ಪ್ರೀತಿಸಿದವರ ಮದುವೆಗೆ ಪೋಷಕರ ವಿರೋಧ; ಜಮೀನಲ್ಲಿ ವಿಷ ಸೇವಿಸಿ ಪ್ರಾಣಬಿಟ್ಟ ಯುವ ಪ್ರೇಮಿಗಳು!
ಪ್ರೀತಿ ಮಾಡಿದ್ದೇವೆ ಮದುವೆ ಮಾಡಿಕೊಡಿ ಎಂದರೂ ಮನೆಯವರು ಒಪ್ಪದೇ ವಿರೋಧ ಮಾಡಿದ್ದಾರೆ. ಇದರಿಂದ ಮನನೊಂದ ಯುವ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಳ್ಳಾರಿ (ಆ.02): ರಾಜ್ಯದ ಗಣಿನಾಡು ಬಳ್ಳಾರಿಯಲ್ಲಿ ಈಗಲೂ ಜಾತಿ ಆಚರಣೆಗಳು ಜಾರಿಯಲ್ಲಿದ್ದು, ಪ್ರೀತಿ ಪ್ರೇಮಕ್ಕೆ ವಿರೋಧ ಮಾಡುವವರ ಸಂಖ್ಯೆಯೇ ಅಧಿಕವಾಗಿದೆ. ಆದರೂ, ಇಬ್ಬರು ಯುವ ಜೋಡಿಗಳು ಪರಸ್ಪರ ಪ್ರೀತಿ ಮಾಡಿದ್ದು, ತಮ್ಮನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಪೋಷಕರು ವಿರೋಧಿಸಿದ ಬೆನ್ನಲ್ಲಿಯೇ ಜಮೀನಿನ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಸಿರುಗುಪ್ಪ- ಆದೋನಿ ರಸ್ತೆಯ ಜಮೀನೊಂದರಲ್ಲಿ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪ್ರೇಮಿಗಳನ್ನು ರಾಜ (23) ಹಾಗೂ ಪವಿತ್ರ (20) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಸಿರಗುಪ್ಪ ಪಟ್ಟಣದ ನಿವಾಸಿಗಳಾಗಿದ್ದಾರೆ. ಇಬ್ಬರು ಪ್ರೇಮಿಗಳು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದಾರೆ. ನಂತರ, ಮದುವೆ ಮಾಡಿಕೊಳ್ಳಲೂ ನಿರ್ಧರಿಸಿದ್ದು, ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರ ಬಳಿ ಮನವಿ ಮಾಡಿದ್ದಾರೆ. ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ರಾಜ ಮತ್ತು ಪವಿತ್ರಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಇನ್ನು ಬೆಳ್ಳಂಬೆಳಗ್ಗೆ ಇಬ್ಬರೂ ಬೈಕ್‌ನಲ್ಲಿ ಸಿರುಗುಪ್ಪ ಪಟ್ಟಣದಿಂದ ಅದೋನಿ ರಸ್ತೆಯಲ್ಲಿರುವ ಜಮೀನಿನ ಬಳಿ ಹೋಗಿದ್ದಾರೆ. ಅಲ್ಲಿ ಕೆಲಹೊತ್ತು ಕುಳಿತುಕೊಂಡು ಮಾತನಾಡಿ, ನಮ್ಮ ಎರಡೂ ಮನೆಯವರು ಮದುವೆಗೆ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ, ನಾವು ಮದುವೆ ಮಾಡಿಕೊಂಡರೂ ನೆಮ್ಮದಿಯಾಗಿ ಜೀವನ ಮಾಡಲು ಬಿಡುವುದಿಲ್ಲ. ನಾವು ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಾಜ ತಂದಿದ್ದ ವಿಷವನ್ನು ಇಬ್ಬರೂ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.
ಫಾತಿಮಾಳ 9 ವರ್ಷದ ಕೌಟುಂಬಿಕ ಸಂಸಾರ ಕೊಲೆಯಲ್ಲಿ ಅಂತ್ಯ; ಗಂಡನಿಂದಲೇ ಭೀಕರ ಹತ್ಯೆಯಾದ ಹೆಂಡತಿ!
ಎಂದಿನಂತೆ ಬೆಳಗ್ಗೆ ಜಮೀನಿನ ಕೆಲಸಕ್ಕೆ ಹೋದ ರೈತರಿಗೆ ಮೃತದೇಹಗಳು ಕಾಣಿಸಿವೆ. ಆಗ ಇಬ್ಬರೂ ಪ್ರೇಮಿಗಳು ವಿಷ ಸೇವಿಸಿ ಪ್ರಾಣ ಬಿಟ್ಟಿರುವ ಮೃತ ದೇಹವನ್ನು ನೋಡಿದ್ದಾರೆ. ಆದರೆ, ಇಬ್ಬರೂ ಸಾಯುವಾಗ ಭಾರಿ ದೊಡ್ಡ ಮಟ್ಟದಲ್ಲಿ ಒದ್ದಾಡಿ ಒಂದೊಂದು ದಿಕ್ಕಿಗೆ ಒಬ್ಬರು ಸತ್ತು ಬಿದ್ದಿದ್ದಾರೆ. ಇನ್ನು ಸಾವಿಗೆ ಮುನ್ನ ಸಂಕಟ ತಾಳಲಾರದೇ ನೀರಿಗಾಗಿ ಹಾಹಾಕಾರವನ್ನೂ ಮಾಡಿದ್ದಾರೆ. ಆದರೆ, ಬದುಕಲು ಅವಕಾಶವಿಲ್ಲದೇ ದಾರುಣವಾಗಿ ಬಾಯಲ್ಲಿ ನೊರೆ ಬಂದು ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಸಿರಗುಪ್ಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡದ್ದಾರೆ. ನಂತರ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.