಿ ಒಂದೊಂದು ಟೈಮ್ ಇದೆ ಅನ್ನೋ ಆರೋಪ ಇದೆ. ಮಾತ್ರವಲ್ಲದೇ ಕೆಲವು ಕಡೆ 11 ಗಂಟೆ, 12 ಗಂಟೆಗೆ ಮುಚ್ಚಿಸ್ತಾರೆ ಅನ್ನೋ ಆರೋಪ ಇದೆ. ಅದರಿಂದ ರಾತ್ರಿ ವೇಳೆ ಒಂದು ಗಂಟೆಯವರೆಗೆ ಓಪನ್ ಮಾಡಲು ಆದೇಶ ಹೊರಡಿಸಲಾಗಿದೆ ಎಂದರು.

ಇನ್ನು ವಿಶೇಷ ಸಂದರ್ಭದಲ್ಲಿ ಬಾರ್ ರೆಸ್ಟೋರೆಂಟ್ ಮುಚ್ಚಲು ಆದೇಶ ಇರುತ್ತೆ. ಹೋಟೆಲ್, ಬಾರ್ ರೆಸ್ಟೋರೆಂಟ್‌ಗಳು ಸಹ ಒಂದು ಗಂಟೆಯವರೆಗೆ ತೆರೆಯಲು ಅವಕಾಶ ಇದೆ. ಹೊಟೇಲ್ ಉದ್ಯಮದವರು 24 ಗಂಟೆಯೂ ಹೊಟೇಲ್ ತೆರೆಯಲು ಅನುಮತಿ ಕೇಳಿದ ವಿಚಾರವಾಗಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಿ. ನಾವು ರಾತ್ರಿ ಒಂದು ಗಂಟೆಯವರೆಗೆ ತೆರೆಯಲು ಅವಕಾಶ ಕೊಟ್ಟಿದ್ದೇವೆ ಎಂದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

Bengaluru Rain: ಸಿಲಿಕಾನ್ ಸಿಟಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಇನ್ಮುಂದೆ ರಾತ್ರಿ 1ರವರೆಗೂ ಹೋಟೆಲ್‌ಗಳು ಓಪನ್‌: ರಾಜಧಾನಿಯ ಹೋಟೆಲ್‌ಗಳಿಗೆ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಸಿಹಿ ಸುದ್ದಿ ನೀಡಿದ್ದು, ತಡರಾತ್ರಿ ರಾತ್ರಿ 1ರವರೆಗೆ ಅಭಾದಿತವಾಗಿ ವಹಿವಾಟು ನಡೆಸಲು ಅನುಮತಿ ನೀಡಿದ್ದಾರೆ. ಈ ಸಂಬಂಧ ಶುಕ್ರವಾರ ಸುತ್ತೋಲೆ ಹೊರಡಿಸಿರುವ ನಗರ ಪೊಲೀಸ್‌ ಆಯುಕ್ತರು, ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6ರಿಂದ ರಾತ್ರಿ 1ರವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಚಾರವನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ ಹೋಟೆಲ್‌ಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವಂತೆ ಡಿಸಿಪಿಗಳಿಗೆ ಆಯುಕ್ತರು ಸೂಚಿಸಿದ್ದಾರೆ. ಸುನೀಲ್‌ ಕುಮಾರ್‌ ಅವರು ಆಯುಕ್ತರಾಗಿದ್ದಾಗ ಮೆಜೆಸ್ಟಿಕ್‌ ಹಾಗೂ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣಗಳಲ್ಲಿ 24 ತಾಸು ವಹಿವಾಟು ನಡೆಸಲು ಹೋಟೆಲ್‌ಗಳಿಗೆ ಅವಕಾಶ ನೀಡಿದ್ದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಜೆಸ್ಟಿಕ್‌ ಹಾಗೂ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ ಹೋಟೆಲ್‌ಗಳಿಗೆ ದಿನ ಪೂರ್ತಿ ಕಾರ್ಯನಿರ್ವಹಿಸಲು ಸುನೀಲ್‌ ಕುಮಾರ್‌ ಅನುಮತಿ ನೀಡಿದ್ದರು. 

Bengaluru: ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ!

ಆದರೆ ಇತ್ತೀಚೆಗೆ ಪೊಲೀಸರು, ರಾತ್ರಿ 10ರ ಬಳಿಕ ಹೋಟೆಲ್‌ಗಳನ್ನು ಬಂದ್‌ ಮಾಡಿಸುತ್ತಿದ್ದರು. ಇದರಿಂದ ಹೋಟೆಲ್‌ಗಳಿಗೆ ನಷ್ಟಉಂಟಾಗುತ್ತಿತ್ತು. ಇನ್ನು ಕೊರೋನಾ ಸೋಂಕು ಬಳಿಕ ಹೋಟೆಲ್‌ಗಳಿಗೆ ಪೊಲೀಸರ ನಿರ್ಬಂಧ ಹೆಚ್ಚಾಯಿತು. ಪೊಲೀಸರ ಕಿರುಕುಳದಿಂದ ಬೇಸತ್ತ ಹೋಟೆಲ್‌ ಮಾಲಿಕರ ಸಂಘವು, ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರನ್ನು ಭೇಟಿಯಾಗಿ 2016ರ ಆದೇಶದಂತೆ ರಾತ್ರಿ 1 ಗಂಟೆವೆರೆಗೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ಹೋಟೆಲ್‌ಗಳನ್ನು ಅವಧಿ ಮುಂಚೆ ಬಂದ್‌ ಮಾಡಿಸದಂತೆ ಪೊಲೀಸರಿಗೆ ಕಟ್ಟಾಜ್ಞೆ ಮಾಡಿದ್ದಾರೆ.