ಬಳ್ಳಾರಿಯ ಮರುಳ ಸಿದ್ಧಾಶ್ರಮದ ನಂಜುಂಡೇಶ್ವರರು ನುಡಿದ ಭವಿಷ್ಯ ಯಾವಾಗಲು ನಿಜವಾಗುತ್ತದೆ. ಈ ಬಾರಿಯೂ  ಅವರು ಭವಿಷ್ಯ ನುಡಿದಿದ್ದು ಅದರಲ್ಲೇನಿದೆ..?

ಬಳ್ಳಾರಿ (ಡಿ.20) : ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಇದೇ ಡಿಸೆಂಬರ್ 22 ಹಾಗೂ 27 ರಂದು ನಡೆಯುತ್ತಿದೆ. ಇದೇ ವೇಳೆ ರಾಜಕೀಯ ಬಿರುಸುಗೊಂಡಿದ್ದು ಈಗಾಗಲೇ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. 

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎನ್ನುವ ಬಗ್ಗೆ ಇಲ್ಲಿ ನಿಖರವಾದ ಭವಿಷ್ಯ ಹೇಳಲಾಗುತ್ತದೆ. .

ಬಳ್ಳಾರಿ ಜಿಲ್ಲೆಯ ಇದೇ ತಾಲೂಕಿನ ನಾಗೇನಹಳ್ಳಿಯ ಮರುಳ ಸಿದ್ದಾಶ್ರಮದ ನಂಜುಡೇಶ್ವರ ಸ್ವಾಮೀಜಿ ಗೆಲ್ಲುವ ಅಭ್ಯರ್ಥಿಗಳ ಹೆಸರಿನ ಮೊದಲ ಅಕ್ಷರ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಟ್ಟಾ ಹಿಂದುತ್ವವಾದಿ ಟಿಕೆಟ್‌ಗಾಗಿ ಫೈಟ್

100% 80% 70% 50% ಎನ್ನುವ ಲೆಕ್ಕಾಚಾರದ ಅಡಿಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ವಿಶೇಷವಾಗಿ ಪರ್ಸೆಂಟೆಜ್ ನೀಡಿದ್ದಾರೆ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಈ ಸ್ವಾಮೀಜಿಯ ಭವಿಷ್ಯ ಕೇಳಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಅಚ್ಚರಿ ಮತ್ತು ಬೆಚ್ಚಿಬೀಳುತ್ತಿದ್ದಾರೆ. 

ಹೆಸರಿನ ಮೊದಲ ಅಕ್ಷರದ ಮೂಲಕ ಗೆಲುವಿನ ರಹಸ್ಯ ಹೇಳಲಾಗುತ್ತದೆ. ಈ ಹಿಂದೆಯೂ ಇವರ ಭವಿಷ್ಯ ನಿಜವಾಗಿದ್ದು ಇದೀಗ ಮತ್ತೆ ಚುನಾವಣೆ ಸಂದರ್ಭದಲ್ಲಿ ಭವಿಷ್ಯ ಹೇಳಲಾಗಿದೆ.