Asianet Suvarna News Asianet Suvarna News

Mandya ಬರೋಬ್ಬರಿ 1.91 ಲಕ್ಷಕ್ಕೆ ಟಗರು ಮಾರಾಟ : ದಾಖಲೆ ಸೃಷ್ಟಿ

 • ತಾಲೂಕಿನ ದೇವಿಪುರ ಗ್ರಾಮದ ರೈತನೊಬ್ಬ ತಾನು ಸಾಕಿದ ಬಂಡೂರು ತಳಿಯ ಟಗರನ್ನು ಬರೋಬ್ಬರಿ 1.91 ಲಕ್ಷ ರು.ಗೆ ಮಾರಾಟ
 • ಮಾರಾಟ ಮಾಡಿ ದಾಖಲೆ ಸೃಷ್ಟಿಸುವುದರ ಜೊತೆಗೆ ತಮಟೆಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ 
bandur sheep sold for nearly rs 2 lakh in mandya snr
Author
Bengaluru, First Published Nov 8, 2021, 1:33 PM IST
 • Facebook
 • Twitter
 • Whatsapp

ಮಳವಳ್ಳಿ (ನ.08):  ತಾಲೂಕಿನ ದೇವಿಪುರ ಗ್ರಾಮದ ರೈತನೊಬ್ಬ (Farmer) ತಾನು ಸಾಕಿದ ಬಂಡೂರು ತಳಿಯ ಟಗರನ್ನು (Sheep) ಬರೋಬ್ಬರಿ 1.91 ಲಕ್ಷ ರು.ಗೆ ಮಾರಾಟ ಮಾಡಿ ದಾಖಲೆ (Record) ಸೃಷ್ಟಿಸುವುದರ ಜೊತೆಗೆ ತಮಟೆಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಟ್ಟಿದ್ದಾರೆ. 

ಮದ್ದೂರು (Maddur) ತಾಲೂಕಿನ ಬಿದರ ಕೋಟೆ ಗ್ರಾಮದ ಕಾಂತರಾಜು ಎಂಬ ಯುವ ರೈತ ಟಗರು ಖರೀದಿಸಿದ್ದಾರೆ. ಸಣ್ಣಪ್ಪ ಕಳೆದ 2 ವರ್ಷಗಳ ಹಿಂದೆ ಬಂಡೂರು ತಳಿಯ (Bandur) ಅಭಿ ವೃದ್ಧಿಗಾಗಿ ಮದ್ದೂರು (Maddur) ತಾಲೂಕಿನ ವಳಗೆರೆ ಹಳ್ಳಿ ಗ್ರಾಮದ ಸೋಮಣ್ಣ ಎಂಬುವವರಿಂದ 1.5 ಲಕ್ಷ ರು. ಕೊಟ್ಟು ಖರೀದಿ (Purchase) ಮಾಡಿದ್ದರು. 

ತಮ್ಮ ಮನೆಯಲ್ಲಿಯೇ ಸಾಕಷ್ಟು ಬಂಡೂರು ತಳಿ ಮರಿಗಳನ್ನು ಹುಟ್ಟಿದ್ದರಿಂದ ಒತ್ತಾಯದ ಮೇರೆಗೆ 1.91 ಲಕ್ಷ ರು.ಗೆ ಮಾರಾಟ ಮಾ ಡಿದ್ದಾರೆ. ಕಳೆದ 35 ವರ್ಷಗಳಿಂದ ಕುರಿ (Sheep) ಸಾಕಾಣಿಕೆ ಮಾಡುತ್ತಿರುವ ಸಣ್ಣಪ್ಪ ಶುದ್ಧ ಬಂಡೂರು ತಳಿಯನ್ನು ರಕ್ಷಣೆ ಮಾಡುವುದರ ಜೊತೆಗೆ ಲಕ್ಷಾಂತ ರು. ಆದಾಯ (Income) ಗಳಿಸುತ್ತಿ ದ್ದಾರೆ. 

ಬಂಡೂರು ತಳಿ ಕುರಿ ಮರಿಗಳು ಸುಮಾರು 30ರಿಂದ 50 ಸಾವಿರಕ್ಕೂ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ, ಬಂಡೂರು ತಳಿ ಹೆಚ್ಚಾಗಿ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ 1.91 ಲಕ್ಷಕ್ಕೆ ಟಗರನ್ನು ಮಾರಾಟ ಮಾಡಲಾಗಿದೆ, ನಮ್ಮ ಜೊತೆ ಯಲ್ಲಿದ್ದುಕೊಂಡು ಬೆಳೆಯುವ ಕುರಿಗಳಾಗಿದ್ದು, ಅತಿಯಾದ ಬಿಸಿಲು (Hot Weather) ಮತ್ತು ಅತಿ ಮಳೆ (Rain) ಯಿಂದ ರಕ್ಷಣೆ ಮಾಡುವುದರ ಜೊತೆಗೆ ಸ್ವಚ್ಛತೆಯಿಂದ ನೋಡಿಕೊಳ್ಳಬೇಕು, ಪ್ರತಿ ದಿನವೂ ವಿವಿಧ ರೀತಿ ತಿಂಡಿಗಳನ್ನು ನೀಡಬೇಕು, ಬಂಡೂರು ತಳಿಯ ಟಗರನ್ನು ಮಾಂಸಕ್ಕಾಗಿ (Meat) ತೆಗೆದುಕೊಂಡು ಹೋಗುವು ಕ್ಕಿಂತ ತಳಿಯ ಅಭಿವೃದ್ಧಿಗಾಗಿಯೇ ಖರೀದಿ ಸುವವರು ಹೆಚ್ಚಾಗಿರುವುದರಿಂದ ಬಂಡೂ ರು ತಳಿ ಟಗರಿಗೆ ಬೆಲೆ (Price) ಹೆಚ್ಚಾಗಿದೆ ಎಂದು ಸಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. 

ಟಗರು ಖರೀದಿಸಿದ ಕಾಂತರಾಜು ಮಾತ ನಾಡಿ, ತಾವು ಈಗಾಗಲೇ 25ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದೇವೆ. ವಿಶ್ವ ಪ್ರಸಿದ್ಧಿ ಪಡೆದಿರುವ ಬಂಡೂರು ತಳಿಯನ್ನು ಅಭಿ ವೃದ್ಧಿ ಪಡಿಸಬೇಕೆಂಬ ಆಕಾಂಕ್ಷೆಯೊಂದಿಗೆ 1.91 ಲಕ್ಷ ರು. ಕೊಟ್ಟು ಬಂಡೂರು ತಳಿಯ ಟಗರನ್ನು ಖರೀದಿಸಲಾಗಿದೆ. ಹೆಚ್ಚು ಹಣ ಕೊಟ್ಟೆ ಎನ್ನುವುದಕ್ಕಿಂತ ಇದರಿಂದ ಲಕ್ಷಾಂತರ ರು. ಲಾಭ ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ, ಮಳವಳ್ಳಿ ತಾಲೂಕಿನ (Malavalli Taluk) ಬಹುತೇಕ ಕಡೆಗಳಲ್ಲಿ ಬಂಡೂರು ಕುರಿಯನ್ನು (Sheep) ಸಾಕಾಣಿಕೆ ಮಾಡಲಾಗುತ್ತಿದ್ದು, ಉತ್ತಮ ಟಗರನ್ನು ಗುರುತಿಸಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.

 ಸಣ್ಣಪ್ಪ ಮನೆಯಲ್ಲಿ ಟಗರನ್ನು ಹೂವುಗಳಿಂದ ಶೃಂಗರಿಸಿ, ಹೂವು ಹಣ್ಣು ಇಟ್ಟು ಪೂಜೆ ಸಲ್ಲಿಸಲಾಯಿತು. ಟಗರು ಕೊಡುವವ ರು ಮತ್ತು ಕೊಂಡುಕೊಳ್ಳುವವರು ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ನಂತರ ತಮಟೆಯೊಂದಿಗೆ ದೇವಿಪುರದಿಂದ ತಳಗವಾದಿಯ ಗ್ರಾಮದವರೆಗೆ ಮೆರವಣಿಗೆ ನಡೆಸಲಾಯಿತು. 

ಟಗರನ್ನು ನೋಡಲು ವಿವಿಧ ಗ್ರಾಮಗಳಿಂದ ನೂರಾರು ರೈತರು ಆಗಮಿಸಿ ರೈತ (Farmer) ಸಣ್ಣಪ್ಪ ಅವರಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದರು 

 • ಬಂಡೂರು ತಳಿಯ ಟಗರನ್ನು ಬರೋಬ್ಬರಿ 1.91 ಲಕ್ಷ ರು.ಗೆ ಮಾರಾಟ ಮಾಡಿ ದಾಖಲೆ ಸೃಷ್ಟಿ
 • ದಾಖಲೆ ಸೃಷ್ಟಿಸುವುದರ ಜೊತೆಗೆ ತಮಟೆಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಟ್ಟಿದ್ದಾರೆ
 • ದಾಖಲೆ ಸೃಷ್ಟಿಸುವುದರ ಜೊತೆಗೆ ತಮಟೆಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಟ್ಟಿದ್ದಾರೆ
 • ಸಣ್ಣಪ್ಪ ಕಳೆದ 2 ವರ್ಷಗಳ ಹಿಂದೆ ಬಂಡೂರು ತಳಿಯ ಅಭಿ ವೃದ್ಧಿಗಾಗಿ ಖರೀದಿಸಿದ್ದರು
 • ಸೋಮಣ್ಣ ಎಂಬುವವರಿಂದ 1.5 ಲಕ್ಷ ರು. ಕೊಟ್ಟು ಖರೀದಿ ಮಾಡಿದ್ದರು
 •  ಶುದ್ಧ ಬಂಡೂರು ತಳಿಯನ್ನು ರಕ್ಷಣೆ ಮಾಡುವುದರ ಜೊತೆಗೆ ಲಕ್ಷಾಂತ ರು. ಆದಾಯ 
Follow Us:
Download App:
 • android
 • ios